Connect with us

    LATEST NEWS

    Kasaragod : ನಾಳೆಯ ಲೋಕಸಭಾ ಚುನಾವಣೆಗೆ ಕಾಸರಗೋಡು ಜಿಲ್ಲೆ ಸಂಪೂರ್ಣ ಸಜ್ಜು, ಏಪ್ರಿಲ್ 27 ರ ಸಂಜೆ 6 ಗಂಟೆಯ ವರೆಗೆ ನಿಷೇಧಾಜ್ಞೆ ಜಾರಿ..!

    ಕಾಸರಗೋಡು: ಏಪ್ರಿಲ್ 26 ರಂದು ನಡೆಯಲಿರುವ ಲೋಕಸಭಾ ಚುನಾವಣೆಗೆ ಕಾಸರಗೋಡು ಜಿಲ್ಲೆ ಸಂಪೂರ್ಣ ಸಜ್ಜಾಗಿದ್ದು ಏಪ್ರಿಲ್ 24 ಸಂಜೆ 6 ಗಂಟೆಯಿಂದ ಏಪ್ರಿಲ್ 27 ರ ಸಂಜೆ 6 ಗಂಟೆಯ ವರೆಗೆ ನಿಷೇಧಾಜ್ಞೆ 144 ಜಾರಿ ಮಾಡಲಾದೆ.

    ಸಾರ್ವಜನಿಕಸಭೆ ಸಮಾರಂಭಗಳಿಗೆ ಹಾಗೂ ಐದಕ್ಕಿಂತ ಹೆಚ್ಚು ಜನ ಒಟ್ಟು ಸೇರುವ ಸಭೆಗಳಿಗೆ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.  ಏಪ್ರಿಲ್ 26 ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯ ವರೆಗೆ ಚುನಾವಣೆ ನಡೆಯಲಿದೆ. ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಒಂಭತ್ತು ಅಭ್ಯರ್ಥಿಗಳು ಕಣದಲ್ಲಿದ್ದಾರೆ .ಈ ಕ್ಷೇತ್ರದಲ್ಲಿ 14,52,230 ಮತದಾರರಿದ್ದಾರೆ. ಇದರಲ್ಲಿ 7,01,475 ಪುರುಷರು, 7,50,741 ಮಹಿಳೆಯರು ಮತ್ತು 14 ತ್ರತೀಯ ಲಿಂಗೀ ಮತದಾರರು ಇದ್ದಾರೆ.  ಸಾರ್ವಜನಿಕ ವೀಕ್ಷಕ ಋಷಿರೇಂದ್ರ ಕುಮಾರ್, ಪೊಲೀಸ್ ವೀಕ್ಷಕ ಸಂತೋಷ್ ಸಿಂಗ್ ಗೌರ್ ಮತ್ತು ವೆಚ್ಚ ವೀಕ್ಷಕ ಆನಂದ್ ರಾಜ್ ಎಂಬಿವರ ನೇತೃತ್ವದ ತಂಡವು ಚುನಾವಣಾ ಪ್ರಕ್ರಿಯೆಯ ಮೇಲೆ ನಿಗಾ ವಹಿಸಿದೆ. ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ 85 ಕ್ಕಿಂತ ಹೆಚ್ಚು ಪ್ರಾಯವಿರುವ 5467 ಅರ್ಜಿಸಲ್ಲಿಸಿದ ಮತದಾರರಲ್ಲಿ 5331 ಮಂದಿ ಮನೆಯಲ್ಲಿ ಮತದಾನ ಮಾಡಿದ್ದಾರೆ. ಅದೇ ರೀತಿ ಅರ್ಜಿ ಸಲ್ಲಿಸಿದ 3687 ವಿಕಲಚೇತನ ಮತದಾರರಲ್ಲಿ 3566 ಮಂದಿ ಮತ ಚಲಾಯಿಸಿದ್ದಾರೆ. ಅರ್ಜಿ ಸಲ್ಲಿಸಿದ್ದ 711 ಅಗತ್ಯ ಸೇವಾ ಮತದಾರರ ಪೈಕಿ 642 ಮತದಾರರು ಮತ ಚಲಾಯಿಸಿದ್ದಾರೆ.

    ಕಾಸರಗೋಡು ಕ್ಷೇತ್ರ

    14,52,230 ಮತದಾರರು
    7,01,475 ಪುರುಷ ಮತದಾರರು
    7,50,741 ಮಹಿಳಾ ಮತದಾರರು
    14 ತೃತೀಯ ಲಿಂಗದ ಮತದಾರರು
    32,827 ಚೊಚ್ಚಲ ಮತದಾರರು
    4934 ಅನಿವಾಸಿ ಮತದಾರರು
    3300 ಸೇವಾ ಮತದಾರರು
    711 ಅಗತ್ಯ ಸೇವಾ ಮತದಾರರು

    ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಒಂದು ಆಕ್ಸಿಲರಿ ಬೂತ್ ಸೇರಿದಂತೆ 1334 ಮತಗಟ್ಟೆಗಳು ಇವೆ.

    ಕ್ಷೇತ್ರವಾರು ಮತಗಟ್ಟೆಗಳು.

    ಮಂಜೇಶ್ವರ- 205, ಕಾಸರಗೋಡು-190, ಉದುಮ- 198, ಕಾಞಂಗಾಡ್- 196, ತ್ರಿಕರಿಪುರ-194, ಪಯ್ಯನ್ನೂರು 181 (1 ಸಹಾಯಕ ಮತಗಟ್ಟೆ) ಕಲ್ಯಾಶ್ಶೇರಿ- 170

    ಮತದಾನ ಸಾಮಗ್ರಿಗಳ ವಿತರಣೆ ಏಪ್ರಿಲ್ 25 ರಂದು ನಡೆಯಲಿದೆಮತದಾನಕ್ಕೆ ಅಗತ್ಯವಿರುವ ಮತಯಂತ್ರಗಳ ವಿತರಣೆ ಏಪ್ರಿಲ್ 25 ರಂದು (ಗುರುವಾರ) ಬೆಳಗ್ಗೆ
    ಜಿಲ್ಲೆಯ ವಿಧಾನಸಭಾ ಕ್ಷೇತ್ರವಾರು ವಿತರಣಾ ಹಾಗೂ ಸ್ವೀಕರಣಾ ಕೇಂದ್ರಗಳಲ್ಲಿ ನಡೆಯಲಿದೆ.

    ಮತದಾನ ಸಾಮಗ್ರಿಗಳ ಸ್ವೀಕಾರಣಾ ಹಾಗೂ ವಿತರಣಾ ಕೇಂದ್ರಗಳು

    ಮಂಜೇಶ್ವರಂ-ಜಿಎಚ್‌ಎಸ್‌ಎಸ್ ಕುಂಬಳೆ, ಕಾಸರಗೋಡು-ಕಾಸರಗೋಡು ಸರಕಾರಿ ಕಾಲೇಜು, ಉದುಮ-ಚೆಮ್ಮನಾಡ್ ಜಮಾಯತ್ ಹೈಯರ್ ಸೆಕೆಂಡರಿ ಶಾಲೆ, ಕಾಞಂಗಾಡ್-ದುರ್ಗಾ ಹೈಯರ್ ಸೆಕೆಂಡರಿ ಶಾಲೆ ಕಾಞಂಗಾಡ್, ತ್ರಿಕರಿಪುರ-ಸ್ವಾಮಿ ನಿತ್ಯಾನಂದ ಆಂಗ್ಲ ಮಾಧ್ಯಮ ಶಾಲೆ ಕಾಞಂಗಾಡ್, ಪಯ್ಯನ್ನೂರು-ಎ.ಕುಂಞಿರಾಮನ್ ಆಡಿಯೋಡಿ ಸ್ಮಾರಕ ಜಿ ವಿ ಎಚ್ ಎಸ್ ಎಸ್ ಪಯ್ಯನ್ನೂರು, ಕಕಲ್ಯಾಶ್ಶೇರಿ- ಸರಕಾರಿ ಹೈಯರ್ ಸೆಕೆಂಡರಿ ಶಾಲೆ ಮಾಡಾಯಿ.

    ಮತದಾನ ಕರ್ತವ್ಯಕ್ಕೆ 4561 ಮತಗಟ್ಟೆ ಅಧಿಕಾರಿಗಳು

    ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ಕರ್ತವ್ಯಕ್ಕೆ ನೌಕರರನ್ನು ನಿಯೋಜಿಸಲಾಗಿದೆ.

    ಜಿಲ್ಲೆಯಲ್ಲಿ ತಲಾ 983 ಪ್ರಿಸೈಡಿಂಗ್ ಅಧಿಕಾರಿಗಳು, ಪ್ರಥಮ ಮತಗಟ್ಟೆ ಅಧಿಕಾರಿಗಳು ಹಾಗೂ ದ್ವಿತೀಯ ಮತಗಟ್ಟೆ ಅಧಿಕಾರಿಗಳನ್ನು ನೇಮಿಸಲಾಗಿದೆ. 90 ಸೆಕ್ಟೋರಲ್ ಅಧಿಕಾರಿಗಳನ್ನೂ ನೇಮಿಸಲಾಗಿದೆ. ಮೇಲ್ವಿಚಾರಣೆಗಾಗಿ 244 ಮೈಕ್ರೋ ಅಬ್ಸರ್ವರ್‌ಗಳನ್ನೂ ನೇಮಿಸಲಾಗಿದೆ. 1278 ಅಧಿಕಾರಿಗಳು ಮೀಸಲು ಮಾಡಿ ಇರಿಸಿದ್ದಾರೆ.

    ಗುರುತಿನ ಚೀಟಿ ಕಡ್ಡಾಯ

    ಮತದಾನ ಮಾಡಲು ಭಾವಚಿತ್ರವಿರುವ ಮತದಾರರ ಗುರುತಿನ ಚೀಟಿ ಮತದಾರರನ್ನು ಗುರುತಿಸಲಿರುವ ಮುಖ್ಯ ದಾಖಲೆಯಾಗಿದೆ. ಮತದಾರರ ಗುರುತಿನ ಚೀಟಿಯನ್ನು ನೀಡಲಾಗದವರು ಚುನಾವಣಾ ಆಯೋಗವು ಅಂಗೀಕರಿಸಿದ ದಾಖಲೆಗಳನ್ನು ಗುರುತಿನ ದಾಖಲೆಯಾಗಿ ಬಳಸಬಹುದು.

    ಕೆಳಗಿನ ನೀಡಿರುವ ಯಾವುದೇ ಗುರುತಿನ ಚೀಟಿಯನ್ನು ಪ್ರಸ್ತುತಪಡಿಸುವ ಮೂಲಕ ಮತ ಚಲಾಯಿಸಬಹುದು.

    – ಆಧಾರ್ ಕಾರ್ಡ್
    – ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಗುರುತಿನ ಚೀಟಿ
    -ಬ್ಯಾಂಕ್/ಪೋಸ್ಟ್ ಆಫೀಸ್ ನೀಡಿದ ಫೋಟೋ ಗುರುತಿನ ಚೀಟಿ
    – ಕಾರ್ಮಿಕ ಸಚಿವಾಲಯ ಯೋಜನೆಯಡಿ ನೀಡಲಾದ ಆರೋಗ್ಯ ರಕ್ಷಣೆಯ ಸ್ಮಾರ್ಟ್ ಕಾರ್ಡ್
    – ಚಾಲನಾ ಪರವಾನಗಿ
    – ಪ್ಯಾನ್‌ಕಾರ್ಡ್
    – ರಾಷ್ಟ್ರೀಯ ಜನಸಂಖ್ಯಾ ನೋಂದಣಿ (NPR) ಅಡಿಯಲ್ಲಿ ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ (RGI) ನೀಡಿದ ಸ್ಮಾರ್ಟ್ ಕಾರ್ಡ್
    – ಭಾರತೀಯ ಪಾಸ್ ಪೋರ್ಟ್
    – ಫೋಟೋ ಲಗತ್ತಿಸಿದ ಪಿಂಚಣಿ ದಾಖಲೆ
    – ಕೇಂದ್ರ/ರಾಜ್ಯ/ಸಾರ್ವಜನಿಕ ವಲಯ/ಪಬ್ಲಿಕ್ ಲಿಮಿಟೆಡ್ ಕಂಪನಿಗಳ ಉದ್ಯೋಗಿಗಳಿಗೆ ನೀಡುವ ಸೇವಾ ಗುರುತಿನ ಚೀಟಿ
    – MP/MLA/MLC ಗಳಿಗೆ ನೀಡುವ ಅಧಿಕೃತ ಗುರುತಿನ ಚೀಟಿ.
    . ಭಾರತ ಸರ್ಕಾರದ ಸಾಮಾಜಿಕ ನೀತಿ- ಸಬಲೀಕರಣ, ಸಚಿವಾಲಯದಿಂದ ನೀಡಿದ ವಿಶೇಷ ಅಂಗವಿಕಲ ಗುರುತಿನ ಚೀಟಿ

    ಜಾಹೀರಾತು ಅಭಿಯಾನ

    ಮತದಾನ ಮುಕ್ತಾಯಗೊಳ್ಳುವ 48 ಗಂಟೆಗಳ ವರೆಗೆ ಮಾತ್ರ ಜಾಹೀರಾತುಗಳನ್ನು ಸೀಮಿತಗೊಳಿಸಬೇಕು. ಇಂದು ಸಂಜೆ 6 ಗಂಟೆಗೆ ಜಾಹೀರಾತುಗಳನ್ನು ನಿಲ್ಲಿಸಬೇಕು.

    ಮದ್ಯ ನಿಷೇಧ

    ಮತದಾನಕ್ಕೆ 48 ಗಂಟೆಗಳ ಮೊದಲು ಮದ್ಯ ನಿಷೇಧ ಹೇರಲಾಗುವುದು.

    ಮತದಾನ ದಿನದ ನೀತಿ ಸಂಹಿತೆ.

    ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಈ ಕೆಳಗಿನ ಮಾದರಿ ನೀತಿ ಸಂಹಿತೆಗೆ ಬದ್ಧರಾಗಿರಬೇಕು.

    ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಯಾವುದೇ ರೀತಿಯ ಬೆದರಿಕೆ ಅಥವಾ ಅಡೆತಡೆಗಳಿಲ್ಲದೆ ಜನರು ತಮ್ಮ ಮತದಾನದ ಹಕ್ಕನ್ನು ಮುಕ್ತವಾಗಿ ಚಲಾಯಿಸುವ ಅವಕಾಶ ಪೆನ್ನು ಸೃಷ್ಟಿಸಲು ಚುನಾವಣಾ ಕರ್ತವ್ಯದಲ್ಲಿರುವ ಅಧಿಕಾರಿಗಳಿಗೆ ಸಹಕರಿಸಬೇಕು

    ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಮತದಾರಿಗೆ ಲಂಚ ನೀಡುವುದು, ಬೆದರಿಸುವುದು, ನಕಲಿ ಮತದಾನ ಮಾಡುವುದು, ಮತಗಟ್ಟೆಯ 100 ಮೀಟರ್ ವ್ಯಾಪ್ತಿಯಲ್ಲಿ ಮತ ಯಾಚನೆ, ಮತದಾನ ಮುಕ್ತಾಯಕ್ಕೆ 48 ಗಂಟೆಗಳ ಮೊದಲು ಮತಗಟ್ಟೆಯ ವ್ಯಾಪ್ತಿ ಯಲ್ಲಿ ಸಾರ್ವಜನಿಕ ಸಭೆಗಳನ್ನು ಆಯೋಜಿಸುವುದು, ಮತದಾರರಿಗೆ ಮತದಾನ ಕೇಂದ್ರಗಳಿಗೆ ಹಾಗೂ ಹಿಂತಿರುಗಿ ಮನೆಗೆ ವಾಹನದ ವ್ಯವಸ್ಥೆ ಅಥವಾ ಸಾರಿಗೆ ವ್ಯವಸ್ಥೆ ಮಾಡುವುದು ಚುನಾವಣ ನಿಯಮ ಪ್ರಕಾರ ತಪ್ಪಾಗಿರುವುದರಿಂದೇವುಗಳನ್ನು ತಪ್ಪಿಸಲು ರಾಷ್ಟ್ರೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಪ್ರಯತ್ನಿಸಬೇಕು.

    ಅಧಿಕೃತ ಕಾರ್ಯಕರ್ತರಿಗೆ ಬ್ಯಾಡ್ಜ್‌ಗಳನ್ನು ಮತ್ತು ಗುರುತಿನ ಚೀಟಿಗಳನ್ನು ನೀಡಬೇಕು

    – ಮತದಾರರಿಗೆ ವಿತರಿಸುವ ಚೀಟಿಗಳು ಬಿಳಿ ಕಾಗದದ ಆಗಿರುತ್ತದೆ. ಅದರಲ್ಲಿ ಯಾವುದೇ ರೀತಿಯ ಚಿಹ್ನೆಯೋ,ಅಭ್ಯರ್ಥಿಯ ಹೆಸರು ಅಥವಾ ಪಕ್ಷದ ಹೆಸರು ಇಲ್ಲಾ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.
    ಮತದಾನದ ದಿನ ಮತ್ತು 48 ಗಂಟೆಗಳ ಮೊದಲು ಮದ್ ನೀಡುವುದನ್ನು ಅಥವಾ ವಿತರಿಸುವುದನ್ನು ತಡೆಯ ಬೇಕು
    – ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಸ್ಥಾಪಿಸಿರುವ ಮತಗಟ್ಟೆಗಳ ಅಥವಾ ಶಿಬಿರಗಳ ಸಮೀಪ ಅನಗತ್ಯ ಜನಸಂದಣಿ ಇರಬಾರದು.

    ಅಭ್ಯರ್ಥಿಗಳ ಶಿಬಿರಗಳು ಆಡಂಬರ ರಹಿತವಾಗಿರಬೇಕು. ಅಲ್ಲಿ ಯಾವುದೇ ರೀತಿಯ ಗೋಡೆ ಜಾಹೀರಾತುಗಳು, ಧ್ವಜಗಳು, ಚಿಹ್ನೆಗಳು ಅಥವಾ ಇತರ ಪ್ರಚಾರ ಸಾಮಗ್ರಿಗಳನ್ನು ಪ್ರದರ್ಶಿಸುವುದೋ, ಆಹಾರವನ್ನು ವಿತರಣೆಯನ್ನು ಬಾರದು.
    – ಮತದಾನದ ದಿನದಂದು ವಾಹನಗಳ ಚಾಲನೆಗೆ ವಿಧಿಸಿರುವ ನಿಭಂದನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಅನುಮತಿ ಪತ್ರಗಳನ್ನು ಪಡೆದು ವಾಹನಗಳ ಮೇಲೆ ಅಂತಿಸಬೇಕು.
    – ಒಪ್ಪಿಗೆ ನೀಡುವವರನ್ನು ಹೊರತುಪಡಿಸಿ ಕೇಂದ್ರ ಚುನಾವಣಾ ಆಯೋಗದ ಅಥವಾ ಜಿಲ್ಲಾ ಚುನಾವಣಾ ಅಧಿಕಾರಿಯಿಂದಲೋ ಪಡೆದ ನಿಯಮಬದ್ಧವಾದ ಪಾಸ್ ಹೊಂದಿರದ ಯಾರನ್ನೂ ಮತಗಟ್ಟೆಗೆ ಪ್ರವೇಶಿಸಲು ಬಿಡಬಾರದು.

    ಮತದಾನ ಕೇಂದ್ರದಲ್ಲಿ ಇರಬೇಕಾದ ಸೌಲಭ್ಯಗಳು

    -ವಿಕಲಚೇತನರು ಮತ್ತು ನಿಶ್ಶಕ್ತರಿಗಾಗಿ ಗಾಲಿಕುರ್ಚಿ ಸೌಲಭ್ಯ
    -ಮತದಾರರ ಜೊತೆಗಿರುವ ಮಕ್ಕಳಿಗಾಗಿ ಕ್ರಾಶ್
    -ಕುಡಿಯುವ ನೀರು

    ಖಾಸಗಿ ಸ್ಥಳಗಳಲ್ಲಿ ಅಕ್ರಮವಾಗಿ ಇರಿಸಲಾಗಿದ್ದ 15917 ಪ್ರಚಾರ ಸಾಮಗ್ರಿಗಳನ್ನೂ ತೆಗೆಯಲಾಗಿದೆ

    ಸಾರ್ವಜನಿಕ ಮತ್ತು ಖಾಸಗಿ ಸ್ಥಳಗಳಲ್ಲಿ ಅಕ್ರಮವಾಗಿ ಇರಿಸಲಾಗಿದ್ದ 15917 ಪ್ರಚಾರ ಸಾಮಗ್ರಿಗಳನ್ನು ತೆಗೆದುಹಾಕಲಾಗಿದೆ. ಸಾರ್ವಜನಿಕ ಸ್ಥಳಗಳಿಂದ 15801 ಮತ್ತು ಖಾಸಗಿ ಸ್ಥಳಗಳಿಂದ 116 ಪ್ರಚಾರ ಸಾಮಗ್ರಿಗಳನ್ನು ತೆಗೆದುಹಾಕಲಾಗಿದೆ. ಭಿತ್ತಿಚಿತ್ರಗಳು, ಪೋಸ್ಟರ್‌ಗಳು, ಬ್ಯಾನರ್‌ಗಳು ಮತ್ತು ಧ್ವಜಸ್ತಂಭಗಳನ್ನು ತೆಗೆದುಹಾಕಲಾಯಿತು.

    ಜಿಲ್ಲೆಯಲ್ಲಿ ಏಪ್ರಿಲ್ 24 ರಂದು ಸಂಜೆ 6 ರಿಂದ ಏಪ್ರಿಲ್ 27 ರ ಸಂಜೆ 6 ರವರೆಗೆ ನಿಷೇಧಾಜ್ಞೆ.

    ಜಿಲ್ಲೆಯಲ್ಲಿ ಶಾಂತಿ-ಭದ್ರತೆ ಕಾಪಾಡಲು ಹಾಗೂ ಸಾರ್ವತ್ರಿಕ ಚುನಾವಣೆಯನ್ನು ಮುಕ್ತ ಹಾಗೂ ನಿಷ್ಪಕ್ಷಪಾತವಾಗಿ ನಡೆಸಲು ಜಿಲ್ಲಾಧಿಕಾರಿ ಕೆ. ಇಂಬಾಶೇಖರ್ ಸೆಕ್ಷನ್ 144 Cr.P.C., 1973 ಜಾರಿಗೊಳಿಸಿದ್ದಾರೆ.

    ಜಿಲ್ಲೆಯಲ್ಲಿ ಏಪ್ರಿಲ್ 24 ಸಂಜೆ 6 ಗಂಟೆಯಿಂದ ಏಪ್ರಿಲ್ 27 ರ ಸಂಜೆ 6 ಗಂಟೆಯ ವರೆಗೆ ನಿಷೇಧಾಜ್ಞೆ. ಸಾರ್ವಜನಿಕಸಭೆ ಸಮಾರಂಭಗಳಿಗೆ ಹಾಗೂ ಐದಕ್ಕಿಂತ ಹೆಚ್ಚು ಜನ ಒಟ್ಟು ಸೇರುವ ಸಭೆಗಳಿಗೆ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಸಾರ್ವಜನಿಕ ಮತ್ತು ಖಾಸಗಿ ಸ್ಥಳಗಳಲ್ಲಿ ಐದಕ್ಕಿಂತ ಹೆಚ್ಚು ಜನರೂ ಒಟ್ಟುಗೂಡಿ ನಿಲ್ಲಬಾರದು.

    ಅಭ್ಯರ್ಥಿಗಳು ಮನೆ ಬೀಟಿ ಮಾಡಿ ಮೌನ ಪ್ರಚಾರ ಮಾಡುವುದಕ್ಕೆ ಅಡ್ಡಿಯಿಲ್ಲ. ವೈದ್ಯಕೀಯ ತುರ್ತು ಪರಿಸ್ಥಿತಿಗಳು, ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಣೆ, ಅಗ್ನಿಶಾಮಕ ಸೇವೆಗಳು ಮತ್ತು ಸರಕಾರಿ ವ್ಯವಸ್ಥೆಗಳಂತಹ ಅಗತ್ಯ ಸೇವೆಗಳು ಅಡೆತಡೆಯಿಲ್ಲದೆ ಕಾರ್ಯನಿರ್ವಹಿಸುವುದನ್ನು ಮುಂದುವರಿಸಬಹುದು. ನಿಷೇಧಾಜ್ಞೆ ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು.

    ಸಶಸ್ತ್ರ ಪಡೆಗಳು ಸೇರಿದಂತೆ ಭದ್ರತೆಯನ್ನು ಖಾತ್ರಿಪಡಿಸಲಾಗುವುದು; ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

    ಮತದಾನದ ದಿನದಂದು ಮತಗಟ್ಟೆಗಳಲ್ಲಿ ಬಿಗಿ ಭದ್ರತೆ ಒದಗಿಸಲಾಗುವುದು. 10 ಡಿವೈಎಸ್ಪಿಗಳ ನೇತೃತ್ವದಲ್ಲಿ 8 ಉಪವಿಭಾಗಗಳಾಗಿ ವಿಂಗಡಿಸಿ ಭದ್ರತೆಯನ್ನು ಒದಗಿಸಲಾಗಿದೆ. ಪೊಲೀಸರಲ್ಲದೆ ಅಬಕಾರಿ, ಅರಣ್ಯ, ಮೋಟಾರು ವಾಹನ ಇಲಾಖೆಗಳ ಸಮವಸ್ತ್ರಧಾರಿ ಅಧಿಕಾರಿಗಳು ಭದ್ರತಾ ಪಡೆಯಲ್ಲಿ ಇದ್ದಾರೆ. 788 ಸದಸ್ಯರ ಸಶಸ್ತ್ರ ಪಡೆಗಳು ಬೇರೆ ರಾಜ್ಯಗಳಿಂದ ಆಗಮಿಸಲಿವೆ. ಆರ್‌ಪಿಎಫ್ – 3 ಕಂಪನಿ, ನಾಗಾ ಪೊಲೀಸ್ 3 ಕಂಪನಿಗಳು, ಕರ್ನಾಟಕ ಪೊಲೀಸ್ 3 ಕಂಪನಿಗಳು, ತೆಲಂಗಾಣ ಪೊಲೀಸ್ 1 ಕಂಪನಿ, ಸಿಎಪಿಎಫ್ 1 ಪ್ಲಟೂನ್ ಇವುಗಳು ಇತರ ರಾಜ್ಯಗಳ ಸಶಸ್ತ್ರ ಪಡೆಗಳಾಗಿವೆ. ಪೊಲೀಸ್ ಠಾಣೆಗಳಲ್ಲಿ ಕ್ಯೂ ಆರ್‌ ಟಿ ಯನ್ನು ನೇಮಿಸಲಾಗುವುದು.
    60 ಗುಂಪು ಗಸ್ತು ಪಡೆಗಳು ಮತ್ತು 10 ಸ್ಟ್ರೈಕಿಂಗ್ ಪಡೆಗಳು ಇರುತ್ತವೆ. ಎನ್‌ಸಿಸಿ, ವಿದ್ಯಾರ್ಥಿ ಪೊಲೀಸರು ಸೇರಿದಂತೆ 148 ವಿಶೇಷ ಪೊಲೀಸರು ಭದ್ರತೆಗಾಗಿ ಮತಗಟ್ಟೆಗಳಲ್ಲಿ ಇರುತ್ತಾರೆ. ಜಿಲ್ಲಾಧಿಕಾರಿ ಕೆ. ಇಂಬಾಶೇಖರ್ ಜಿಲ್ಲಾ ಪೊಲೀಸ್ ವರಿಷ್ಠ ಪಿ. ಬಿಜೋಯ್ ಚುನಾವಣಾ ಉಪ ಜಿಲ್ಲಾಧಿಕಾರಿ ಪಿ. ಅಖಿಲ್ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *