LATEST NEWS
ದಕ್ಷಿಣಕನ್ನಡ ಜಿಲ್ಲೆಗೆ ಕಾಲಿಟ್ಟ ಕಿಕಿ ಚಾಲೆಂಜ್
ದಕ್ಷಿಣಕನ್ನಡ ಜಿಲ್ಲೆಗೆ ಕಾಲಿಟ್ಟ ಕಿಕಿ ಚಾಲೆಂಜ್
ಮಂಗಳೂರು ಅಗಸ್ಟ್ 8: ಚಲಿಸುವ ಕಾರಿನಿಂದಲೇ ಹೊರಗೆ ಜಿಗಿದು, ಕಾರಿನ ವೇಗಕ್ಕೆ ಸಮಾನವಾಗಿ ನೃತ್ಯ ಮಾಡಿಕೊಂಡು ಹೋಗುವ ‘ಕಿಕಿ ಚಾಲೆಂಜ್‘ ಈಗ ದಕ್ಷಿಣಕನ್ನಡ ಜಿಲ್ಲೆಯಲ್ಲೂ ಸದ್ದು ಮಾಡುತ್ತಿದೆ.
ದೇಶದಾದ್ಯಂತ ಸದ್ದು ಮಾಡುತ್ತಿರುವ ಈ ಕಿಕಿ ಚಾಲೆಂಜ್, ಬಾಲಿವುಡ್ ನಟ– ನಟಿಯರಿಂದ ಆರಂಭವಾಗಿ ಅಪಾಯಕಾರಿ ಮಟ್ಟಕ್ಕೆ ತಲುಪಿದ್ದ ಈ ಚಾಲೆಂಜ್, ಇದೀಗ ಮಂಗಳೂರಿಗೂ ಕಾಲಿಟ್ಟಿದೆ.
ಮಂಗಳೂರಿನಲ್ಲಿ ಮಾತ್ರ ಕಿಕಿ ಚಾಲೆಂಜ್ ನ್ನು ವಿಡಂಬನೆ ಮಾಡುವ ಮೂಲಕ ಇನ್ನೊಂದು ರೀತಿಯ ಟ್ರೆಂಡ್ ಮಂಗಳೂರಿನಲ್ಲಿ ಆರಂಭವಾಗಿದೆ.
ಮಂಗಳೂರಿನ ಯುವಕರ ಗುಂಪೊಂದು ಕಿಕಿ ಚಾಲೆಂಜ್ ಸ್ವೀಕರಿಸಿ ಚಲಿಸುತ್ತಿರುವ ಕಾರಿನ ಮುಂದೆ ನೃತ್ಯ ಮಾಡಿದ್ದು, ನಂತರ ಅದನ್ನು ಕುಡ್ಲ ವರ್ಶನ್ ಎಂದು ಹುಲಿ ಕುಣಿತದ ತಾಸೆಯ ಬಡಿತಕ್ಕೆ ಹೆಜ್ಜೆ ಹಾಕಿದೆ.ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದೇ ರೀತಿ ಇನ್ನೊಂದು ಯುವಕರ ಗುಂಪು ಗ್ರಾಮೀಣ ಪ್ರದೇಶದ ನಡು ರಸ್ತೆಯಲ್ಲಿ ಕಿಕಿ ಚಾಲೆಂಜ್ ಹಾಸ್ಯ ಮಾಡುವ ರೀತಿಯಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪಲೋಡ್ ಮಾಡಿದ್ದಾರೆ. ಆದರೆ ಇದರಲ್ಲಿ ಚಲಿಸುತ್ತಿರುವ ಕಾರಿನ ಬದಲು ಕಾರಿನ ಡೋರ್ ತೆಗೆದು ಕಿಕಿ ಚಾಲೆಂಜ್ ನ್ನು ವಿಡಂಬನೆ ಮಾಡುವ ರೀತಿಯಲ್ಲಿ ಚಿತ್ರೀಕರಿಸಲಾಗಿದೆ.
ಮಂಗಳೂರಿನಲ್ಲಿ ಕಿಕಿ ಚಾಲೆಂಜ್ ನ್ನು ವಿಡಂಬಣೆ ಮಾಡಲು ಹೋಗಿ ಯುವಕರು ರಸ್ತೆಯಲ್ಲಿಯೇ ಈ ವಿಡಿಯೋ ವನ್ನು ಚಿತ್ರಿಕರಣ ಮಾಡುತ್ತಿರುವುದು ಕೂಡ ಮತ್ತೊಂದು ಅಪಾಯಕ್ಕೆ ಆಹ್ವಾನ ತರುವಂತಾಗಿದೆ, ಈ ಕುರಿತು ಪೊಲೀಸ್ ಇಲಾಖೆಯ ಅಧಿಕಾರಿಗಳ ಕಣ್ಣು ಕೆಂಪಾಗಾಗಿಸಿದೆ.
ಏನಿದು ಕಿಕಿ ಚಾಲೆಂಜ್
ಹಾಲಿವುಡ್ ಗಾಯಕ ಡ್ರೇಕ್ ಅವರ ‘ಇನ್ ಮೈ ಫೀಲಿಂಗ್ಸ್‘ ಹಾಡಿನ ಪ್ರಚಾರಕ್ಕಾಗಿ ‘ಕಿಕ್ ಚಾಲೆಂಜ್’ ಮಾಡಿ ಹರಿಬಿಟ್ಟಿದ್ದರು. ಇದನ್ನು ಬಾಲಿವುಡ್ ನಟಿಯೊಬ್ಬರು ಸವಾಲು ಸ್ವೀಕರಿಸಿ ಅದರ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ್ದರು, ಹೀಗೆ ಪ್ರಾರಂಭವಾದ ಕಿಕಿ ಚಾಲೆಂಜ್ ನ್ನು ಸ್ವೀಕರಿಸಿ ಸಾವಿರಾರು ಯುವಕ–ಯುವತಿಯರು ತಮ್ಮ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಅಪಲೋಡ್ ಮಾಡುತ್ತಿದ್ದಾರೆ.
ಕಿಕಿ ಚಾಲೆಂಜ್ ನ್ನು ಸ್ವೀಕರಿಸುವವರು ರಸ್ತೆಯಲ್ಲಿ ಕಾರು ಚಲಿಸುತ್ತಿದ್ದ ವೇಳೆಯಲ್ಲೇ, ಅದರಿಂದ ಹೊರಗೆ ಜಿಗಿದು. ‘ಇನ್ ಮೈ ಫೀಲಿಂಗ್ಸ್’ ಹಾಡು ಹೇಳುತ್ತ ಕಾರಿನ ವೇಗಕ್ಕೆ ತಕ್ಕಂತೆ ನೃತ್ಯ ಮಾಡುತ್ತ ಸಾಗುತ್ತಾರೆ. ಹಾಡು ಮುಗಿದ ನಂತರ, ಕಾರಿನೊಳಗೆ ವಾಪಸ್ ಹತ್ತಿ ಕುಳಿತುಕೊಳ್ಳಬೇಕು. ಈ ಸಂದರ್ಭದಲ್ಲಿ ಕಾರಿನ ಒಳಗೆಯೇ ಕ್ಯಾಮೆರಾ ಇಟ್ಟು, ನೃತ್ಯದ ದೃಶ್ಯವನ್ನು ಸೆರೆ ಹಿಡಿಯಲಾಗುತ್ತದೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ #kikichallenge ಎಂಬ ಹ್ಯಾಶ್‌ಟ್ಯಾಗ್ ಮೂಲಕ ಹಂಚಿಕೊಳ್ಳುತ್ತಾರೆ. ಇದೇ ರೀತಿಯ ಸಾವಿರಾರು ಜನರ ವಿಡಿಯೊಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಈ ನಡುವೆ ಈ ಅಪಾಯಕಾರಿ ಕಿಕಿ ಚಾಲೆಂಡ್ ಸ್ವೀಕರಿಸಿ ಸಾವಿರಾರು ಜನರು ಗಾಯಗೊಂಡು ಆಸ್ಪತ್ರೆಗೆ ಸೇರಿದ್ದಾರೆ. ಬೆಂಗಳೂರು ಪೊಲೀಸರು ನಗರದಲ್ಲಿ ಯಾರಾದರೂ ಇಂಥ ಚಾಲೆಂಜ್ ಮಾಡಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಖಡಕ್ ಎಚ್ಚರಿಕೆ ನೀಡಿದ್ದಾರೆ.