Connect with us

DAKSHINA KANNADA

ದುಬೈ ಲಾಟರಿಯಲ್ಲಿ 8.5 ಕೋಟಿ ಗೆದ್ದ ಕಾಸರಗೋಡಿನ ವೇಣುಗೋಪಾಲ್ ಮುಳ್ಳಚ್ಚೇರಿ

ಕಾಸರಗೋಡು ಮೇ 12: ದುಬೈನ ಲಾಟರಿಯಲ್ಲಿ ಕಾಸರಗೋಡು ಮೂಲದ ವ್ಯಕ್ತಿಯೊಬ್ಬರು ಬರೋಬ್ಬರಿ 8.5 ಕೋಟಿ ರೂಪಾಯಿ ಗೆದ್ದಿದ್ದಾರೆ.


ಕಾಸರಗೋಡು ಮೂಲದ ಸದ್ಯ ಯುಎಇಯಲ್ಲಿ ಕೆಲಸ ನಿರ್ವಹಿಸುತ್ತಿರುವ ವೇಣುಗೋಪಾಲ್ ಮುಳ್ಳಚ್ಚೇರಿ ಅವರು 1 ಮಿಲಿಯನ್ ಅಮೆರಿಕನ್ ಡಾಲರ್ (ಸುಮಾರು 8.5 ಕೋಟಿ ರೂ.) ದುಬೈ ಡ್ಯೂಟಿ ಫ್ರೀ ಮಿಲೇನಿಯಂ ಮಿಲಿಯನೇರ್ ಡ್ರಾವನ್ನು ಗೆಲ್ಲುವ ಮೂಲಕ ಚಿನ್ನ ಗೆದ್ದಿದ್ದಾರೆ .

ಇವರು 15 ವರ್ಷಗಳಿಂದ ಲಾಟರಿಯನ್ನು ಖರೀದಿಸುತ್ತಾ ಬಂದಿದ್ದು, ಅದೃಷ್ಟ ಪರೀಕ್ಷೆಯನ್ನು ಮಾಡುತ್ತಲೇ ಇದ್ದರು. ಈ ಬಾರಿ ಅವರಿಗೆ ಅದೃಷ್ಟ ಕೈಹಿಡಿದಿದೆ. ಕುಟುಂಬದವರ ಭೇಟಿಗಾಗಿ ಭಾರತಕ್ಕೆ ಬಂದು ಎ.23 ರಂದು ವಾಪಸಾಗಿದ್ದಾಗ ದುಬೈ ವಿಮಾನ ನಿಲ್ದಾಣದಲ್ಲಿ ಈ ಟಿಕೆಟ್ ಅನ್ನು ಖರೀದಿಸಿದ್ದರು. ಇವರು ಈ ಡ್ರಾದ 500ನೇ ವಿಜೇತರಾಗಿದ್ದಾರೆ. ವೇಣುಗೋಪಾಲ  ಕಳೆದ 15 ವರ್ಷಗಳಿಂದ ಯುಎಇಯಲ್ಲಿ ಐಟಿ ತಜ್ಞರಾಗಿ ಕೆಲಸ ಮಾಡುತ್ತಿದ್ದರು. ಅವರು ಏಪ್ರಿಲ್ 23 ರಂದು ಕಾಸರಗೋಡಿನಿಂದ ಹಿಂತಿರುಗುವಾಗ ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ರಲ್ಲಿರುವ ಶಾಪ್ ಒಂದರಲ್ಲಿ ಲಾಟರಿ ಟಿಕೆಟ್ ಖರೀದಿಸಿದ್ದರು.

ಮೇ 7 ರಂದು ಡಿಡಿಎಫ್‌ನ ಫೇಸ್‌ಬುಕ್ ಪುಟದಲ್ಲಿ ಪ್ರಸಾರವಾದ ನೇರ ಡ್ರಾದಲ್ಲಿ ತನ್ನ ಹೆಸರನ್ನು ಘೋಷಿಸಿದಾಗ ತನಗೆ ನಂಬಿಕೆ ಇರಲಿಲ್ಲ ಎಂದು ವೇಣುಗೋಪಾಲ ಮಾಧ್ಯಮಗಳಿಗೆ ತಿಳಿಸಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *