ಕೀನ್ಯಾ, ಫೆಬ್ರವರಿ 26: ಕೀನ್ಯಾದ ಯುವ ನಾಯಕರೊಬ್ಬರು ಭಗವದ್ಗೀತೆ ಹಿಡಿದು ಪ್ರಮಾಣವಚನ ಸ್ವೀಕರಿಸಿರುವ ಫೋಟೊ ಎಲ್ಲೆಡೆ ವೈರಲ್ ಆಗಿದೆ. ಈ ಯುವ ನಾಯಕನ ಹೆಸರು ಕ್ಯಾಲೆಬ್. ಮೊಂಬಾಸಾದ ಕೌಂಟಿಯಲ್ಲಿರುವ ವಿಧಾನಸಭೆಯಲ್ಲಿ ಈ ಐತಿಹಾಸಿಕ ಘಟನೆ ನಡೆದಿದೆ.
ಮೊಂಬಾಸಾ ಕೌಂಟಿಯ ಚಂಗಮ್ವೆ ಕ್ಷೇತ್ರವನ್ನು ಪ್ರತಿನಿಧಿಸುವ ಯುವ ಶಾಸಕ ಕ್ಯಾಲೆಬ್ ಪ್ರಮಾಣವಚನ ಸ್ವೀಕರಿಸಲು ಭಗವದ್ಗೀತೆಯೊಂದಿಗೆ ಬಂದಿದ್ದರು.ಈ ಕುರಿತು ಇಸ್ಕಾನ್ನ ಓಂಕಾರ ಮುಕುಂದ ದಾಸ್ ಮಾತನಾಡಿ, ಈ ನಡೆ ನಾಟಕೀಯವಲ್ಲ, ಪ್ರಚಾರಕ್ಕೂ ಅಲ್ಲ ಆ ಭಾವ ಅವರ ಹೃದಯಲ್ಲಿ ಹುಟ್ಟಿಕೊಂಡಿರುವುದು, ಅದೇ ಸತ್ಯ, ಹಾಗೂ ಇದು ಉದ್ದೇಶ ಪೂರ್ವಕ ನಡೆ ಎಂದರು. ಸಾರ್ವಜನಿಕ ಹುದ್ದೆಯು ಹೆಚ್ಚಾಗಿ ಪ್ರಬಲ ಧಾರ್ಮಿಕ ಸಂಪ್ರದಾಯಗಳೊಂದಿಗೆ ಹೆಣೆದುಕೊಂಡಿರುವ ರಾಷ್ಟ್ರದಲ್ಲಿ, ಭಗವದ್ಗೀತೆಯ ಮೇಲೆ ಪ್ರಮಾಣ ಮಾಡುವ ಕ್ಯಾಲೆಬ್ ಅವರ ನಿರ್ಧಾರವು ಹೊಸ ಭರವಸೆಯನ್ನು ಹುಟ್ಟುಹಾಕಿದೆ.
ವಿಧಾನಸಭೆಯ ಸದಸ್ಯರ ಸಮ್ಮುಖದಲ್ಲಿ ಕ್ಯಾಲೆಬ್ ಅವರು ಭಗವದ್ಗೀತೆ ಆ್ಯಸ್ ಇಟ್ ಈಸ್ ಪುಸ್ತಕವನ್ನು ಎತ್ತಿ ಪ್ರಮಾಣ ವಚನ ಸ್ವೀಕರಿಸಿದರು. ಮೊಂಬಾಸಾ ಯುವ ಅಸೆಂಬ್ಲಿ ಕೀನ್ಯಾ ಯುವ ಅಸೆಂಬ್ಲಿ ಚೌಕಟ್ಟಿನಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಯುವ ನಾಯಕರಿಗೆ ಔಪಚಾರಿಕ ರಾಜಕೀಯಕ್ಕೆ ಮುಂಚೆ ಜವಾಬ್ದಾರಿಯನ್ನು ಅಭ್ಯಾಸ ಮಾಡುವ ವೇದಿಕೆಯಾಗಿದೆ.