Connect with us

    DAKSHINA KANNADA

    ಅಡ್ಯನಡ್ಕ ಕರ್ಣಾಟಕ ಬ್ಯಾಂಕ್ ಶಾಖೆಗೆ ಕನ್ನ – ಬ್ಯಾಂಕ್ ನಲ್ಲಿ ಸೆಕ್ಯುರಿಟಿ ಸಿಸ್ಟಮ್ ವೀಕ್ ಇತ್ತು -ಎಸ್ಪಿ ರಿಷ್ಯಂತ್ ಸಿ.ಬಿ

    ವಿಟ್ಲ ಫೆಬ್ರವರಿ 08: ಅಡ್ಯನಡ್ಕ ಸಮೀಪದ ಕರ್ಣಾಟಕ ಬ್ಯಾಂಕ್ ಶಾಖಾ ಕಚೇರಿಯಿಂದ ಬುಧವಾರ ರಾತ್ರಿ ಭಾರಿ ಪ್ರಮಾಣದ ನಗ ನಗದು ಕಳವಾಗಿದೆ. ಕಿಟಕಿಯ ಸರಳುಗಳನ್ನು ಕತ್ತರಿಸಿ ಕಟ್ಟಡದೊಳಗೆ ನುಗ್ಗಿದ ಕಳ್ಳರು ಹಣ-ಒಡವೆ ಕದ್ದೊಯ್ದಿದ್ದಾರೆ. ಕಳವು ಕೃತ್ಯ ನಡೆದಿರುವುದು ಗುರುವಾರ ಬೆಳಿಗ್ಗೆ ಗೊತ್ತಾಗಿದೆ.


    ಸುಮಾರು 20 ವರುಷ ಹಳೆಯ ಕಟ್ಟಡದಲ್ಲಿ ಈ ಬ್ಯಾಂಕ್ ಶಾಖೆ ಕಾರ್ಯಾಚರಿಸುತ್ತಿತ್ತು ಎಂದು ತಿಳಿದು ಬಂದಿದ್ದು. ಕಳ್ಳರು ಗ್ಯಾಸ್ ಕಟ್ಟರ್ ಬಳಸಿ ಬ್ಯಾಂಕಿನ ಹಿಂಬಾಗದಿಂದ ಒಳ ನುಗ್ಗಿದ್ದಾರೆ. ಬ್ಯಾಂಕ್ ನ ಲಾಕರ್ ಗೆ ಕಳ್ಳರು ಕನ್ನ ಹಾಕಿದ್ದು, ಭಾರೀ ಪ್ರಮಾಣ ಚಿನ್ನ ನಗದು ದರೋಡೆಯಾಗಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಕಳುವಾದ ನಿರ್ದಿಷ್ಟ ಮೊತ್ತದ‌ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ. ಶ್ವಾನದಳ, ಬೆರಳಚ್ಚು ಮತ್ತು ಫಾರೆನ್ಸಿಕ್ ತಂಡದಿಂದ ಪರಿಶೀಲನೆ ನಡೆಸಿದ್ದಾರೆ.


    ಘಟನಾ ಸ್ಥಳಕ್ಕೆ ದಕ್ಷಿಣಕನ್ನಡ ಜಿಲ್ಲಾ ಎಸ್ಪಿ ರಿಷ್ಯಂತ್ ಸಿ.ಬಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಅವರು ಕಳುವಾದ ವಸ್ತುಗಳ ಬಗ್ಗೆ ಮಾಹಿತಿ ಇನ್ನೂ ಬಂದಿಲ್ಲ. ಈ ಬ್ಯಾಂಕ್ ಪರಿಶೀಲನೆ ವೇಳೆ ಬ್ಯಾಂಕಿನ ಸೆಕ್ಯುರಿಟಿ ಸಿಸ್ಟಮ್ ವೀಕ್ ಇತ್ತು ಎಂದ ಅವರು ಲಾಕರ್ ಸಿಸ್ಟಮ್ ಇರುವ ಬ್ಯಾಂಕುಗಳು ತಮ್ಮ ಸೆಕ್ಯುರಿಟಿ ಸರಿಪಡಿಸಲು ಪೋಲೀಸರ ಸೂಚನೆ ನೀಡಿದ್ದೆವೆ ಎಂದರು, ಪ್ರಕರಣವನ್ನು ಪತ್ತೆ ಹಚ್ಚಲು ವಿಶೇಷ ತಂಡ ರಚಿಸಿಲಾಗಿದ್ದು, ಎಲ್ಲಾ ಆಯಾಮಗಳಲ್ಲಿ ತನಿಖೆಯನ್ನು ನಡೆಸಲಾಗುವುದು ಎಂದರು. ಈಗಾಗಲೇ ಪೊಲೀಸರು ಬ್ಯಾಂಕ್ ಸೇರಿದಂತೆ ಪರಿಸರದ ಎಲ್ಲಾ ಸಿಸಿ ಕ್ಯಾಮರಾಗಳ ಪರಿಶೀಲನೆ ಆರಂಭಿಸಿದ್ದಾರೆ.


    ಬ್ಯಾಂಕ್ ಕಳ್ಳತನ ಕೃತ್ಯವನ್ನು ನುರಿತ ಕಳ್ಳರ ತಂಡ ಮಾಡಿರುವ ಸಾಧ್ಯತೆ, ಯಾವುದೇ ರೀತಿಯ ಕುರುಹು ಬಿಟ್ಟುಕೊಡದೆ ತಂದ ಕೃತ್ಯ ಎಸಗಿದೆ. ಕಳ್ಳಥ ಮಾಡಿ ಬಳಿಕ ಪಕ್ಕದಲ್ಲೇ ಇರುವ ಶಾಲೆಯ ಶೌಚಾಲಯದ ಬಳಿ ನೀರನ್ನು ಬಳಸಿದ್ದಾರೆ.
    ಈಗಾಗಲೇ ಬ್ಯಾಂಕ್ ಲಾಕರ್ ನಲ್ಲಿ ಚಿನ್ನ ಹಾಗು ಇತರ ದಾಖಲೆಗಳನ್ನು ಇಟ್ಟಿರುವ ಸಾರ್ವಜನಿಕರು, ಕಳ್ಳತನದ ಸುದ್ಧಿ ಕೇಳಿ ಬ್ಯಾಂಕ್ ಮುಂದೆ ಜಮಾಯಿಸಿದ್ದು, ಲಾಕರ್ ನಲ್ಲಿಟ್ಟಿರುವ ಅಮೂಲ್ಯ ವಸ್ತುಗಳ ಬಗ್ಗೆ ಸಾರ್ವಜನಿಕರು ಆತಂಕದಲ್ಲಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *