LATEST NEWS
ನೀಟ್ ಪರೀಕ್ಷೆ ಸಂದರ್ಭ ವಿಧ್ಯಾರ್ಥಿನಿಯರ ಬ್ರಾ ತೆಗೆಸಿದ ಆರೋಪ – ಐವರ ಬಂಧನ
ಕೇರಳ : ನೀಟ್ ಪರೀಕ್ಷೆ ಸಂದರ್ಭ ವಿಧ್ಯಾರ್ಥಿನಿಯರ ಬ್ರಾ ತೆಗೆಸಿದ ಆರೋಪದ ಮೇಲೆ ಇದೀಗ ಕೇರಳ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಕೊಲ್ಲಂನಲ್ಲಿರುನ ನೀಟ್ ಪರೀಕ್ಷಾ ಕೇಂದ್ರದಲ್ಲಿ ಕೇಂದ್ರವಾದ ಮಾರ್ ಥೋಮಾ ಇನ್ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿಯಲ್ಲಿ ಭದ್ರತಾ ತಪಾಸಣೆ ನಡೆಸುತ್ತಿದ್ದಾಗ ಬ್ರಾನ ಲೋಹದ ಕೊಕ್ಕೆಗಳು ಬೀಪ್ ಆದ ನಂತರ ವಿದ್ಯಾರ್ಥಿನಿಗೆ ಬ್ರಾ ತೆಗೆಯುವಂತೆ ಹೇಳಿದ್ದರು ಎಂದು ತಂದೆ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.
ಇದುವರೆಗೂ ಪರೀಕ್ಷೆ ವೇಳೆ ಅವಮಾನಕರ ತಪಾಸಣೆ ಬಗ್ಗೆ ಮೂರು ದೂರು ದಾಖಲಾಗಿವೆ. ತಮ್ಮ ಮಗಳಿಗಾದ ಅವಮಾನ ಮತ್ತು ಮಾನಸಿಕ ಹಿಂಸೆಯಿಂದ ದೂರು ನೀಡಿದ ವಿದ್ಯಾರ್ಥಿನಿ ತಂದೆಯ ದೂರನ್ನು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ನಿರಾಕರಿಸಿದೆ. ದೂರನ್ನು ಕಾಲ್ಪನಿಕ ಮತ್ತು ತಪ್ಪು ಉದ್ದೇಶದಿಂದ ದಾಖಲಿಸಲಾಗಿದೆ ಎಂದು ಕೊಲ್ಲಂನಲ್ಲಿರುವ ನೀಟ್ ಪರೀಕ್ಷಾ ಕೇಂದ್ರದ ಅಧೀಕ್ಷಕರು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಗೆ ತಿಳಿಸಿದ್ದಾರೆ.
ಕೇರಳದ ಉನ್ನತ ಶಿಕ್ಷಣ ಸಚಿವೆ ಆರ್ ಬಿಂದು ಅವರು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಪತ್ರ ಬರೆದಿದ್ದು, ಪರೀಕ್ಷಾ ಹಾಲ್ಗೆ ಪ್ರವೇಶಿಸುವ ಮೊದಲು ಹುಡುಗಿಯರನ್ನು ಅವರ ಬ್ರಾ ತೆಗೆಯುವಂತೆ ಒತ್ತಾಯಿಸಿದ ಏಜೆನ್ಸಿ ವಿರುದ್ಧ ಬಲವಾದ ಕ್ರಮ ಕೋರಿದ್ದಾರೆ. ಭದ್ರತಾ ತಪಾಸಣೆ ನಡೆಸಿ ಒಳ ಉಡುಪನ್ನು ತೆಗೆಯುವಂತೆ ಹೇಳಿದವರ ವಿರುದ್ಧ ಕೇರಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
You must be logged in to post a comment Login