DAKSHINA KANNADA
ಗ್ರಾಮ ಪಂಚಾಯತ್ ಗೆ ನುಗ್ಗಿದ ಕಾಳಿಂಗ ಸರ್ಪ

ಗ್ರಾಮ ಪಂಚಾಯತ್ ಗೆ ನುಗ್ಗಿದ ಕಾಳಿಂಗ ಸರ್ಪ
ಸುಳ್ಯ ಸಪ್ಟೆಂಬರ್ 04 : ಬೃಹತ್ ಕಾಳಿಂಗ ಸರ್ಪ ಒಂದು ನೇರವಾಗಿ ಗ್ರಾಮ ಪಂಚಾಯತ್ ಕಚೇರಿಗೇ ನುಗ್ಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗ ಹಾಗು ಪಶ್ಚಿಮ ಘಟ್ಟದ ತಪ್ಪಲು ಪ್ರದೇಶ ಸುಳ್ಯದಲ್ಲಿ ಈ ಘಟನೆ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮ ಪಂಚಾಯತ್ ಕಟ್ಟಡದ ತಳಮಹಡಿಯ ಸಭಾಂಗಣ ದೊಳಗೆ ಸುಮಾರು ಹತ್ತು ಅಡಿ ಉದ್ದದ ಕಾಳಿಂಗ ಸರ್ಪವೊಂದು ಏಕಾಏಕಿ ನುಗ್ಗಿದೆ. ಇದರಿಂದಾಗಿ ಗ್ರಾಮ ಪಂಚಾಯತ್ ಸಿಬ್ಬಂದಿ ಹಾಗೂ ಸ್ಥಳೀಯರು ಆತಂಕಪಟ್ಟಿದ್ದರು.

ಕಚೇರಿಯಲ್ಲಿ ವಾಸ್ತವ್ಯ ಹೋಡಿದ್ದ ಕಾಳಿಂಗನನ್ನು ಅಲ್ಲಿಂದ ಓಡಿಸಲು ಗ್ರಾಮ ಪಂಚಾಯತ್ ಸಿಬ್ಬಂದಿಗಳು ಮಾಡಿದ ಪ್ರಯತ್ನ ವ್ಯರ್ಥವಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಉರಗ ತಜ್ಞರಿಗೆ ಮಾಹಿತಿ ನೀಡಿ ಈ ಬಗ್ಗೆ ಮಾಹಿತಿ ಪಡೆದ ಉರಗ ತಜ್ಞ ಶ್ಯಾಮ್ ಭಟ್ ಹಾಗೂ ನಿವೃತ್ತ ಅರಣ್ಯಾಧಿಕಾರಿ ಶಿವರಾಮ್ ಅವರು ಸ್ಥಳಕ್ಕಾಗಮಿಸಿ ಭಾರೀ ಶ್ರಮ ವಹಿಸಿ ಕಾಳಿಂಗನನ್ನು ಸ್ಥಳೀಯರ ನೆರವಿಂದ ಹಿಡಿಯುವಲ್ಲಿ ಸಫಲರಾದರು. ಕಾಳಿಂಗ ಸರ್ಪವನ್ನ ಮಂಗಳೂರಿನಲ್ಲಿ ಪಿಲಿಕುಳ ನಿಸರ್ಗಧಾಮಕ್ಕೆ ಹಸ್ತಾಂತರಿಸಲಾಗಿದೆ.