DAKSHINA KANNADA
ಕಾಸರಗೋಡಿನ ಮೊದಲ ಮಹಿಳಾ ಪೊಲೀಸ್ ವರಿಷ್ಠಾಧಿಕಾರಿ ಕನ್ನಡತಿ ಡಿ ಶಿಲ್ಪಾ ಸಿಬಿಐಗೆ

ಕಾಸರಗೋಡು ಎಪ್ರಿಲ್ 09: ಕಾಸರಗೋಡು ಜಿಲ್ಲೆಯ ಪ್ರಥಮ ಮಹಿಳಾ ಪೊಲೀಸ್ ವರಿಷ್ಠಾಧಿಕಾರಿಯಾಗಿರುವ ಕುಖ್ಯಾತ ಕೊಲೆ ಆರೋಪಿ ಜಾಲಿ (ಕೂಡತಾಯಿ ಸರಣಿ ಹತ್ಯೆಗಳ ಆರೋಪಿ) ಮತ್ತು ಗ್ರೀಷ್ಮಾ (ತನ್ನ ಪ್ರಿಯಕರನಿಗೆ ಗಿಡಮೂಲಿಕೆ ಔಷಧದಲ್ಲಿ ವಿಷ ಬೆರೆಸಿ ಕೊಂದ) ಅವರನ್ನು ಜೈಲಿಗೆ ಕಳುಹಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಐಪಿಎಸ್ ಅಧಿಕಾರಿ ಡಿ ಶಿಲ್ಪಾ ಅವರು ಸಿಬಿಐಗೆ ನೇಮಕಗೊಂಡಿದ್ದಾರೆ.
ಕಾಸರಗೋಡು ಜಿಲ್ಲಾ ಪೊಲೀಸ್ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸುತ್ತಿದ್ದ ಶಿಲ್ಪಾ, ಐದು ವರ್ಷಗಳ ಅವಧಿಗೆ ಕೇಂದ್ರ ನಿಯೋಜನೆಗೆ ತೆರಳಿದ್ದಾರೆ. ಕಣ್ಣೂರು ರೂರಲ್ ಎಸ್ಪಿ ಅನೂಜ್ ಪಾಲಿವಾಲ್ ಅವರಿಗೆ ಕಾಸರಗೋಡು ಜಿಲ್ಲೆಯ ಉಸ್ತುವಾರಿ ವಹಿಸಲಾಗಿದೆ.

ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್ ನಿವಾಸಿಯಾಗಿರುವ ಡಿ.ಶಿಲ್ಪಾ 2016ರ ಐಪಿಎಸ್ ಬ್ಯಾಚ್‌ನ ಅಧಿಕಾರಿ. ಅವರು ಎಲೆಕ್ಟ್ರಾನಿಕ್ ಎಂಜಿನಿಯರಿಂಗ್ ಮತ್ತು ಬಿಸಿನಸ್ ಅಡ್ಮಿನಿಸ್ಟ್ರೇಷನ್ ಪದವೀಧರೆ.
ನೆಯ್ಯಟ್ಟಿಂಕರ ಶರೋನ್ ರಾಜ್ ಕೊಲೆ ಪ್ರಕರಣ ಮತ್ತು ಮಹಿಳೆಯರು ಪ್ರಮುಖ ಆರೋಪಿಗಳಾಗಿದ್ದ ಕೋಝಿಕ್ಕೋಡ್‌ನಲ್ಲಿ ನಡೆದ ಸರಣಿ ಹತ್ಯೆ ಪ್ರಕರಣಗಳನ್ನು ಭೇದಿಸುವಲ್ಲಿ ಎಸ್ಪಿ ಶಿಲ್ಪಾ ಅವರ ತಂಡ ಯಶಸ್ವಿಯಾಗಿತ್ತು. ಶಿಲ್ಪಾ ಅವರ ತನಿಖಾ ರೀತಿಗೆ ಕೇರಳದ ನ್ಯಾಯಾಲಯವು ಪ್ರಶಂಸೆಯನ್ನು ವ್ಯಕ್ತಪಡಿಸಿತ್ತು.
1 Comment