Connect with us

    LATEST NEWS

    ರಾಷ್ಟ್ರದಾದ್ಯಂತ ಸದ್ದು ಮಾಡಿದ ಯು.ಟಿ ಖಾದರ್ ” ಕರ್ನಾಟಕ ಹೊತ್ತಿ ಉರಿಯಲಿದೆ ” ಹೇಳಿಕೆ

    ರಾಷ್ಟ್ರದಾದ್ಯಂತ ಸದ್ದು ಮಾಡಿದ ಯು.ಟಿ ಖಾದರ್ ” ಕರ್ನಾಟಕ ಹೊತ್ತಿ ಉರಿಯಲಿದೆ ” ಹೇಳಿಕೆ

    ಮಂಗಳೂರು ಡಿಸೆಂಬರ್ 18: ರಾಜ್ಯದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಮಾಡಿದರೆ ಇಡೀ ಕರ್ನಾಟಕ ಹೊತ್ತಿ ಉರಿಯಲಿದೆ ಎಂಬ ಮಾಜಿ ಸಚಿವ ಯು.ಟಿ ಖಾದರ್ ಅವರ ಹೇಳಿಕೆ ಈಗ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದೆ.

    ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ದ ನಿನ್ನೆ ನಡೆದ ಕಾಂಗ್ರೇಸ್ ನ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಸಚಿವ ಯು.ಟಿ ಖಾದರ್ ಕೇಂದ್ರ ಸರಕಾರ ನಮ್ಮ ಜೀವ ತೆಗೆದರೂ ಎನ್ ಆರ್ ಸಿ ಜಾರಿಗೆ ಬಿಡುವುದಿಲ್ಲ ಎಂದ ಅವರು , ಪೌರತ್ವ ಸಾಭೀತು ಪಡಿಸಬೇಕಾದದ್ದು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಮಾತ್ರ. ಅವರು ದೇಶಕ್ಕಾಗಿ ಯಾವುದೇ ಒಳ್ಳೆಯ ಕೆಲ ಮಾಡಿಲ್ಲ ಎಂದು ಅವರು ಆರೋಪಿಸಿದರು.

    ಇಡೀ ದೇಶದಲ್ಲಿ ಪೌರತ್ವ ತಿದ್ದುಪಡಿ ಮಸೂದೆ ವಿರುದ್ದ ಭಾರಿ ಹಿಂಸಾಚಾರ ನಡೆದರೂ , ಕರ್ನಾಟಕದಲ್ಲಿ ಮಾತ್ರ ಯಾವುದೇ ಪ್ರತಿಭಟನೆ ನಡೆಯದೇ ಶಾಂತಿ ಕಾಪಾಡಿಕೊಂಡ ಬಂದಿದೆ. ಆದರೆ ರಾಜ್ಯ ಮುಖ್ಯಮಂತ್ರಿಗಳು ಕರ್ನಾಟಕದಲ್ಲಿ ಪೌರತ್ವ ಕಾಯ್ದೆ ಜಾರಿ ಮಾಡಲಾಗುವುದು ಹೇಳಿದ್ದು, ಒಂದು ವೇಳೆ ಜಾರಿ ಮಾಡಿದರೆ ಕರ್ನಾಟಕ ಹೊತ್ತಿ ಉರಿಯಲಿದೆ ಎಂದು ಮುಖ್ಯಮಂತ್ರಿಗಳಿಗೆ ಎಚ್ಚರಿಕೆ ನೀಡಿದರು.
    ಈಗಾಗಲೇ ರಾಷ್ಟ್ರದಾದ್ಯಂತ ಖಾದರ್ ಅವರ ಹೇಳಿಕೆ ಭಾರಿ ಸದ್ದು ಮಾಡಿದ್ದು, ರಾಷ್ಟ್ರೀಯ ಮಾಧ್ಯಮಗಳು ಕಾಂಗ್ರೇಸ್ ಮುಖಂಡರು ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ವರದಿ ಮಾಡಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *