Connect with us

LATEST NEWS

ಕೇರಳ – 18 ಅಡಿ ಉದ್ದದ ಕಾಳಿಂಗ ಸರ್ಪವನ್ನು ಹಿಡಿದ ಮಹಿಳಾ ಅರಣ್ಯಾಧಿಕಾರಿ

ತಿರುವನಂತಪುರಂ ಜುಲೈ 07: 18 ಅಡಿ ಉದ್ದದ ಕಾಳಿಂಗ ಸರ್ಪವನ್ನು ಮಹಿಳಾ ಅರಣ್ಯಾಧಿಕಾರಿಯೊಬ್ಬರು ಹಿಡಿದಿರುವ ಘಟನೆ ಕೇರಳದ ಅಂಚುಮರುತ್ತುಮೂಡು ಅರಣ್ಯ ಪ್ರದೇಶದಲ್ಲಿ ನಡೆದಿದೆ. ಇದೀಗ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಕೇರಳದ ಬೀಟ್ ಫಾರೆಸ್ಟ್ ಅಧಿಕಾರಿ ಜಿ.ಎಸ್. ರೋಶ್ನಿ ಅವರು ಇದೇ ಮೊದಲ ಬಾರಿಗೆ 18 ಅಡಿ ಉದ್ದದ ಕಾಳಿಂಗ ಸರ್ಪವನ್ನು ಹಿಡಿದಿದ್ದಾರೆ. ಕೇರಳದ ಪರುತಿಪಲ್ಲಿ ವಲಯದಲ್ಲಿ ಈ ಕಾರ್ಯಾಚರಣೆಯನ್ನು ಅರಣ್ಯ ಬೀಟ್ ಅಧಿಕಾರಿ ಜಿಎಸ್ ರೋಶ್ನಿ ನಡೆಸಿದ್ದಾರೆ ಎಂದು ಹೇಳಲಾಗಿದೆ. ಪರುತಿಪಲ್ಲಿಯ ಹೊಳೆಯ ಒಂದು ಬದಿಯಲ್ಲಿ ಸಿಲುಕಿಕೊಂಡಿದ್ದ ದೈತ್ಯ ಕಾಳಿಂಗವನ್ನು ಕೋಲು ಬಳಸಿ, ರಕ್ಷಣೆ ಮಾಡಿದ್ದಾರೆ.
ಅರಣ್ಯಾಧಿಕಾರಿ ರೋಶ್ನೀ ಅವರು ಈ ಹಿಂದೆ ಹಲವಾರು ಹಾವುಗಳನ್ನು ರಕ್ಷಣೆ ಮಾಡಿದ್ದಾರೆ. ಆದರೆ ಕಿಂಗ್ ಕೋಬ್ರಾ ವನ್ನು ಇದೇ ಮೊದಲಬಾರಿಗೆ ಹಿಡಿದಿದ್ದಾರೆ.

ಈ ಕುರಿತಂತೆ ಮಾತನಾಡಿರುವ ಅವರು ವೈಜ್ಞಾನಿಕವಾಗಿ ಹಾವುಗಳನ್ನು ಹಿಡಿದು ಒಳ ಕಾಡಿನಲ್ಲಿ ಬಿಡುವುದು ಹೇಗೆ ಎಂಬುದರ ಕುರಿತು ಅರಣ್ಯ ಇಲಾಖೆ ಸೂಕ್ತ ತರಬೇತಿ ನೀಡಿದೆ. ನಿನ್ನೆ, ಜನರು ಸ್ನಾನ ಮಾಡುತ್ತಿದ್ದ ಸ್ಥಳದಲ್ಲಿ ಹಾವು ಕಾಣಿಸಿಕೊಂಡಿದೆ ಎಂದು ನನಗೆ ಸೂಚನೆ ಬಂದಿತು. ನಾನು ತಕ್ಷಣ ಸ್ಥಳಕ್ಕೆ ತಲುಪಿದೆ. ಕಿಂಗ್ ಕೋಬ್ರಾವನ್ನು ನನ್ನ ಕನಸಾಗಿತ್ತು, ಅದು ಇದೀಗ ನನಸಾಗಿದೆ ಎಂದರು. ಕಾಳಿಂಗ ಸರ್ಪವನ್ನು ಹಿಡಿಯುವ ವೇಳೆ ನನಗೆ ಯಾವುದೇ ರೀತಿಯ ಭಯವಾಗಿಲ್ಲ. ಹಾಲು ಹೇಗೆ ಪ್ರತಿಕ್ರಿಯಿಸುತ್ತದೆ ಎಂಬ ಮಾಹಿತಿ ನನಗೆ ಮೊದಲೇ ಇತ್ತು. ಹಾಗಾಗಿ ಅದನ್ನು ಮನಸ್ಸಿನಲ್ಲಿಟ್ಟು ಕೆಲಸ ಮಾಡಿದೆ ಎಂದಿದ್ದಾರೆ.

ಸುಮಾರು 20 ಕೆಜಿ ತೂಕ ಮತ್ತು ಸುಮಾರು 18 ಅಡಿ ಉದ್ದದ ಕಾಳಿಂಗ ಸರ್ಪವನ್ನು ವಿತುರಾ ಅರಣ್ಯ ಗಡಿಯಿಂದ ಹಿಡಿದು ರಕ್ಷಣೆ ಮಾಡಲಾಗಿದೆ. ಭೂಮಿಯ ಮೇಲಿನ ಅತ್ಯಂತ ವಿಷಕಾರಿ ಸರೀಸೃಪಗಳಲ್ಲಿ ಕಾಳಿಂಗ ಸರ್ಪ ಒಂದು, ಆದರೆ ಇದನ್ನು ಹಿಡಿಯುವುದು ಅಷ್ಟೊಂದು ಸುಲಭವಲ್ಲ, ಆದರೆ ಮಹಿಳಾ ಅಧಿಕಾರಿ ರೋಶ್ನಿ ಅವರು ಇದಕ್ಕೆ ಯಾವುದೇ ತೊಂದರೆ ಆಗದಂತೆ ಅದನ್ನು ಹಿಡಿದು ರಕ್ಷಣೆ ಮಾಡಿದ್ದಾರೆ. ಇನ್ನು ಕಾರ್ಯಚರಣೆಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Share Information
Continue Reading
Advertisement
2 Comments

2 Comments

    Leave a Reply

    Your email address will not be published. Required fields are marked *