LATEST NEWS
ಕೇರಳ -ಚರ್ಚ್ ನಲ್ಲಿ ಪೆಟ್ಟಿಗೆ ಬದಲು ಬಟ್ಟೆಯಲ್ಲಿ ಸುತ್ತಿ ಸಮಾಧಿ ಮಾಡಲು ನಿರ್ಧಾರ
ತಿರುವನಂತಪುರಂ ಸೆಪ್ಟೆಂಬರ್ 07: ಕ್ರೈಸ್ತ ಧರ್ಮದಲ್ಲಿ ಸತ್ತ ವ್ಯಕ್ತಿಯ ಅಂತಿಮ ಸಂಸ್ಕಾರದ ಪದ್ದತಿಯನ್ನು ಮೊದಲ ಬಾರಿಗೆ ಕೇರಳದ ಕ್ಯಾಥೋಲಿಕ್ ಚರ್ಚ್ ಕೈ ಬಿಟ್ಟಿದ್ದು, ಹೊಸ ಸಂಸ್ಕೃತಿಗೆ ನಾಂದಿ ಹಾಡಿದೆ.
ಕ್ರಿಶ್ಚನ್ ಸಂಸ್ಕೃತಿಯಲ್ಲಿ ಸಾಮಾನ್ಯವಾಗಿ ಸತ್ತ ವ್ಯಕ್ತಿಯನ್ನು ಪೆಟ್ಟಿಗೆಯಲ್ಲಿ ಹೂಳು ಸಮಾಧಿ ಮಾಡುತ್ತಾರೆ ಆದರೆ ಆಲಪ್ಪುಳ ಜಿಲ್ಲೆಯ ಅಥುರ್ಂಕಲ್‍ನ ಸೇಂಟ್ ಜಾರ್ಜ್ ಚರ್ಚ್‍ನಲ್ಲಿ ಮೊದಲಿನಿಂದಲೂ ಇದ್ದ ಪೆಟ್ಟಿಗೆಯಲ್ಲಿ ಸಮಾಧಿ ಮಾಡುವ ಸಂಸ್ಕೃತಿಯನ್ನು ಅಂತ್ಯಗೊಳಿಸಲಾಗಿದೆ.
ಆಲಪ್ಪುಳ ಜಿಲ್ಲೆಯ ಅಥುರ್ಂಕಲ್‍ನ ಸೇಂಟ್ ಜಾರ್ಜ್ ಚರ್ಚ್ ಸಮುದ್ರ ತೀರದಲ್ಲಿರುವ ಕಾರಣ ಪೆಟ್ಟಿಗೆಯಲ್ಲಿ ಹೂಳಿದ್ದ ಶವಗಳು ಎಷ್ಟೇ ವರ್ಷಗಳಾದರೂ ಕೊಳೆಯದ ಹಾಗೆ ಇರುತ್ತಿದ್ದವು, ಈ ಹಿನ್ನಲೆ ಪೆಟ್ಟಿಗೆಯ ಬದಲು ಶವವನ್ನು ಬಟ್ಟೆಯಲ್ಲಿ ಸುತ್ತಿ ಸಮಾಧಿ ಮಾಡಲು ಇದೀಗ ನಿರ್ಧರಿಸಿದೆ.