LATEST NEWS
ಮಾದಕ ದ್ರವ್ಯ ಇರಿಸಿಕೊಂಡ ಆರೋಪದ ಮೇಲೆ ಕೇರಳ ನಟಿ ಶಮ್ನತ್ ಅರೆಸ್ಟ್..!

ಪರವೂರು(ಕೇರಳ) : ಕೇರಳ ಪೊಲೀಸರು ಮಹತ್ವದ ಕಾರ್ಯಾಚರಣೆಯೊಂದರಲ್ಲಿ ಮಾದಕ ದ್ರವ್ಯ ಇರಿಸಿಕೊಂಡ ಆರೋಪದ ಮೇಲೆ ನಟಿಯೋರ್ವಳನ್ನು ಬಂಧಿಸಿದ್ದಾರೆ.
ಟಿವಿ ಧಾರಾವಾಹಿಗಳ ನಟಿ ಶಮ್ನತ್(34) ಬಂಧಿತ ಆರೋಪಿಯಾಗಿದ್ದು ಅವರ ಒಳಿವುಪಾರದಲ್ಲಿಯ ನಿವಾಸದ ಮೇಲೆ ಮೇಲೆ ದಾಳಿ ನಡೆಸಿದ ಪರವೂರ್ ಪೋಲಿಸರು ಅಂದಾಜು ಎರಡು ಮಿಲಿಗ್ರಾಮ್‌ಗಳಷ್ಟು ಎಂಡಿಎಂಎ ಮಾದಕದ್ರವ್ಯವನ್ನು ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದಾರೆ. ನಟಿ ಶಮ್ನತ್ ಅವರನ್ನು ಬಂಧಿಸಲಾಗಿದೆ. ಲಭ್ಯ ಮಾಹಿತಿಗಳ ಮೇರೆಗೆ ಈ ದಾಳಿಯನ್ನು ನಡೆಸಲಾಗಿತ್ತು. ಶಮ್ನತ್ ಕೆಲವು ಸಮಯದಿಂದ ನಿಷೇಧಿತ ಮಾದಕ ದ್ರವ್ಯವನ್ನು ಬಳಸುತ್ತಿದ್ದಾರೆ ಎಂದು ಶಂಕಿಸಲಾಗಿದ್ದು, ಅವರಿಗೆ ಇದನ್ನು ಪೂರೈಸಿದವರನ್ನು ಗುರುತಿಸಲು ತನಿಖೆಯು ಪ್ರಗತಿಯಲ್ಲಿದೆ ಎಂದು ಪೋಲಿಸ್ ಅಧಿಕಾರಿಗಳು ತಿಳಿಸಿದರು. ಶಮ್ನತ್ ವಿರುದ್ಧ ಮಾದಕ ದ್ರವ್ಯಗಳು ಮತ್ತು ಅಮಲು ಪದಾರ್ಥಗಳ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.
