LATEST NEWS
ಕಾರ್ಕಳ : ಕೆದಿಂಜೆಯಲ್ಲಿ ಬಾವಿಗೆ ಬಿದ್ದ ಮಹಿಳೆಯ ರಕ್ಷಣೆ..!!
ಕಾರ್ಕಳ ಜನವರಿ 20: ಆಕಸ್ಮಿಕವಾಗಿ ತೆರೆದ ಬಾವಿಗೆ ಬಿದ್ದಿದ್ದ ಮಹಿಳೆಯೊಬ್ಬರನ್ನ ರಕ್ಷಣೆ ಮಾಡಲಾದ ಘಟನೆ ಕಾರ್ಕಳ ತಾಲೂಕಿನ ನಂದಳಿಕೆ ಗ್ರಾಮದ ಕೆದಿಂಜೆ ಕುಂಟಲ ಗುಂಡಿ ಎಂಬಲ್ಲಿ ನಿನ್ನೆ ಸಂಜೆ ನಡೆದಿದೆ.
ಹರಿಣಾಕ್ಷಿ 31 ವರ್ಷ ಬಾವಿಗೆ ಬಿದ್ದ ಮಹಿಳೆ. ಸುಮಾರು 35 ಅಡಿ ಆಳದ ಬಾವಿಗೆ ಮಹಿಳೆ ಕಾಲುಜಾರಿ ಆಕಸ್ಮಿಕವಾಗಿ ಬಿದ್ದಿದ್ದು ಕಾರ್ಕಳ ಅಗ್ನಿಶಾಮಕ ದಳದವರು ಹಾಗೂ ಕಾರ್ಕಳ ಆರಕ್ಷಕ ಠಾಣೆಯವರು ಬಾವಿಗಿಳಿದು ಮಹಿಳೆಯನ್ನು ರಕ್ಷಿಸಿದ್ದಾರೆ. ಅಗ್ನಿಶಾಮಕ ಠಾಣಾಧಿಕಾರಿ ಅಲ್ಬರ್ಟ್ ಮೊನಿಸ್, ಅಗ್ನಿಶಾಮಕ ಸಿಬ್ಬಂದಿಗಳಾದ ಹರಿಪ್ರಸಾದ್ ಶೆಟ್ಟಿಗಾರ್, ಜಯ ಮೂಲ್ಯ ,ಮನೋಹರ್ ಪ್ರಸಾದ್, ಹಸನ್ ಸಾಬ್ ಮುಲ್ತಾನಿ, ಸದಾನಂದ ಕಾರ್ಯಾಚರಣೆಯಲ್ಲಿ ಉಪಸ್ಥಿತರಿದ್ದರು.
You must be logged in to post a comment Login