ಕಾಸರಗೋಡು: ‘ಮೆದುಳು ತಿನ್ನುವ’ ಅಮೀಬಾ ಸೋಂಕಿಗೆ ಕಾಸರಗೋಡಿನ ವ್ಯಕ್ತಿ ಬಲಿಯಾಗಿದ್ದು , ಕೇರಳದಲ್ಲಿ ಈ ಸೋಂಕಿಗೆ ಸಾವನ್ನಪ್ಪಿದ 5 ನೇ ಪ್ರಕರಣವಾಗಿದೆ.
ಅಮೀಬಿಕ್ ಮೆನಿಂಗೊ ಎನ್ಸೆಫಾಲಿಟಿಸ್ನಿಂ ದ ಕಾಸರಗೋಡಿನ ಯುವಕನೋರ್ವ ಕಣ್ಣೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಚಟ್ಟಂಚಾಲ್ ಉಕ್ರಂಪಾಡಿಯ ಮಣಿಕಂಠ (36) ಮೃತ ವ್ಯಕ್ತಿಯಾಗಿದ್ದಾನೆ. ಮುಂಬೈಯಲ್ಲಿ ಕೆಲಸ ಮಾಡುತ್ತಿದ್ದ ಮಣಿಕಂಠ ಅನಾರೋಗ್ಯದ ಹಿನ್ನೆಲೆಯಲ್ಲಿ ಊರಿಗೆ ಬಂದಿದ್ದರು. ಜ್ವರ ಎಂದು ಕಣ್ಣೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಜ್ವರ ಕಡಿಮೆಯಾಗದ ಕಾರಣ ಕಣ್ಣೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ನಡೆಸಿದ ತಪಾಸಣೆಯಿಂದ ಅಮಿಬಿಕ್ ಸೋಂಕು ದೃಢಪಟ್ಟಿತ್ತು.ಮುಂಬೈಯಿಂದ ಸೋಂಕು ತಗಲಿರಬಹುದು ಎಂದು ಶಂಕಿಸಲಾಗಿದೆ. ಇದರಿಂದ ಜಿಲ್ಲೆಯಲ್ಲಿ ಯಾವುದೇ ಆತಂಕ ಪಡಬೇಕಿಲ್ಲ ಆದ್ರೆ ಜ್ವರದ ಬಗ್ಗೆ ಮುನ್ನಚ್ಚರಿಕೆ ವಹಿಸುವಂತೆ ಆರೋಗ್ಯ ಇಲಾಖೆ ಸೂಚಿಸಿದೆ.
ಅಮೀಬಿಕ್ ಎನ್ಸೆಫಾಲಿಟಿಸ್, ವೈರಲ್ ಎನ್ಸೆಫಾಲಿಟಿಸ್, ಜಪಾನೀಸ್ ಜ್ವರ ಮತ್ತು ಬ್ಯಾಕ್ಟೀರಿಯಾದ ಮೆನಿಂಜೈಟಿಸ್ನಂತಹ ಇತರ ಮಿದುಳಿನ ಸೋಂಕುಗಳಂತೆ ಇದೇ ರೀತಿಯ ರೋಗಲಕ್ಷಣಗಳನ್ನು ನೀಡುತ್ತದೆ. ಸಾವಿನ ನಿಖರವಾದ ಕಾರಣವನ್ನು ಖಚಿತಪಡಿಸಲು ಹೆಚ್ಚಿನ ತನಿಖೆಗಳು ನಡೆಯುತ್ತಿವೆ.
ಪ್ರಾಥಮಿಕ ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್, ಅಥವಾ PAM, ನೈಗ್ಲೇರಿಯಾ ಫೌಲೆರಿಯಿಂದ ಉಂಟಾಗುತ್ತದೆ, ಇದು ಬೆಚ್ಚಗಿನ ಸಿಹಿನೀರಿನ ಸರೋವರಗಳು, ಕೊಳಗಳು ಮತ್ತು ನದಿಗಳಲ್ಲಿ ಬೆಳೆಯುವ ಅಮೀಬಾ. ಈ ಏಕಕೋಶ ಜೀವಿಯನ್ನು ‘ಮೆದುಳು ತಿನ್ನುವ ಅಮೀಬಾ’ ಎಂದೂ ಕರೆಯುತ್ತಾರೆ. ಐದು ತಿಂಗಳ ಅವಧಿಯಲ್ಲಿ ಕೇರಳದಲ್ಲಿ ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್ನ 19 ಪ್ರಕರಣಗಳು ವರದಿಯಾಗಿವೆ, ಅಪರೂಪದ ಮತ್ತು ಮಾರಣಾಂತಿಕ ಸೋಂಕಿನಿಂದ ಐದು ಸಾವುಗಳು ದೃಢಪಟ್ಟಿವೆ.