LATEST NEWS
ಕಾರ್ಕಳ – ತೊಟ್ಟಿಲಲ್ಲಿ ಕರುವನ್ನು ತೂಗುವ ವಿಡಿಯೋ ವೈರಲ್
ಕಾರ್ಕಳ ಜನವರಿ 09: ಪುಟಾಣಿ ಕರುವನ್ನು ತೊಟ್ಟಿಲಲ್ಲಿ ಕುಳ್ಳಿರಿಸಿ ಅದನ್ನು ತೂಗುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದೀಗ ಯಾಕೆ ಆ ರೀತೀ ಮಾಡುತ್ತಾರೆ ಎನ್ನುವುದು ತಿಳಿದು ಬಂದಿದೆ.
ಲೋಕ ಕಲ್ಯಾಣಕ್ಕಾಗಿ ಕರುವನ್ನು ಡೋಲಾರೋಪಣಾ ಸೇವೆ ನಡೆಸಿದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಕರುವೊಂದನ್ನು ತೊಟ್ಟಿಲಿನಲ್ಲಿತೂಗುವ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಕಾರ್ಕಳ ತಾಲೂಕಾಫೀಸ್ ಬಳಿಯ ಅನಂತಕೃಷ್ಣ ಗೋಶಾಲೆಯಲ್ಲಿ ನಡೆದ ಈ ಡೋಲಾರೋಪಣಾ ಸೇವಾ ಕಾರ್ಯವನ್ನು ರಾಮದಾಸ ಭಟ್ ಹಾಗೂ ಅನಂತಕೃಷ್ಣ ಗೋಶಾಲೆಯ ಮುಖ್ಯಸ್ಥ ಗೋಪಿನಾಥ ಭಟ್ ನೇತೃತ್ವದಲ್ಲಿ ನಡೆದಿದೆ. ಗೋಪಾಲಕೃಷ್ಣ ಜಪ ಪಠಿಸಿ, ಗೋಪಾಲಕೃಷ್ಣ ಹೋಮದೊಂದಿಗೆ ಕರುವನ್ನು ತೊಟ್ಟಿಲಿಗೆ ಹಾಕಿ, ಹಣ್ಣುಕಾಯಿ ಹರಿವಾಣದೊಂದಿಗೆ ಮಂಗಳಾರತಿ ಮಾಡುವ ವೀಡಿಯೋ ಇದಾಗಿದೆ. ಲೋಕಾಕಲ್ಯಾಣಾರ್ಥವಾಗಿ, ದೇಶದ ಸುಭಿಕ್ಷೆ, ಇಷ್ಟಾರ್ಥ ಸಿದ್ದಿ, ದೇವರ ಪ್ರಸನ್ನಕೋಸ್ಕರವಾಗಿ ಈ ಸೇವೆ ನಡೆಸಲಾಗಿದೆ ಎಂದು ಗೋಪಿನಾಥ ಭಟ್ ಮಾಹಿತಿ ನೀಡಿದ್ದಾರೆ.