Connect with us

DAKSHINA KANNADA

ನಾಲ್ವರು ಹೆಂಡತಿಯರ ಗಂಡ – ಫೇಸ್ ಬುಕ್ ಪೋಟೋದಲ್ಲಿ ಸಿಕ್ಕಿಬಿದ್ದ

ಕಾಸರಗೋಡು ಫೆಬ್ರವರಿ 12: ಮಲೆಯಾಳಂ ನಲ್ಲಿ ನಾಗೇಂದ್ರನ್ ಹನಿಮೂನ್ ಎನ್ನುವ ಒಂದು ವೆಬ್ ಸೀರಿಸ್ ಬಂದಿತ್ತು, ನಟ ಸೂರಜ್ ನಟಿಸಿದ್ದ ಈ ವೆಬ್ ಸಿರಿಸ್ ಬಾರಿ ಮೆಚ್ಚುಗೆಗೆ ಪಾತ್ರವಾಗಿತ್ತು, ಅದರಲ್ಲೂ ನಟ ಹಣಕ್ಕಾಗಿ ಬೇರೆ ಬೇರೆ ಊರುಗಳಿಗೆ ತೆರಳಿ ಬೇರೆ ಬೇರೆ ಹೆಸರಿನಲ್ಲಿ ನಾಲ್ಕು ಮದುವೆಯಾಗುತ್ತಾನೆ. ಕೊನೆಗೆ ಸಿಕ್ಕಿಬಿಳುವ ಕಥೆ ಇರುವ ಸಿನೆಮಾ. ಇದೀಗ ಅದೇ ರೀತಿಯ ಸಿನೆಮಾ ಕಥೆಯನ್ನೇ ಹೋಲುವ ಘಟನೆಯ ನಿಜ ಜೀವನದಲ್ಲಿ ನಡೆದಿದ್ದು, ನಾಲ್ಕು ಮದುವೆಯಾದವನ್ನು ಇದೀಗ ಕಾಸರಗೋಡು ಪೊಲೀಸರು ಅರೆಸ್ಟ್ ಮಾಡಿದ್ದಾರೆ.


ಕಾಸರಗೋಡು ಜಿಲ್ಲೆಯ ವೆಳ್ಳರಿಕುಂಡು ನಿವಾಸಿ ದೀಪು ಫಿಲಿಪ್ (36) ಬಂಧಿತ ಆರೋಪಿ. ಇತ ನಾಲ್ಕು ಮದುವೆಯಾಗಿದ್ದು. ಇದೀಗ ಪತ್ನಿಯರ ದೂರಿನಂತೆ ಕೇರಳದ ಕೊನ್ನಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆದರೆ ಆತ ಬಂಧನಕ್ಕೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣ ಫೆಸ್ ಬುಕ್, ಅದು ಹೇಗೆ ಅಂತೀರಾ ಈ ಸ್ಟೋರಿ ನೋಡಿ


ಆರೋಪಿ ದೀಪು ಫಿಲಿಫ್ ಕಾಸರಗೋಡು ಜಿಲ್ಲೆಯವನು, ಈತ 10 ವರ್ಷಗಳ ಹಿಂದೆ ಕಾಸರಗೋಡಿನ ವೆಳ್ಳರಿಕುಂಡುವಿನ ಯುವತಿಯನ್ನು ಮದುವೆಯಾಗಿದ್ದ , ಇಬ್ಬರಿಗೆ ಎರಡು ಮಕ್ಕಳಿದ್ದಾರೆ. ಮಕ್ಕಳಾದ ಸ್ವಲ್ಪ ಸಮಯದ ನಂತರ ದೀಪು ಫಿಲಿಫ್ ಹೆಂಡತಿಯ ಚಿನ್ನ ಮತ್ತು ಹಣವನ್ನು ತೆಗೆದುಕೊಂಡು ಪರಾರಿಯಾಗಿದ್ದ. ಈ ಬಳಿಕ ಆರೋಪಿ ದೀಪು ಕಾಸರಗೋಡಿನ ಇನ್ನೊಬ್ಬ ಮಹಿಳೆಯೊಂದಿಗೆ ತಮಿಳುನಾಡಿಗೆ ಹೋಗಿ ಮದುವೆಯಾಗಿ ಅವಳೊಂದಿಗೆ ಸ್ವಲ್ಪ ಸಮಯ ಇದ್ದು ಅಲ್ಲಿಂದಲೂ ಪರಾರಿಯಾಗಿ, ಮತ್ತೆ ಕೇರಳದ ಎರ್ನಾಕುಲಂಗೆ ಬಂದಿದ್ದ. ಈ ವೇಳೆ ಅಲ್ಲಿ ಮತ್ತೊಬ್ಬ ಮಹಿಳೆಯನ್ನು ಮದುವೆಯಾಗಿದ್ದ, ಈ ವೇಳೆ ಸಾಮಾಜಿಕ ಜಾಲತಾಣದಲ್ಲಿ ಅಲಪ್ಪುಳ ಮೂಲದ ಮಹಿಳೆಯೊಬ್ಬರು ಪರಿಚಯವಾಗಿದ್ದು, ಆಕೆಯನ್ನು ಮದುವೆಯಾಗಿದ್ದಾನೆ. ಪ್ರತಿ ಬಾರಿಯೂ ಮದುವೆಯಾಗುವಾಗ ನಾನು ಅನಾಥ, ಒಂಟಿ ಜೀವನ ನಡೆಸಲು ಆಗುವುದಿಲ್ಲ ಎಂದು ನಂಬಿಕೆ ಬರುವ ಹಾಗೆ ಕಥೆಕಟ್ಟುತ್ತಿದ್ದ ಎಂದು ತಿಳಿದು ಬಂದಿದೆ. ಈತನ ಕರುಣಾಜನಕ ಕಥೆ ಕೇಳಿ ಮಹಿಳೆಯರು ಈತನ ಬಲೆಗೆ ಬೀಳುತ್ತಿದ್ದರು.

ಒಟ್ಟು ನಾಲ್ಕು ಮದುವೆಯಾಗಿ ಆರಾಮಾಗಿದ್ದ ದೀಪು ಸಿಕ್ಕಿಬಿದ್ದಿದ್ದು ಮಾತ್ರ ಇಂಟರೆಸ್ಟಿಂಗ್ ಸ್ಟೋರಿ, ದೀಪುವಿನ ಮೂರನೆ ಹೆಂಡತಿ ಮತ್ತು ನಾಲ್ಕನೇ ಹೆಂಡತಿ ಫೆಸ್ ಬುಕ್ ನಲ್ಲಿ ಪ್ರೆಂಡ್ ಆಗಿದ್ದಾರೆ. ಈ ವೇಳೆ ನಾಲ್ಕನೇ ಹೆಂಡತಿ ಫೆಸ್ ಬುಕ್ ನಲ್ಲಿ ಆರೋಪಿ ದೀಪುವಿನ ಜೊತೆ ಇರುವ ಪೋಟೋ ಹಾಕಿದ್ದಾಳೆ. ಇದು ಮೊರನೆ ಹೆಂಡತಿ ನೋಡಿ ಶಾಕ್ ಆಗಿದ್ದಾಳೆ. ಬಳಿಕ ಇಬ್ಬರು ಪರಸ್ಪರ ಮಾತನಾಡಿದಾಗ ದೀಪುವಿನ ಅಸಲಿ ಸ್ಟೋರಿ ಹೊರಬಂದಿದೆ. ಈ ವೇಳೆ ನಾಲ್ಕನೆ ಹೆಂಡತಿಗೆ ಅಪಘಾತದಲ್ಲಿ ಸಿಕ್ಕ ವಿಮೆಯ ಹಣ ಪಡೆದ ಬಳಿಕ ಆತ ಆಸಕ್ತಿ ಕಳೆದುಕೊಂಡ ಬಗ್ಗೆ ಅನುಮಾನವಿತ್ತು, ಇದೀಗ ಸಂಪೂರ್ಣ ಸ್ಟೋರಿ ತಿಳಿದಕೂಡಲೇ ಅವರು ಸೀದಾ ಪೊಲೀಸರ ಬಳಿಗೆ ಹೋಗಿ ವಂಚನೆ ಹಾಗೂ ಲೈಂಗಿಕ ದೌರ್ಜನ್ಯದ ಪ್ರಕರಣ ದಾಖಲಿಸಿದ್ದಾರೆ. ಇದರಂತೆ ಆರೋಪಿಯನ್ನು ಕಾಸರಗೋಡಿನಲ್ಲಿ ಅರೆಸ್ಟ್ ಮಾಡಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *