BELTHANGADI
ಕಾಳಿಂಗ ಸರ್ಪ ಫಾರೆಸ್ಟರ್ನ್ ಕ್ಯಾಟ್ ಸ್ನೇಕ್ ನುಂಗುವ ದೃಶ್ಯ
ಬೆಳ್ತಂಗಡಿ ಸೆಪ್ಟೆಂಬರ್ 18: ಕಾಳಿಂಗ ಸರ್ಪವೊಂದು ಬಲು ಅಪರೂಪದ ಫಾರೆಸ್ಟರ್ನ್ ಕ್ಯಾಟ್ ಸ್ನೇಕ್ ಒಂದನ್ನು ನುಂಗುವ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಲಾಯಿಲಾ ಗ್ರಾಮದ ಕೊಳಚವು ಎಂಬಲ್ಲಿ ಈ ದೃಶ್ಯವನ್ನು ಸೆರೆಹಿಡಿಯಲಾಗಿದೆ. ಸುಮಾರು 7 ಅಡಿ ಉದ್ದದ ಕಾಳಿಂಗ ಸರ್ಪ ಅಷ್ಟೇ ಉದ್ದದ ಬಲು ಅಪರೂಪವಾಗಿ ಕಂಡು ಬರುವ ಕ್ಯಾಟ್ ಸ್ನೇಕನ್ನು ತಿನ್ನಲು ಮನೆಯೊಂದರ ಸಮೀಪಕ್ಕೆ ಬಂದಿದೆ.
ಇದನ್ನು ಗಮನಿಸಿದ ಮನೆ ಮಂದಿ ಹಾವು ಮತ್ತೊಂದು ಹಾವನ್ನು ತಿನ್ನುವ ದೃಶ್ಯವನ್ನು ಸೆರೆಹಿಡಿದಿದ್ದಾರೆ. ಬಳಿಕ ಸ್ಥಳೀಯ ಉರಗ ತಜ್ಞ ಸ್ನೇಕ್ ಅಶೋಕ್ ಕಾಳಿಂಗ ಸರ್ಪವನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ.