Connect with us

LATEST NEWS

ಹಣಕ್ಕಾಗಿ ಕೆಲಸ ಮಾಡುತ್ದಿದ್ದ ಬ್ಯಾಂಕ್ ನಲ್ಲಿ ಅವ್ಯವಹಾರ – ಬೆಳಕಿಗೆ ಬರುತ್ತಿದೆ ಕಾರ್ತಿಕ್ ಭಟ್ ನ ಅವ್ಯವಹಾರಗಳು…!!

ಮುಲ್ಕಿ ನವೆಂಬರ್ 13: ಹೆಂಡತಿ ಮತ್ತು ಮಗುವನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾಗಿದ್ದ ಪಕ್ಷಿಕೆರೆಯ ಕಾರ್ತಿಕ್ ಭಟ್ ಹಣೆ ಬರಹ ಇದೀಗ ಒಂದೊಂದಾಗಿ ಬಯಲಾಗುತ್ತಿದೆ. ಐಷರಾಮಿ ಜೀವನಕ್ಕೆ ಹಣಕ್ಕಾಗಿ ತನ್ನ ಗೆಳೆಯನ ಚಿನ್ನದ ಮೇಲೂ ಕಾರ್ತಿಕ್ ಕಣ್ಣಿಟ್ಟು, ಚಿನ್ನವನ್ನು ಲಪಟಾಯಿಸಿದ್ದಾನೆ.


ಪಕ್ಷಿಕೆರೆ ಹೊಸಕಾಡು ನಿವಾಸಿ, ಸ್ಥಳೀಯ ಉದ್ಯಮಿ ಮಹಮ್ಮದ್‌ ಎನ್ನುವವರು ಪಕ್ಷಿಕೆರೆಯ ಬ್ಯಾಂಕ್ ನಲ್ಲಿ ತನ್ನ 10 ಪವನ್ ಚಿನ್ನ ಅಡವಿಟ್ಟಿದ್ದರು, ಅದರಿಂದ 1.60 ಲಕ್ಷ ಸಾಲ ಪಡೆದಿದ್ದರು. ಈ ಮಾಹಿತಿ ಪಡೆದ ಕಾರ್ತಿಕ್ ಭಟ್ ತಾನೂ ಕೆಲಸ ಮಾಡುತ್ತಿದ್ದ ಸಹಕಾರಿ ಸಂಘದಲ್ಲಿ ನಿಮ್ಮ ಚಿನ್ನಾಭರಣವನ್ನು ಅಡವಿಟ್ಟರೆ ಹೆಚ್ಚಿನ ಸಾಲ ನೀಡುದಾಗಿ ಭರವಸೆ ಕೊಟ್ಟಿದ್ದ. ಅದರಂತೆ ಮಹಮ್ಮದ್‌ ಅವರು ಪಕ್ಷಿಕೆರೆ ಬ್ಯಾಂಕ್‌ನಲ್ಲಿ ಅಡವಿಟ್ಟಿದ್ದ ಚಿನ್ನಾಭರಣವನ್ನು ಬಿಡಿಸಿದ್ದರು. ಆ ಚಿನ್ನಾಭರಣವನ್ನು ಕಾರ್ತಿಕ್‌ ಬ್ರಾಂಚ್‌ ಮ್ಯಾನೇಜರ್‌ ಆಗಿದ್ದ ಸೊಸೈಟಿಯಲ್ಲಿ ಅಡವಿರಿಸಿ 3.04 ಲಕ್ಷ ರೂ. ಸಾಲ ಪಡೆದುಕೊಂಡಿದ್ದರು.

ಕಾರ್ತಿಕ್ ಭಟ್ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ಸಾಲ ಪಡೆದಿದ್ದ ಸೊಸೈಟಿಗೆ ಹೋಗಿ ಮಾಹಿತಿ ಕೇಳಿದಾಗ. ಆ ಚಿನ್ನಾಭರಣವನ್ನು ಈಗಾಗಲೇ ಬಿಡಿಸಿಲಾಗಿದೆ ಎಂದು ತಿಳಿದಿದೆ. ಮಹಮ್ಮದ್‌ ಅಡವಿರಿಸಿದ್ದ 10 ಪವನ್‌ ಚಿನ್ನಾಭರಣವನ್ನು ಮ್ಯಾನೇಜರ್‌ ಆಗಿದ್ದ ಕಾರ್ತಿಕ್‌ ಬಿಡಿಸಿಕೊಂಡಿದ್ದ. ಈ ಚಿನ್ನಾಭರಣವನ್ನು ಕಾರ್ತಿಕ್‌ ಹೆಚ್ಚಿನ ಬೆಲೆಗೆ ಬೇರೆಡೆ ಮಾರಾಟ ಮಾಡಿರಬಹುದು ಅಥವಾ ಅಡವಿರಿಸಿರುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.

ಅಲ್ಲದೆ ಕಾರ್ತಿಕ್ ಭಟ್ ತಾನು ಕೆಲಸ ಮಾಡುತ್ತಿದ್ದ ಸೊಸೈಟಿಯಲ್ಲಿ ಹಣಕ್ಕಾಗಿ ಕೆಲವು ಅವ್ಯವಹಾರಗಳಲ್ಲಿ ತೊಡಗಿಕೊಂಡಿದ್ದ ಈ ಕಾರಣಕ್ಕೆ ಆತನನ್ನು ಕೆಲಸದಿಂದ ತೆಗೆಯಲಾಗಿತ್ತು. ಮಹಮ್ಮದ್‌ ಅಡವಿರಿಸಿದ್ದ ಚಿನ್ನಾಭರಣದ ಪ್ರಕರಣ ಸೇರಿದಂತೆ ಹಲವು ಅವ್ಯವಹಾರಗಳು ಕಂಡು ಬಂದ ಹಿನ್ನೆಲೆಯಲ್ಲಿ ಕಾರ್ತಿಕ್‌ ತಾನು ಮ್ಯಾನೇಜರ್‌ ಆಗಿದ್ದ ಸುರತ್ಕಲ್‌ ಶಾಖೆಯಿಂದ ವಜಾಗೊಂಡಿದ್ದ ಎನ್ನುವುದೂ ಬೆಳಕಿಗೆ ಬಂದಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *