KARNATAKA
ಕರ್ನಾಟಕವೇ ಹನುಮನ ಜನ್ಮಸ್ಥಳ: ಯೋಗಿ ಆದಿತ್ಯನಾಥ
ಬೆಂಗಳೂರು, ಸೆಪ್ಟೆಂಬರ್ 02: ಸಂಜೀವಿನಿ ಪರ್ವತವನ್ನೇ ಹೊತ್ತುತಂದ, ಲಂಕೆಗೆ ಸೇತುವೆ ಕಟ್ಟಲು ಶ್ರಮಿಸಿದ ಸಂಕಷ್ಟ ನಿವಾರಕ ಹನುಮನ ನಾಡು ಕರ್ನಾಟಕ ಎಂದು ಹೊಗಳುವ ಮೂಲಕ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಹನುಮನ ಜನ್ಮಭೂಮಿ ಕರ್ನಾಟಕ ಎನ್ನುವ ವಾದಕ್ಕೆ ಪರೋಕ್ಷ ಸಮ್ಮತಿ ನೀಡಿದರು.
ನೆಲಮಂಗಲ ಸಮೀಪದ ಮಹದೇವಪುರದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಕೃತಿ ಚಿಕಿತ್ಸಾ ಕೇಂದ್ರ ‘ಕ್ಷೇಮವನ’ ಉದ್ಘಾಟಿಸಿ ಅವರು ಮಾತನಾಡಿದರು. ‘ಕರ್ನಾಟಕ, ಉತ್ತರ ಪ್ರದೇಶದ ಮಧ್ಯೆ ಸುದೀರ್ಘ ಕಾಲದಿಂದ ಗಟ್ಟಿ ಸಂಬಂಧವಿದೆ. ಬಜರಂಗಬಲಿ ಕರ್ನಾಟಕದವನು. ರಾಮಸೇತುವೆ ನಿರ್ಮಾಣದ ಕೆಲಸ ಆಂಜನೇಯನಿಂದಲೇ ಆಯಿತು’ ಎಂದು ಹೇಳಿದರು.
ಆಂಧ್ರಪ್ರದೇಶ ಸೇರಿದಂತೆ ಹಲವು ರಾಜ್ಯಗಳು ಹನುಮನ ಜನ್ಮ ಭೂಮಿ ತಮ್ಮ ರಾಜ್ಯದಲ್ಲಿದೆ ಎಂದು ಪ್ರತಿಪಾದಿಸಿವೆ.
ಆಂಧ್ರಪ್ರದೇಶ ತಿರುಪತಿ ತಿರುಮಲ ಹನುಮಂತನ ಜನ್ಮಸ್ಥಳ ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರತಿಪಾದಿಸಿದೆ.