Connect with us

    DAKSHINA KANNADA

    ಆಯ್ಕೆ ಸ್ವಾತಂತ್ರ್ಯದ ಬಗ್ಗೆ ಭಾಷಣ ಬಿಗಿಯುವ ಕಮ್ಯುನಿಷ್ಟ್ ಸರಕಾರದಿಂದ ಕಾಸರಗೋಡಿನಲ್ಲಿ ಕನ್ನಡಿಗರ ಸ್ವಾತಂತ್ರ್ಯಹರಣ

    ಆಯ್ಕೆ ಸ್ವಾತಂತ್ರ್ಯದ ಬಗ್ಗೆ ಭಾಷಣ ಬಿಗಿಯುವ ಕಮ್ಯುನಿಷ್ಟ್ ಸರಕಾರದಿಂದ ಕಾಸರಗೋಡಿನಲ್ಲಿ ಕನ್ನಡಿಗರ ಸ್ವಾತಂತ್ರ್ಯಹರಣ

    ಕಾಸರಗೋಡು, ಮೇ 26: ಮುಂದಿನ ಶೈಕ್ಷಣಿಕ ವರ್ಷದಲ್ಲಿ ಕೇರಳದ ಕಾಸರಗೋಡಿನ ಗಡಿನಾಡ ಕನ್ನಡಿಗರು ಮಲಯಾಳಂ ಭಾಷೆಯಲ್ಲಿ ತನ್ನ ಶಿಕ್ಷಣ ಮುಂದುವರಿಸಬೇಕಾದ ಅನಿವಾರ್ಯ ಪರಿಸ್ಥಿತಿಯನ್ನು ಕೇರಳ ಸರಕಾರ ತಂದೊಡ್ಡಿದೆ.

    ಈ ಮೂಲಕ ಗಡಿನಾಡ ಕರ್ನಾಟಕವಾದ ಕಾಸರಗೋಡಿನಲ್ಲಿ ಕನ್ನಡ ಭಾಷೆಯನ್ನು, ಸಂಸ್ಕೃತಿಯನ್ನು ಸಂಪೂರ್ಣ ನಾಶಮಾಡುವ ಪ್ರಯತ್ನದ ಇನ್ನೊಂದು ಹಂತದ ಕಾರ್ಯಾಚರಣೆಯನ್ನು ಕೇರಳ ಸರಕಾರ ಕೈಗೆತ್ತಿಕೊಂಡಿದೆ.

    ಕೇರಳ ಸರಕಾರದ ಶಿಕ್ಷಣ ಇಲಾಖೆ ಜೂನ್ 1 ರಿಂದ ಕಾಸರಗೋಡು ಜಿಲ್ಲೆಯ ಎಲ್ಲಾ ಸರಕಾರಿ ಕನ್ನಡ ಶಾಲೆಗಳಲ್ಲಿ ಒಂದನೇ ತರಗತಿಯಿಂದ 10 ನೇ ತರಗತಿವರೆಗೆ ಮಲಯಾಳ ಶಿಕ್ಷಣ ಕಡ್ಡಾಯ ಎನ್ನುವ ಆದೇಶವನ್ನು ಹೊರಡಿಸಿದೆ.

    ಈ ಆದೇಶವನ್ನು ವಿರೋಧಿಸಿ ಕಾಸರಗೋಡು ಜಿಲ್ಲೆಯ ಕನ್ನಡಿಗರು ವಾರ ಪೂರ್ತಿ ಪ್ರತಿಭಟನೆಯನ್ನು ಕೈಗೊಂಡಿದ್ದಾರೆ. ಮೇ 23 ರಿಂದ ಆರಂಭಗೊಂಡ ಈ ಪ್ರತಿಭಟನೆಯು ಮೇ 29 ರ ವರೆಗೂ ನಡೆಯಲಿದ್ದು, ಕಾಸರಗೋಡಿನ ಕನ್ನಡಪರ ಸಂಘಟನೆಗಳು ಹಾಗೂ ಕನ್ನಡಿಗರು ಬೀದಿಗಿಳಿದು ಹೋರಾಟವನ್ನು ನಡೆಸುತ್ತಿದ್ದಾರೆ.

    ಕೇರಳ ಸರಕಾರ ಕನ್ನಡಿಗರಿಗೆ ತಮ್ಮ ಮಾತೃಭಾಷೆಯಲ್ಲಿ ಕಲಿಯುವ ಅವಕಾಶವನ್ನು ಕಿತ್ತುಕೊಂಡಿದ್ದು, ಇದು ಕನ್ನಡಿಗರ ಮೇಲೆ ಕೇರಳ ಸರಕಾರದ ಅನ್ಯಾಯ ಎನ್ನುವ ಕೂಗುಗಳೂ ಇದೀಗ ಕೇಳಿ ಬರತೊಡಗಿದೆ.

    ಎಲ್ಲರಿಗೂ ಅವರದೇ ಆದ ಆಯ್ಕೆಯ ಸ್ವಾತಂತ್ರ್ಯವಿದೆ ಎನ್ನುವ ಸಿದ್ಧಾಂತವನ್ನು ಹೊಂದಿರುವ ಹಾಗೂ ಪ್ರಸ್ತುತ ಕೇರಳ ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಮ್ಯುನಿಷ್ಟ್ ಪಕ್ಷ ಕನ್ನಡಿಗರ ವಿಚಾರದಲ್ಲಿ ಮಾತ್ರ ಇಬ್ಬಗೆಯ ನೀತಿಯನ್ನು ತಳೆದಿದೆ.

    ಆಹಾರವಿರಲಿ, ಉಡುಗೆ-ತೊಡುಗೆಯ ವಿಚಾರದ ಕುರಿತು ದೇಶದಲ್ಲಿ ಚರ್ಚೆ ಆರಂಭವಾದ ಸಂದರ್ಭದಲ್ಲಿ ಎಲ್ಲರಿಗೂ ಅವರವರಿಗೆ ಇಷ್ಟವಾದುದನ್ನು ಆಯ್ಕೆ ಮಾಡುವ ಅಧಿಕಾರವಿದೆ ಎನ್ನುವ ವಾದ ಮಂಡಿಸುವ ಕೇರಳದಲ್ಲಿ ಅಧಿಕಾರದಲ್ಲಿರುವ ಕಮ್ಯುನಿಷ್ಟ ಪಕ್ಷ ಕನ್ನಡಿಗರಿಗೆ ತಮ್ಮ ಮಾತೃಭಾಷೆಯಲ್ಲಿ ಕಲಿಯುವ ಅವಕಾಶವನ್ನು ಇದೀಗ ಕಸಿದುಕೊಳ್ಳುತ್ತಿರುವುದು ವಿಪರ್ಯಾಸವೇ ಸರಿ.

    Share Information
    Advertisement
    Click to comment

    Leave a Reply

    Your email address will not be published. Required fields are marked *