KARNATAKA
ಕೆಂಪೇಗೌಡರಿಗೆ ಸಿಕ್ಕಿತು ಬೊಲೆರೊ ಪಿಕ್ ಅಪ್ ಟ್ರಕ್…ಮಹೀಂದ್ರಾ ಪ್ಯಾಮಿಲಿಗೆ ಸ್ವಾಗತ ಎಂದ ಆನಂದ್ ಮಹೀಂದ್ರಾ

ಬೆಂಗಳೂರು: ವಾಹನ ಖರೀದಿಗೆ ಬಂದ ರೈತನ ಅವಮಾನಿಸಿದ ಮಹೀಂದ್ರಾ ಕಂಪೆನಿ ಇದೀಗ ರೈತನಿಗೆ ರಾಜ ಮರ್ಯಾದೆಯಲ್ಲಿ ಮಹೀಂದ್ರಾ ಪಿಕಪ್ ವಾಹನ ತೆಗೆದುಕೊಳ್ಳಲು ಸಹಾಯ ಮಾಡಿದೆ. ತುಮಕೂರಿನ 27 ವರ್ಷದ ರೈತ ಕೆಂಪೇಗೌಡಗೆ ಬೊಲೆರೊ ಹೊಸ ಬ್ರಾಂಡ್ ಪಿಕ್ ಅಪ್ 1.7 ಟ್ರಕ್ ನ್ನು ಖರೀದಿಸಿದ್ದಾರೆ.
ಜನವರಿ 21ರಂದು ವಾಹನ ಖರೀದಿಗೆ ಮಹಿಂದ್ರಾ ಶೋ ರೂಂ ಗೆ ತೆರಳಿದ್ದ ಕೆಂಪೇಗೌಡ ಮತ್ತು ಆತನ ಸ್ನೇಹಿತರಿಗೆ ಶೋ ರೂಂನ ಸಿಬ್ಬಂದಿ ಅವಮಾನ ಮಾಡಿತ್ತು. 10 ಲಕ್ಷ ಹಣ ನೀಡಿದರೆ ವಾಹನ ನೀಡುವುದಾಗಿ ಸಿಬ್ಬಂದಿ ಹೇಳಿದ್ದರು ಈ ಹಿನ್ನಲೆ ರೈತನೆಂದು ಕೆಂಪೇಗೌಡನನ್ನು ಅವಮಾನಿಸಿದ ಮಹೀಂದ್ರ ಶೋರೂಂಗೆ 10 ಲಕ್ಷ ರೂಪಾಯಿ ಹಣದೊಂದಿಗೆ ಕಾರಿನ ಶೋರೂಂಗೆ ಹೋಗಿ ತಕ್ಷಣವೇ ಕಾರು ನೀಡುವಂತೆ ಕೇಳಿ ಮಹೀಂದ್ರ ಕಂಪೆನಿ ಮಾಲೀಕರಿಗೆ ದಂಗುಬಡಿಸಿದ್ದು ರಾಜ್ಯಾದ್ಯಂತ ಮಾಧ್ಯಮಗಳಲ್ಲಿ, ಸೋಷಿಯಲ್ ಮೀಡಿಯಾಗಳಲ್ಲಿ ಸುದ್ದಿಯಾಗಿತ್ತು.

ಅದು ಮಹೀಂದ್ರ ಗ್ರೂಪ್ ನ ಅಧ್ಯಕ್ಷ ಆನಂದ್ ಮಹೀಂದ್ರ ಅವರಲ್ಲಿಗೆ ತಲುಪಿದೆ. ಘಟನೆ ಬಗ್ಗೆ ವಿಷಾಧ ವ್ಯಕ್ತಪಡಿಸಿದ್ದರು. ಇದೀಗ ಮಹೀಂದ್ರ ಶೋರೂಂನ ಸಿಬ್ಬಂದಿ ಕೆಂಪೇಗೌಡರ ಜೊತೆ ಮಾತುಕತೆ ನಡೆಸಿ ಅವರಿಗೆ ಮಹೀಂದ್ರ ಫೈನಾನ್ಸ್ ನಿಂದ ಜೀಪ್ ಖರೀದಿಸಲು 7.40 ಲಕ್ಷ ರೂಪಾಯಿ ಸಾಲ ಪಡೆಯಲು ಸಹಾಯ ಮಾಡಿದರಂತೆ. ಜೀಪ್ ಖರೀದಿಸಲು ಕೆಂಪೇಗೌಡ ನಗದು ತಕ್ಷಣಕ್ಕೆ ಪಾವತಿಸಿದ್ದು 1.99 ಲಕ್ಷ ರೂಪಾಯಿ. ಇನ್ನು ತಿಂಗಳಿಗೆ 19 ಸಾವಿರ ರೂಪಾಯಿಗಳಂತೆ 48 ಕಂತುಗಳಲ್ಲಿ ಹಣ ಪಾವತಿಸಬೇಕು ಎನ್ನುತ್ತಾರೆ ಕೆಂಪೇಗೌಡ.
ಕಳೆದ ಶುಕ್ರವಾರ ಮಹೀಂದ್ರ ಆಟೊಮೊಟಿವ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಕೆಂಪೇಗೌಡರಿಗೆ ಕ್ಷಮೆಯನ್ನು ಕೇಳಿದೆ. ಕೆಂಪೇಗೌಡರಿಗೆ ಆಗಿರುವ ಅನನುಕೂಲತೆಗೆ ವಿಷಾದ ವ್ಯಕ್ತಪಡಿಸುತ್ತೇವೆ. ಕೊಟ್ಟಿದ್ದ ಭರವಸೆಯಂತೆ ನಾವು ಸೂಕ್ತ ಕ್ರಮ ಕೈಗೊಂಡಿದ್ದು ಸಮಸ್ಯೆ ಈಗ ಬಗೆಹರಿದಿದೆ ಎಂದು ಹೇಳಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಆನಂದ್ ಮಹೀಂದ್ರ, ಕೆಂಪೇಗೌಡರಿಗೆ ಸ್ವಾಗತ ಎಂದು ಟ್ವೀಟ್ ಮಾಡಿದ್ದಾರೆ.
https://twitter.com/anandmahindra/status/1487081358958772228