LATEST NEWS
ಕೇರಳ – ಅರೇಬಿಯನ್ ಸ್ಟೈಲ್ ಆಹಾರ ಸೇವನೆ ವಾರದಲ್ಲಿ ಎರಡನೇ ಬಲಿ…!!

ಕಾಸರಗೋಡು ಜನವರಿ 07: ಕೇರಳದಲ್ಲಿ ಇತ್ತೀಚೆಗೆ ಅರೇಬಿಯನ್ ಸ್ಟೈಲ್ ಆಹಾರ ಸೇವಿಸಿ ಸಾವನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಇಂದು ಕಾಸರಗೋಡಿನ ಯುವತಿಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾರೆ. ಈ ಬೆನ್ನಲ್ಲೆ ಕೇರಳ ರಾಜ್ಯಾದ್ಯಂತ ಅರೇಬಿಯನ್ ಸ್ಟೈಲ್ ಹೊಟೇಲ್ ಮೇಲೆ ಆಹಾರ ಇಲಾಖೆ ದಾಳಿ ನಡೆಸಿದ ಪರಿಶೀಲನೆ ಮಾಡುತ್ತಿದೆ.
ಕೇರಳದಲ್ಲಿ ಪುಡ್ ಪಾಯಿಸನ್ ನಿಂದಾಗಿ ಸಾವುಗಳು ಸಂಭವಿಸುತ್ತಿದೆ, ಅರೇಬಿಯನ್ ಸ್ಟೈಲ್ ಕುಝಿಮಂದಿ ಎಂಬ ಬಿರಿಯಾನಿ ತಿಂದಿದ್ದ ಕಾಸರಗೋಡಿ ಅಂಜುಶ್ರೀ ಎಂಬ ಯುವತಿ ಚಿಕಿತ್ಸೆ ಫಲಕಾರಿಯಾಗದೇ ಮಂಗಳೂರಿನಲ್ಲಿ ಸಾವನಪ್ಪಿದ್ದಾರೆ. ಇನ್ನು ಇದೇ ರೀತಿ ಅರೇಬಿಯನ್ ಆಹಾರ ಸೇವಿಸಿ ಕೇರಳದಲ್ಲಿ ಒಂದೇ ವಾರದಲ್ಲಿ ಎರಡನೇ ಪ್ರಕರಣ ಇದಾಗಿದೆ. ಕೊಝಿಕ್ಕೋಡ್ ನ ರಶ್ಮಿರಾಜ್,ಈಗ ಅಂಜುಶ್ರೀ ಕೂಡಾ ಸಾವನಪ್ಪಿದ್ದಾರೆ. 2022ರ ಮೇ ನಲ್ಲಿ ದೇವಾನಂದ ಎಂಬ ಬಾಲಕಿ ಕೂಡ ಪುಡ್ ಪಾಯಿಸನ್ ನಿಂದ ಸಾವನಪ್ಪಿದ್ದರು.

ಈ ಹಿನ್ನಲೆ ಇದೀಗ ಕೇರಳ ರಾಜ್ಯಾದ್ಯಂತ ಅರೇಬಿಯನ್ ಸ್ಟೈಲ್ ಹೊಟೇಲ್ ಮೇಲೆ ಆಹಾರ ಇಲಾಖೆ ದಾಳಿ ನಡೆಸಿದ ಪರಿಶೀಲನೆ ನಡೆಸುತ್ತಿದ್ದು, ಕೇರಳ ಆಹಾರ ಸಚಿವೆ ವೀಣಾ ಜಾರ್ಜ್ ರಿಂದ ಹೊಟೇಲ್ ಗಳ ಪರಿಶೀಲನೆಗೆ ಆದೇಶ ನೀಡಿದ್ದಾರೆ. ಈ ನಡುವೆ ಕಳಪೆ ಗುಣಮಟ್ಟದ ಆಹಾರ ತಯಾರಿಸಿದ ಹಿನ್ನಲೆಯಲ್ಲಿ 40 ಹೊಟೇಲ್ ಗಳಿಗೆ ಬೀಗ ಹಾಕಲಾಗಿದೆ.