LATEST NEWS
ಮಹಾಮಳೆಗೆ ನಲುಗಿ ಹೋದ ದೇವರನಾಡು ಕೇರಳ..26ಕ್ಕೂ ಅಧಿಕ ಮಂದಿ ಸಾವು
ಕೇರಳ ಅಕ್ಟೋಬರ್ 18: ವಾಯುಭಾರ ಕುಸಿತದಿಂದ ಕಳೆದ ಕೆಲವು ದಿನಗಳಿಂದ ಕೇರಳದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ 26 ಮಂದಿ ಮೃತಪಟ್ಟಿದ್ದು, ಅದರಲ್ಲಿ 9 ಮಕ್ಕಳು ಕೂಡ ಸೇರಿದ್ದಾರೆ.
ಕೇರಳದಲ್ಲಿ ಸುರಿಯುತ್ತಿರುವ ಈ ಮಳೆ 2018ರ ಪ್ರವಾಹ ಪರಿಸ್ಥಿತಿಯನ್ನು ಮತ್ತೆ ನೆನಪಿಸಿದ್ದು, ಈಗಾಗಲೇ ಬುಧವಾರದಿಂದ ಮತ್ತಷ್ಟು ಧಾರಾಕಾರ ಮಳೆ ರಾಜ್ಯದಾದ್ಯಂತ ಸುರಿಯಬಹುದೆಂದು ಭಾರತೀಯ ಹವಾಮಾನ ಇಲಾಖೆ ಹೇಳಿದ್ದು ಕೇರಳದ ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಲಿದೆ ಎಂದು ಹೇಳಲಾಗಿದೆ.
ಕೊಟ್ಟಾಯಂ ಜಿಲ್ಲೆಯಲ್ಲಿ 13 ಮಂದಿ ಮೃತಪಟ್ಟಿದ್ದು ಅವರಲ್ಲಿ 12 ಮಂದಿ ಕೂಟ್ಟಿಕ್ಕಲ್ ಪಂಚಾಯತ್ ವಲಯವೊಂದರಲ್ಲಿಯ ಜನರಾಗಿದ್ದಾರೆ. ಮೊನ್ನೆ ಶನಿವಾರ ಸಂಭವಿಸಿದ ಭೂಕುಸಿತದಲ್ಲಿ 10 ಮಂದಿ ಮೃತಪಟ್ಟಿದ್ದರೆ ಮತ್ತಿಬ್ಬರು ಪ್ರವಾಹಕ್ಕೆ ಕೊಚ್ಚಿ ಹೋಗಿದ್ದಾರೆ.
ಭೂಕುಸಿತದಿಂದ ಮಣ್ಣಿನ ಅವಶೇಷಗಳಡಿ ಸಿಕ್ಕಿಹಾಕಿಕೊಂಡವರ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಕೂವಪಲ್ಲಿ ಜಿಲ್ಲೆಯಲ್ಲಿ ಪ್ರವಾಹದ ನೀರಿನಲ್ಲಿ ಮತ್ತೊಬ್ಬ ವ್ಯಕ್ತಿ ಕೊಚ್ಚಿ ಹೋಗಿದ್ದಾರೆ. ಪರಸ್ಪರ ಕೈಹಿಡಿದ ಸ್ಥಿತಿಯಲ್ಲಿ ಮೂವರು ಮಕ್ಕಳು ಹಾಗೂ ಮಗುವನ್ನು ತಾಯಿ ತಬ್ಬಿಕೊಂಡಿರುವ ಸ್ಥಿತಿಯಲ್ಲಿ ಶವಗಳು ಪತ್ತೆಯಾಗಿದೆ.