LATEST NEWS
ತಂತಿ ಬೇಲಿಯಲ್ಲಿ ಸಿಕ್ಕಿಹಾಕಿಕೊಂಡಿದ್ದ ಕಾಳಿಂಗ ಸರ್ಪ ರಕ್ಷಣೆ
ತಂತಿ ಬೇಲಿಯಲ್ಲಿ ಸಿಕ್ಕಿಹಾಕಿಕೊಂಡಿದ್ದ ಕಾಳಿಂಗ ಸರ್ಪ ರಕ್ಷಣೆ
ಮಂಗಳೂರು ಜೂನ್ 18: ತಂತಿ ಬೇಲಿಯಲ್ಲಿ ಸಿಕ್ಕಿಹಾಕಿಕೊಂಡು ಸಾವು ಬದುಕಿನಲ್ಲಿ ಹೋರಾಡುತ್ತಿದ್ದ ಕಾಳಿಂಗ ಸರ್ಪವನ್ನು ಸ್ಥಳೀಯರು ಸೇರಿ ರಕ್ಷಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ನಡೆದಿದೆ.
ಸವಣಾಲು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ರಸ್ತೆ ಬದಿಯ ತೋಟದ ಆವರಣಕ್ಕೆ ಹಾಕಿದ್ದ ಕಬ್ಬಿಣದ ಬೇಲಿಯಲ್ಲಿ ಕಾಳಿಂಗ ಸಿಕ್ಕಿಕೊಂಡಿತ್ತು. ವಿಷ್ಯ ತಿಳಿದ ಸ್ಥಳೀಯರು ಉಜಿರೆಯ ಸ್ನೇಕ್ ಜೋಯ್ ಅವರನ್ನು ಸ್ಥಳಕ್ಕೆ ಕರೆಸಿದ್ದಾರೆ.
ಬಳಿಕ ಭುಸು ಗುಟ್ಟುತ್ತಿದ್ದ 13 ಅಡಿ ಉದ್ದದ ಹಾವನ್ನು ಬೇಲಿಯ ಎಡೆಯಿಂದ ಪಾರು ಮಾಡಿದ್ದಲ್ಲದೆ, ಹಾವನ್ನು ಚಾರ್ಮಾಡಿ ಘಾಟಿಯ ಅರಣ್ಯ ಪ್ರದೇಶದಲ್ಲಿ ಸುರಕ್ಷಿತವಾಗಿ ಬಿಟ್ಟಿದ್ದಾರೆ. ವಿಷ ಉಗುಳುವ ಕಾಳಿಂಗನ ರಕ್ಷಣೆಯನ್ನು ನೋಡಲು ಸ್ಥಳೀಯರು ಭಯದ ಆತಂಕದಲ್ಲಿಯೇ ಸ್ಥಳದಲ್ಲಿ ಸೇರಿದ್ದರು.