LATEST NEWS
ಸೂರ್ಯಕುಮಾರ್ ಅಬ್ಬರಕ್ಕೆ ‘ಬಾರಿ ಎಡ್ಡೆ ಗೊಬ್ಬಿಯ’ ಸೂರ್ಯ ಎಂದ ಕೆ ಎಲ್ ರಾಹುಲ್
ಮುಂಬೈ ಜನವರಿ 8 : ರಾಜ್ ಕೋಟ್ ನಲ್ಲಿ ನಡೆದ ಶ್ರೀಲಂಕಾ ವಿರುದ್ದದ ಅಂತಿಮ ಪಂದ್ಯದಲ್ಲಿ ಟೀಂ ಇಂಡಿಯಾದ ಮಿಸ್ಟರ್ 360 ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ನೋಡಿ ಕನ್ನಡಿಗ ಕೆ.ಎಲ್ ರಾಹುಲ್ ಬಾರಿ ಎಡ್ಡೆ ಗೊಬ್ಬಿಯ ಸೂರ್ಯ (ತುಂಬಾ ಚೆನ್ನಾಗಿ ಆಟವಾಡಿದೆ) ಎಂದು ಸಾಮಾಜಿಕ ಜಾಲತಾಣದ ಮೂಲಕ ತುಳು ಭಾಷೆಯಲ್ಲಿ ಪ್ರಶಂಸಿದ್ದರು.
ಶ್ರೀಲಂಕಾ ವಿರುದ್ದ ನಡೆದ ಅಂತಿಮ ಪಂದ್ಯದಲ್ಲಿ ಸೂರ್ಯಕುಮಾರ್ ಅವರ ಅಬ್ಬರದ ಶತಕಕ್ಕೆ ಅಭಿಮಾನಿಗಳು ದಂಗಾಗಿದ್ದರು,. ಇದೀಗ ಟೀಂ ಇಂಡಿಯಾದ ಆಟಗಾರ ಕೆಎಲ್ ರಾಹುಲ್ ಸೂರ್ಯಕುಮಾರ್ ಗೆ ತುಳುವಿನಲ್ಲಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಸೂರ್ಯ ಕುಮಾರ್ ಮದುವೆ ಆಗಿರುವ ದೀವಿಶಾ ಶೆಟ್ಟಿ ಕರಾವಳಿಯವಳು ಹೀಗಾಗಿ ಕೆ ಎಲ್ ರಾಹುಲ್ ತುಳುವಿನಲ್ಲಿ ಬಾರಿ ಎಡ್ಡೆ ಗೊಬ್ಬಿಯ ಸೂರ್ಯ ಎಂದು ತಿಳಿಸಿದ್ದಾರೆ. ಈ ಪೋಸ್ಟ್‌ಗೆ ಕಾಮೆಂಟ್ ಮಾಡಿರುವ ಸೂರ್ಯ ಕುಮಾರ್ ಅವರ ಪತ್ನಿ ದೀವಿಶಾ ಶೆಟ್ಟಿ ಚೂರ್ ತುಳು ಕಲ್ಪಾವೊಡು ಆರೆಗ್ ನನ (ಇನ್ನು ಸ್ವಲ್ಪ ತುಳು ಕಲಿಸಬೇಕು ಅವರಿಗೆ) ಎಂದು ರಾಹುಲ್ ಪೋಸ್ಟ್‌ಗೆ ಕಾಮೆಂಟ್ ಹಾಕಿ ಮಾಡಿದ್ದಾರೆ.