LATEST NEWS
ಪ್ರೀತಿ ನಿರಾಕರಿಸಿದಕ್ಕೆ ವಿಧ್ಯಾರ್ಥಿನಿಯ ಕತ್ತನ್ನು ಕತ್ತರಿಸಿದ ಪಾಗಲ್ ಪ್ರೇಮಿ

ಕೇರಳ ಅಕ್ಟೋಬರ್ 01: ತನ್ನ ಪ್ರೀತಿಯನ್ನು ನಿರಾಕರಿಸಿದಳು ಎಂಬ ಕಾರಣಕ್ಕೆ ಪಾಗಲ್ ಪ್ರೇಮಿಯೊಬ್ಬ ಕಾಲೇಜು ವಿಧ್ಯಾರ್ಥಿನಿಯ ಕತ್ತನ್ನು ಕತ್ತರಿಸಿ ಕೊಲೆ ಮಾಡಿರುವ ಘಟನ ಕೊಟ್ಟಾಯಂ ನಲ್ಲಿ ನಡೆದಿದೆ.
ಮೃತ ವಿಧ್ಯಾರ್ಥಿನಿಯನ್ನು ಕೊಟ್ಟಾಯಂ ಜಿಲ್ಲೆಯ ಸೇಂಟ್ ಥಾಮಸ್ ಕಾಲೇಜಿನ ವಿಧ್ಯಾರ್ಥಿನಿ ನಿಥಿನಾ ಮೋಲ್ ಎಂದು ಗುರುತಿಸಲಾಗಿದೆ. ಕೂತಟ್ಟುಕುಲಂನ ಉಪ್ಪಾಣಿ ನಿವಾಸಿಯಾದ ಅಭಿಷೇಕ್ ಬೈಜು ಕೊಲೆ ಮಾಡಿರುವ ಆರೋಪ ಎದುರಿಸುತ್ತಿದ್ದಾನೆ.

ನಿಥಿನಾ ಕೊಟ್ಟಾಯಂನ ಸೇಂಟ್ ಥಾಮಸ್ ಕಾಲೇಜು ಕ್ಯಾಂಪಸ್ನಲ್ಲಿ ಮೂರನೇ ವರ್ಷದ ‘ಬ್ಯಾಚುಲರ್ ಆಫ್ ವೋಕೇಷನ್’ ವ್ಯಾಸಂಗ ಮಾಡುತ್ತಿದ್ದಳು. ತನ್ನನ್ನು ಪ್ರೀ ತಿಸುವಂತೆ ಅಭಿಷೇಕ್ ಪದೇ ಪದೇ ಈಕೆಯನ್ನು ಕಾಡಿಸುತ್ತಿದ್ದ. ಆದರೆ ಯುವತಿ ಪ್ರೀತಿಯನ್ನು ನಿರಾಕರಿಸಿದ್ದಳು. ಇದರಿಂದ ಸಿಟ್ಟಿಗೆದ್ದ ಯುವಕ, ಇಂದು ಪರೀಕ್ಷೆ ಬರೆಯಲು ಬಂದಿದ್ದ ನಿಥಿನಾ ಮೋಲ್ ಪರೀಕ್ಷೆ ಮುಗಿಸಿ ಹೊರ ಬಂದ ಸಂದರ್ಭ ಕಾಲೇಜಿನ ಆವರಣದಲ್ಲಿಯೇ ಆಕೆಯ ಕತ್ತನ್ನು ಪೇಪರ್ ಕಟ್ಟಿಂಗ್ ಬ್ಲೇಡ್ ನಿಂದ ಕತ್ತರಿಸಿ ಕೊಲೆ ಮಾಡಿದ್ದಾನೆ.
ಪೊಲೀಸರು ಅಭಿಷೇಕ್ ಬೈಜುನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.