Connect with us

    LATEST NEWS

    ಕಾಸರಗೋಡು : ವಿಷಪೂರಿತ ಹಾವು ಕಡಿದು ಮಹಿಳೆ ಮೃತ್ಯು..!

    ಕಾಸರಗೋಡು: ವಿಷಪೂರಿತ ಹಾವು ಕಡಿದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಕಾಸರಗೋಡಿನ ಪೈವಳಿಕೆ ಸಮೀಪದ ಕುರುಡಪದವು ಎಂಬಲ್ಲಿ ಬುಧವಾರ ರಾತ್ರಿ   ಸಂಭವಿಸಿದೆ.

    ರಾತ್ರಿ 12 ಗಂಟೆ ಸುಮಾರಿಗೆ ಈ ಘಟನೆ  ನಡೆದಿದೆ. ಪೈವಳಿಕೆ ಕುರುಡಪದವಿನ ಚೋಮು ( 64) ಮೃತಪಟ್ಟ ಮಹಿಳೆಯಾಗಿದ್ದಾಳೆ. ಮನೆಯಲ್ಲಿ  ಮಲಗಿದ್ದ ಚೋಮುರವರ ಕೈಗೆ ಯಾವುದೋ ಜೀವಿ ಕಡಿದ ಬಗ್ಗೆ ಅನುಭವವಾಗಿದ್ದು, ಎಚ್ಚರಗೊಂಡು ಕೂಡಲೇ ಸಹೋದರನಿಗೆ ತಿಳಿಸಿದ್ದಾರೆ. ಮನೆಯೊಳಗೆ ಶೋಧ ನಡೆಸಿದಾಗ ನಾಗರ ಹಾವು ಪತ್ತೆಯಾಗಿದೆ. ಕೂಡಲೇ ನೆರೆಮನೆಯರ ಸಹಾಯ ದಿಂದ ಆಸ್ಪತ್ರೆಗೆ ಚೋಮು ಅವರನ್ನು ತಲುಪಿಸಿದರೂ ಜೀವ ಉಳಿಸಲಾಗಲಿಲ್ಲ ಎಂದು ತಿಳಿದು ಬಂದಿದೆ.

    Share Information
    Advertisement
    Click to comment

    You must be logged in to post a comment Login

    Leave a Reply