DAKSHINA KANNADA
ನಾನು ಹುಟ್ಟಿದ ಮುಂಬೈನಲ್ಲೇ ನನ್ನ ಹೆಸರಿನ ರಸ್ತೆ ಇಲ್ಲ..ಆದರೆ ಕಾಸರಗೋಡಿನಲ್ಲಿದೆ – ಸುನಿಲ್ ಗವಾಸ್ಕರ್

ಕಾಸರಗೋಡು ಫೆಬ್ರವರಿ 22: ನಾನು ಜನಿಸಿದ ಮುಂಬೈನಲ್ಲೆ ನನ್ನ ಹೆಸರಿನ ರಸ್ತೆ ಇಲ್ಲ ಆದರೆ ಕೇರಳದ ಕಾಸರಗೋಡಿನಲ್ಲಿ ನನ್ನ ಹೆಸರಿನಲ್ಲಿ ರಸ್ತೆ ಇದೆ ಎಂದು ಮಾಜಿ ಕ್ರಿಕೆಟಿಗ ಸುನಿಲ್ ಗಾವಸ್ಕರ್ ಹೇಳಿದ್ದಾರೆ.
ಕಾಸರಗೋಡಿನ ವಿದ್ಯಾನಗರದ ನಗರಸಭೆ ಕ್ರೀಡಾಂಗಣ ರಸ್ತೆಗೆ ಸುನಿಲ್ ಗಾವಸ್ಕರ್ ಹೆಸರನ್ನು ಇಡಲಾಗಿದ್ದು, ಅದನ್ನು ಉದ್ಘಾಟಿಸಿ ಅವರು ಮಾತನಾಡಿದರು.ನಾನು ಜನಿಸಿ ಬೆಳೆದ ಮುಂಬಯಿಯಲ್ಲಿ ಕೂಡ ರಸ್ತೆಗೆ ನನ್ನ ಹೆಸರು ಇರಿಸಲಿಲ್ಲ. ಕಾಸರಗೋಡಿನ ರಸ್ತೆಯೊಂದು ಕ್ರೀಡಾಪಟುವಿನ ಹೆಸರಿನಲ್ಲಿ ಗುರುತಿಸಿಕೊಂಡು ಗಮನ ಸೆಳೆದಿದೆ’ ಎಂದರು. ಉತ್ತಮ ಕ್ರೀಡಾಪಟುಗಳನ್ನು ಕೊಡುಗೆಯಾಗಿ ನೀಡಿದ ನಾಡು ಕೇರಳ. ಹೀಗಾಗಿ ಈ ರಾಜ್ಯದ ಕುರಿತು ನನಗೆ ಅಪಾರ ಗೌರವವಿದೆ ‘ ಎಂದು ಅವರು ಹೇಳಿದರು.

ನಂತರ ಚೆಟ್ಟಂಗುಳಿ ರಾಯಲ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಪೌರಸನ್ಮಾನ ಸ್ವೀಕರಿಸಿದರು. ಅಲ್ಲದೆ ಮಾದಕ ಪದಾರ್ಥ ಮುಕ್ತ ರಾಜ್ಯಕ್ಕಾಗಿ ಕೇರಳ ಪೊಲೀಸರು ನಡೆಸುತ್ತಿರುವ ಅಭಿಯಾನದ ಲಾಂಛನವನ್ನು ಗಾವಸ್ಕರ್ ಬಿಡುಗಡೆ ಮಾಡಿದರು.