LATEST NEWS
ಲಕ್ಷ್ಮೀವರ ತೀರ್ಥರ ಸಮಾಧಿಗೆ ಸಚಿವ ಯು.ಟಿ ಖಾದರ್ ನಮನ

ಲಕ್ಷ್ಮೀವರ ತೀರ್ಥರ ಸಮಾಧಿಗೆ ಸಚಿವ ಯು.ಟಿ ಖಾದರ್ ನಮನ
ಉಡುಪಿ ಜುಲೈ 20: ಲಕ್ಷ್ಮೀವರ ತೀರ್ಥ ಸ್ವಾಮಿಜಿ ಅವರ ಸಮಾಧಿಗೆ ಸಚಿವ ಯು,ಟಿ ಖಾದರ್ ಭೇಟಿ ನೀಡಿ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಖಾದರ್ ನಾನು ಆತ್ಮೀಯತೆಯಿಂದ ಸಹೋದರತೆಯಿಂದ ಬಂದಿದ್ದೇನೆ, ಸರಕಾರದ ಪ್ರತಿನಿಧಿಯಾಗಿ ಬಂದಿಲ್ಲ ಎಂದು ತಿಳಿಸಿದರು.
ನಾನು ಶೀರೂರು ಶ್ರೀಗಳ ಜೊತೆ ಮೊದಲಿನಿಂದಲೂ ಸಂಪರ್ಕದಲ್ಲಿದ್ದೆ, ನಿನ್ನೆ ಅಂತಿಮ ಯಾತ್ರೆಯ ಸಂದರ್ಭದಲ್ಲಿ ಬರಲು ಆಗಿಲ್ಲ ಹಾಗಾಗಿ ಇಂದು ಬಂದಿದ್ದೇನೆ ಎಂದು ತಿಳಿಸಿದರು.

ಶಿರೂರು ಲಕ್ಷ್ಮೀವರ ತೀರ್ಥ ಸ್ವಾಮಿಜಿಗಳ ಅಸಹಜ ಸಾವಿನ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಯು.ಟಿ ಖಾದರ್ ಈ ಸಂಬಂಧ ಈಗಾಗಲೇ ದೂರು ದಾಖಲಾಗಿದ್ದು ಕಾನೂನು ತನ್ನ ಕೆಲಸ ಮಾಡುತ್ತೆ, ಒಂದು ವೇಳೆ ಹೆಚ್ಚಿನ ತನಿಖೆಗೆ ಅಗತ್ಯವಿದ್ದಲ್ಲಿ ಇಲಾಖೆ ಅನುಮತಿ ನೀಡಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮಾಜಿ ಸಚಿವ ಅಭಯ್ ಚಂದ್ರ ಜೈನ್ ಉಪಸ್ಥಿತರಿದ್ದರು.