LATEST NEWS
ಮಂಗಳೂರು ಕುಕ್ಕರ್ ಬಾಂಬ್ ಪ್ರಕರಣದ ಪ್ರಮುಖ ಮಾಸ್ಟರ್ ಮೈಂಡ್ ದೆಹಲಿಯಲ್ಲಿ ಅರೆಸ್ಟ್
ನವದೆಹಲಿ ಸೆಪ್ಟೆಂಬರ್ 15 : ಮಂಗಳೂರಿನಲ್ಲಿ ಕಳೆದ ವರ್ಷ ಸಂಭವಿಸಿದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಸಂಚು ರೂಪಿಸಿದ್ದ ಐಸಿಸ್ ಉಗ್ರಗಾಮಿ ಸಂಘಟನೆಯ ಸಂಚುಕೋರ, ಕರ್ನಾಟಕದ ಶಿವಮೊಗ್ಗ ಮೂಲದ ಅರಾಫತ್ ಅಲಿ ಎಂಬಾತನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಗುರುವಾರ ಬಂಧಿಸಿ ಕೀನ್ಯಾದ ನೈರೋಬಿಯಿಂದ ದಿಲ್ಲಿ ವಿಮಾನ ನಿಲ್ದಾಣಕ್ಕೆ ಬ೦ದಿಳಿದ ಈತನನ್ನು ಕೂಡಲೇ ಬಂಧಿಸಿಲಾಗಿದೆ.
ಭಾರತದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸುವ ವಿದೇಶಿ ಮೂಲದ ಇಸ್ಲಾಮಿಕ್ ಸ್ಟೇಟ್ (ಐಸಿಸ್) ಸಂಚು ವಿಫಲಗೊಳಿಸು ವಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ ಎಂದು ಎನ್‌ಐಎ ಹೇಳಿದೆ. ‘ಅಲಿ 2020 ರಿಂದ ಐಸಿಸ್ ಮೂಲಕ ಭಯೋತ್ಪಾದಕ ಕೃತ್ಯ ಯೋಜಿಸಿದ್ದ. ಆಗಿನಿಂದ ಈತ ತಲೆ ಮರೆಸಿಕೊಂಡಿದ್ದ ಆತ ಐಸಿಸ್‌ನ ಭಾರತ ವಿರೋಧಿ ಭಯೋತ್ಪಾದಕ ಅಜೆಂಡಾಗ ಕುಮ್ಮಕ್ಕು ನೀಡಲು ವಿದೇಶದಿಂದಲೇ ಕಾರ್ಯನಿರ್ವಹಿಸುತ್ತಿದ್ದ ಎಂದು ಎನ್ಐಎ ತಿಳಿಸಿದೆ.
ಅರಾಫತ್ ಅಲಿ ಕರ್ನಾಟಕದ ಶಿವಮೊಗ್ಗ ನಿವಾಸಿ ಯಾಗಿದ್ದುವಿದೇಶದಿಂದ ಕೆಲಸ ಮಾಡುತ್ತಿರುವ ಮುಸ್ಲಿಂ ಯುವಕರನ್ನು ಗುರುತಿಸಿ ಅವರ ಮನಪರಿವರ್ತನೆ ಮಾಡಿ ಅವರನ್ನು ಐಸಿಸ್ ಗೆ ಸೇರಿಸಿಕೊಳ್ಳುವುದು ಇತನ ಕೆಲಸವಾಗಿತ್ತು. ಅರಾಫತ್ ಅಲಿ ಶಿವಮೊಗ್ಗದ ತೀರ್ಥಹಳ್ಳಿಯವರು. ತೀರ್ಥಹಳ್ಳಿಯ ಸಹ್ಯಾದ್ರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಡಿಪ್ಲೊಮಾ ಮುಗಿಸಿ ದುಬೈಗೆ ತೆರಳಿದ್ದ.
ಶಿವಮೊಗ್ಗ ಭಯೋತ್ಪಾದನೆ ಸಂಚು ಪ್ರಕರಣದಲ್ಲಿದ್ದ ಆರೋಪಿ ಮೊಹಮ್ಮದ್ ಶಾರಿಕ್, ಮಂಗಳೂರು ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಪ್ರೆಶರ್ ಕುಕ್ಕರ್ ಬಾಂಬ್ ಇಡಲು ಆಟೋ ರಿಕ್ಷಾದಲ್ಲಿ ತೆರಳುತ್ತಿದ್ದ ವೇಳೆ ಅದು ಸ್ಪೋಟಗೊಂಡಿದೆ.
ಅರಾಫತ್ ಅಲಿ ಮತ್ತೊಬ್ಬ ಆರೋಪಿ ಮೊಹಮ್ಮದ್ ಶಾರಿಕ್‌ಗೆ ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ಹಣ ನೀಡಿದ್ದ ಎಂದು ಆರೋಪಿಸಲಾಗಿದೆ. ಈತ ಶಾರಿಕ್ ಗೆ ಒಂದೆರಡು ಬಾರಿ ಹಣ ವರ್ಗಾವಣೆ ಮಾಡಿದ್ದ ಎನ್ನಲಾಗಿದೆ. ಅರಾಫತ್ ಅಲಿ ಅವರು ಪ್ರಕರಣದ ಇತರ ಆರೋಪಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಮತ್ತು ಪಿತೂರಿಯ ಯೋಜನೆ ಮತ್ತು ಕಾರ್ಯಗತಗೊಳಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಎಂದು ಸಂಸ್ಥೆ ಆರೋಪಿಸಿದೆ. ಎನ್ಐಎ ತನಿಖೆಯ ಪ್ರಕಾರ, 2020 ರ ಮಂಗಳೂರಿನಲ್ಲಿ ವಾಲ್ ಉಗ್ರಗಾಮಿಗಳ ಪರ ಗೋಡೆಬರಹದಲ್ಲೂ ಇವರ ಕೈವಾಡ ಇದೆ ಎಂದು ಹೇಳಲಾಗಿದೆ.