DAKSHINA KANNADA
ಕಾಸರಗೋಡು- ರಸ್ತೆ ಹೊಂಡಕ್ಕೆ ಬಿದ್ದ ಬೈಕ್ ಮೇಲೆ ಹರಿದ ಲಾರಿ – ಬೈಕ್ ಸವಾರ ಸಾವು

ಕಾಸರಗೋಡು ಎಪ್ರಿಲ್ 05: ಲಾರಿಯೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನಪ್ಪಿದ ಘಟನೆ ಶುಕ್ರವಾರ ರಾತ್ರಿ ಚೆಮ್ನಾಡ್ ನಲ್ಲಿ ನಡೆದಿದೆ.
ಮೃತರನ್ನು ಮೇಲ್ಪರಂಬ ಒರವಂಗರದ ಮುಹಮ್ಮದ್ ಹನೀಫ್ (26) ಎಂದು ಗುರುತಿಸಲಾಗಿದೆ. ರಸ್ತೆಯ ಹೊಂಡಕ್ಕೆ ಬಿದ್ದ ಬೈಕ್ ಮೇಲೆ ಹಿಂದಿನಿಂದ ಬಂದ ಲಾರಿ ಹಾದು ಹೋಗಿದ್ದು,ಗಂಭೀರ ಗಾಯಗೊಂಡ ಹನೀಫ್ ರನ್ನು ಆಸ್ಪತ್ರೆಗೆ ತಲುಪಿಸಿದರೂ ಆಗಲೇ ಮೃತಪಟ್ಟಿದ್ದರು. ಗಲ್ಫ್ ಉದ್ಯೋಗಿಯಾಗಿದ್ದ ಹನೀಫ್ ರಂಝಾನ್ ಹಬ್ಬದ ಹಿನ್ನಲೆ ಯಲ್ಲಿ ಊರಿಗೆ ಬಂದಿದ್ದರು. ಮುಂದಿನ ವಾರ ಮತ್ತೆ ಗಲ್ಫ್ ಗೆ ತೆರಳಬೇಕಿತ್ತು. ಮೇಲ್ಪರಂಬ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

1 Comment