LATEST NEWS
ಕೇರಳದಲ್ಲಿ ನಿಫಾ ವೈರಸ್ ತಾಂಡವ – ದಕ್ಷಿಣ ಕನ್ನಡದಲ್ಲಿ ಕಟ್ಟೆಚ್ಚರ..!

ಮಂಗಳೂರು ಸೆಪ್ಟೆಂಬರ್ 13: ಕೇರಳ ಕೊಯಿಕ್ಕೋಡ್ ನಲ್ಲಿ ನಿಫಾ ವೈರಸ್ ಪತ್ತೆಯಾದ ಬೆನ್ನಲ್ಲೇ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಈಗಾಗಲೇ ಗಡಿ ಪ್ರದೇಶದಲ್ಲಿ ಪ್ರಾಥನಿಕ ಆರೋಗ್ಯ ಕೇಂದ್ರಗಳಲ್ಲಿ ಜ್ವರದ ಬಗ್ಗೆ ನಿಗಾವಹಿಸಲು ಸೂಚಿಸಲಾಗಿದೆ ಎಂದು ದಕ್ಷಿಣಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಪ್ರಭಾರಿ ಡಾ. ಸುದರ್ಶನ್ ತಿಳಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನಿಫಾ ವೈರಲ್ ನಿಧಾನವಾಗಿ ಹರಡುವ ಕಾಯಿಲೆ ಆಗಿದ್ದರಿಂದ ಅಷ್ಟು ಸಮಸ್ಯೆ ಕಂಡು ಬರುವುದಿಲ್ಲ. ಇದು ಹಕ್ಕಿಗಳು ಕಚ್ಚಿದ ಹಣ್ಣುಗಳ ಮುಖಾಂತರ ಅಥವಾ ಈ ಸೊಂಕಿನಿಂದ ಬಳಲುತ್ತಿರುವ ಮನುಷ್ಯರಿಂದ ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಸಾಧ್ಯತೆ ಇದೆ.

ಈ ಹಿನ್ನಲೆ ಹಕ್ಕಿಗಳು ತಿಂದಂತಹ ಹಣ್ಣನ್ನು ತಿನ್ನಬಾರದು. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಈವರೆಗೆ ಯಾವುದೇ ಶಂಕಿತ ಪ್ರಕರಣಗಳು ಕಂಡು ಬಂದಿಲ್ಲ. ಒಂದು ವೇಳೆ ಕೋಯಿಕ್ಕೋಡ್ ನಿಂದ ಯಾರಾದರೂ ಜ್ವರಿಂದ ಬಂದರೆ ಅವರ ಮೇಲೆ ನಿಗಾವಹಿಸಲಾಗುವುದು.
ಈಗಾಗಲೇ ಜಿಲ್ಲೆಯ ಖಾಸಗಿ ಆಸ್ಪತ್ರೆಗಳಿಗೆ ಈಗಾಗಲೇ ಸೂಚನೆ ನೀಡಿದ್ದು, ನಿಫಾ ವೈರಸ್ ಪ್ರಕರಣ ಕಂಡು ಬಂದರೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಲು ತಿಳಿಸಲಾಗಿದೆ.
ಅಲ್ಲದೆ ಜಿಲ್ಲೆಯ ಎಲ್ಲಾ ಖಾಸಗಿ ಮಡಿಕಲ್ ಕಾಲೇಜು, ಖಾಸಗಿ ಆಸ್ಪತ್ರೆ ಸರಕಾರದ ಜಿಲ್ಲಾ ಮಟ್ಟದ ಮತ್ತು ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಐಸೋಲೇಷನ್ ವಾರ್ಡ್ ಗಳ ಸುಸಜ್ಜಿತವಾಗಿಡಲು ಸೂಚಿಸಲಾಗಿದೆ ಎಂದರು.