LATEST NEWS
ಕಾಶ್ಮೀರ – ಕಿರುತೆರೆ ನಟಿಯನ್ನು ಗುಂಡಿಕ್ಕಿ ಕೊಂದ ಉಗ್ರರು

ಕಾಶ್ಮೀರ ಮೇ 26: ಕಿರುತೆರೆಯ ನಟಿಯೊಬ್ಬಳನ್ನು ಉಗ್ರರು ಗುಂಡಿಕ್ಕಿ ಕೊಲೆ ಮಾಡಿರುವ ಘಟನೆ ಕಾಶ್ಮೀರದ ಬುದ್ಗಾಮ್ ಜಿಲ್ಲೆಯಲ್ಲಿ ನಡೆದಿದೆ.
ಮೃತ ನಟಿಯನ್ನು ಅಮ್ರೀನ್ ಭಟ್ ಎಂದು ಗುರುತಿಸಲಾಗಿದ್ದು, ಲಷ್ಕರ್ ಇ ತೊಯಿಬಾ ಸಂಘಟನೆಯ ಉಗ್ರರು ಅಮ್ರೀನ್ ಭಟ್ ಅವರ ಮನೆಯ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಈ ಘಟನೆಯಲ್ಲಿ ಅಮ್ರೀನ್ ಭಟ್ ಸಾವನಪ್ಪಿದ್ದು, ಅವರ ಸೋದರಳಿಯ 10 ವರ್ಷದ ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಮೃತ ಅಮ್ರೀನ್ ಭಟ್ ಟಿಕ್‌ಟಾಕ್ ಕಲಾವಿದೆ ಮತ್ತು ಕಿರುತೆರೆ ನಟಿಯಾಗಿದ್ದಾರೆ.

Continue Reading