DAKSHINA KANNADA
ಸುಬ್ರಹ್ಮಣ್ಯ – ಭಾರೀ ಗಾತ್ರದ ಕಾಳಿಂಗ ಸರ್ಪದ ರಕ್ಷಣೆ

ಕುಕ್ಕೆಸುಬ್ರಹ್ಮಣ್ಯ ಮಾರ್ಚ್ 27: ಮನೆಯೊಂದರಲ್ಲಿ ಪತ್ತೆಯಾದ ಭಾರೀ ಗಾತ್ರದ ಕಾಳಿಂಗ ಸರ್ಪವನ್ನು ಉರಗತಜ್ಞ ಮಾಧವ ಸುಬ್ರಹ್ಮಣ್ಯ ರಕ್ಷಣೆ ಮಾಡಿದ್ದಾರೆ.
ಸುಬ್ರಹ್ಮಣ್ಯ ಸಮೀಪದ ಮನೆಯೊಂದರ ಆವರಣದಲ್ಲಿ ಆಳವಡಿಸಲಾಗಿದ್ದ ನೀರಿ ಪೈಪ್ ಲೈನ್ ಬಳಿ ಕಾಳಿಂಗ ಸರ್ಪ ಪತ್ತೆಯಾಗಿದೆ. ಮನೆಯವರು ಉರಗತಜ್ಞ ಮಾಧವ ಸುಬ್ರಹ್ಮಣ್ಯ ಅವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಮಾಧವ ಸುಬ್ರಹ್ಮಣ್ಯ ಅವರು ಹರಸಾಹಸದ ಮೂಲಕ ಕಾಳಿಂಗನನ್ನು ಹಿಡಿದು ರಕ್ಷಣೆ ಮಾಡಿದ್ದಾರೆ. ಸುಮಾರು 14 ಅಡಿ ಉದ್ದದ ಕಾಳಿಂಗ ಸರ್ಪ ಇದಾಗಿದ್ದು, ಆಹಾರ ಅರಸಿಕೊಂಡು ಮನೆ ಪಕ್ಕ ಬಂದಿರುವ ಸಾದ್ಯತೆ ಇದೆ. ರಕ್ಷಣೆ ಮಾಡಿರುವ ಕಾಳಿಂಗನನ್ನು ಕಾಡಿಗೆ ಬಿಡಲಾಗಿದೆ.
