LATEST NEWS
ಕಾಸರಗೋಡು ಗಡಿ ಚೆಕ್‌ಪೋಸ್‌ಗಳಲ್ಲಿ ಕೊರೊನಾ ಪರೀಕ್ಷೆ ನಿರ್ಧಾರ ಮುಂದೂಡಿಕೆ

ಮಂಗಳೂರು ನವೆಂಬರ್ 1: ಕರ್ನಾಟಕದಿಂದ ಕಾಸರಗೋಡು ಜಿಲ್ಲೆಗೆ ಪ್ರವೇಶಿಸುವ 17 ಗಡಿ ರಸ್ತೆಗಳ ಪೈಕಿ 5 ಗಡಿ ರಸ್ತೆಗಳ ಚೆಕ್ ಪೋಸ್ಟ್‌ಗಳಲ್ಲಿ ಕೊರೊನಾ ಪರೀಕ್ಷೆಗೆ ಆದೇಶಿಸಿದ ಕಾಸರಗೋಡು ಜಿಲ್ಲಾಡಳಿತ ಒಂದೇ ದಿನದಲ್ಲಿ ಅದನ್ನು ವಾಪಸ್ ಪಡೆದಿದೆ.
ಇತರ ರಾಜ್ಯಗಳಿಂದ ಕೇರಳ ಪ್ರವೇಶಿಸುವ ಮಂದಿಯಲ್ಲಿ ಕೋವಿಡ್ ನೆಗೆಟಿವ್ ಆಗಿರುವ ಸರ್ಟಿಫಿಕೆಟ್ ಇಲ್ಲದಿದ್ದರೆ ಆಂಟಿಜೆನ್ ಟೆಸ್ಟ್ ಕಡ್ಡಾಯ ಎಂದು ಶುಕ್ರವಾರ ಕಾಸರಗೋಡು ಜಿಲ್ಲಾಧಿಕಾರಿ ಡಾ. ಸಜಿತ್ ಬಾಬು ಆದೇಶಿಸಿದ್ದರು. ಅಲ್ಲದೆ ಅದರಂತೆ ಗಡಿಭಾಗದಲ್ಲಿ ಆಂಟಿಜೆನ್ ಟೆಸ್ಟ್‌ಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಶನಿವಾರ ಸಂಜೆ ವೇಳೆಗೆ ದಿಢೀರನೆ ಆಂಟಿಜೆನ್ ಟೆಸ್ಟ್ ನಡೆಸುವ ಆದೇಶಕ್ಕೆ ತಡೆ ನೀಡಿದ್ದಾರೆ. ಕೊರೊನಾ ಕೋರ್ ಸಮಿತಿ ಸಭೆಯ ತೀರ್ಮಾನದಂತೆ ಮುಂದೂಡಲಾಗಿದ ಎಂದು ಡಾ. ಸಜಿತ್ ಬಾಬು ತಿಳಿಸಿದ್ದಾರೆ. ಶುಕ್ರವಾರದ ಕೋರ್ ಸಮಿತಿ ಸಭೆಯ ತೀರ್ಮಾನದಂತೆ ತಲಪಾಡಿ ಚೆಕ್ ಪೋಸ್ಟ್ ಅಡ್ಕಸ್ಥಳ, ಅಡ್ಯನಡ್ಕ ರಸ್ತೆ, ಆದೂರು-ಕೊಟ್ಯಾಡಿ-ಸುಳ್ಯ ರಾಜ್ಯ ಹೆದ್ದಾರಿ, ಪಾಣತ್ತೂರು- ಚೆಂಬೇರಿ-ಮಡಿಕೇರಿ ಹಾಗೂ ಮಾಣಿಮೂಲೆ-ಸುಳ್ಯ ರಸ್ತೆಗಳಲ್ಲಿ ಚೆಕ್ ಪೋಸ್ಟ್ ಸಜ್ಜುಗೊಳಿಸಿ, ಕೊರೊನಾ ಪರೀಕ್ಷೆಗೆ ಸಿದ್ದತೆ ನಡೆಸಲಾಗಿತ್ತು. ಒಂದು ದಿನದಲ್ಲಿ ಗಡಿದಾಟಿ ಬಂದು ಹೋಗುವವರಿಗೆ ಈ ಟೆಸ್ಟ್‌ನಿಂದ ವಿನಾಯ್ತಿ ನೀಡಲಾಗಿತ್ತು.

ಈಗಾಗಲೇ ಕೇಂದ್ರ ಸರಕಾದಿಂದ ಅನ್ಲಾಕ್ ಪ್ರಕ್ರಿಯೆ ಜಾರಿಯಲ್ಲಿದ್ದರೂ ಕೂಡ ಕಾಸರಗೋಡು ಜಿಲ್ಲಾಡಳಿತ ಮಾತ್ರ ಕೇಂದ್ರ ಸರಕಾದ ಎಲ್ಲಾ ಆದೇಶಗಳ ವಿರುದ್ದವಾಗಿ ವರ್ತಿಸುತ್ತಿದ್ದು, ಇದು ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ.