LATEST NEWS
ಇತಿಹಾಸದಲ್ಲಿ ಶಬರಿಮಲೆಗೆ ಸ್ತ್ರೀಯರ ಪ್ರವೇಶಕ್ಕೆ ಯಾವುದೇ ನಿರ್ಬಂಧ ಇರಲಿಲ್ಲ – ಕೇರಳ ಸಚಿವ
ಇತಿಹಾಸದಲ್ಲಿ ಶಬರಿಮಲೆಗೆ ಸ್ತ್ರೀಯರ ಪ್ರವೇಶಕ್ಕೆ ಯಾವುದೇ ನಿರ್ಬಂಧ ಇರಲಿಲ್ಲ – ಕೇರಳ ಸಚಿವ
ಕೇರಳ ಜನವರಿ 5: ಪ್ರಸಿದ್ದ ಕೇರಳದ ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ ಹಿಂದೆ ಸ್ತ್ರೀಯರ ಪ್ರವೇಶಕ್ಕೆ ಯಾವುದೇ ನಿರ್ಬಂಧವಿರಲಿಲ್ಲ ಎಂದು ಕೇರಳ ಮುಜರಾಯಿ ಖಾತೆ ಸಚಿವ ಕಡಗಂಪಳ್ಳಿ ಸುರೇಂದ್ರನ್ ಹೇಳಿಕೆ ನೀಡಿದ್ದಾರೆ. ಶಬರಿಮಲೆಗೆ ತೆರಳಿ ರಾಜಕುಟುಂಬದ ಸ್ತ್ರೀಯರು ದರ್ಶನ ನಡೆಸಿರುವುದಕ್ಕೆ ಇತಿಹಾಸದಲ್ಲಿ ಪುರಾವೆಗಳಿವೆ ಎಂದು ಸಚಿವರು ತಿಳಿಸಿದ್ದಾರೆ.
ಈ ಮಧ್ಯೆ ತಾನು ಮಗುವಾಗಿದ್ದಾಗ ನನ್ನನು ತಾಯಿ ಶಬರಿಮಲೆಗೆ ಕರೆದೊಯ್ದು ಅನ್ನಪ್ರಾಶನ ನಡೆಸಿರುವುದಾಗಿ ಶಬರಿಮಲೆ ಸಲಹಾ ಸಮಿತಿ ನಿಯೋಜಿತ ಅಧ್ಯಕ್ಷ ಟಿ.ಕೆ ನಾಯರ್ ತಿಳಿಸಿದ್ದಾರೆ. ಪಂದಳ ರಾಜರ ಆದೇಶದನ್ವಯ 1930ರಲ್ಲಿ ತಾಯಿ ಶಬರಿಮಲೆಗೆ ಕರೆದೊಯ್ದು ಅನ್ನಪ್ರಾಶನ ಮಾಡಿಸಿದ್ದರು ಎಂದು ಹೇಳಿದರು.
ಸನಾತನ ಧರ್ಮದಲ್ಲಿ ನಂಬಿಕೆ ಇಟ್ಟವರು ದೇವರ ದರ್ಶನದಲ್ಲಿ ಯಾವುದೇ ಭೇಧಭಾವ ಸಾಧ್ಯವಿಲ್ಲ ಎಂದೂ ಅಭಿಪ್ರಾಯಪಟ್ಟಿದ್ದಾರೆ. ಶಬರಿಮಲೆ ದೇವಸ್ಥಾನಕ್ಕೆ 10-50 ವರ್ಷ ವಯಸ್ಸಿನ ಮಹಿಳೆಯರಿಗೆ ಪ್ರವೇಶ ನಿರ್ಬಂಧವಿದ್ದು, ಸಚಿವರ ಹಾಗೂ ಸಲಹಾ ಸಮಿತಿ ನಿಯೋಜಿತ ಅಧ್ಯಕ್ಷರ ಹೇಳಿಕೆ ಹೊಸ ವಿವಾದ ಹುಟ್ಟು ಹಾಕಿದೆ.