Connect with us

    LATEST NEWS

    ಕಾರ್ಕಳ -ಹಠಾತ್ ಅಸ್ವಸ್ತಗೊಂಡ ಬಸ್ ಚಾಲಕ – ಬಸ್ ಹಿಮ್ಮುಖವಾಗಿ ಚಲಿಸಿ ತಪ್ಪಿದ ಅನಾಹುತ

    ಉಡುಪಿ ಜೂನ್ 28: ಖಾಸಗಿ ಬಸ್ ಚಾಲಕನೊಬ್ಬನಿಗೆ ಬಸ್ ಚಾಲನೆ ವೇಳೆ ಹಠಾತ್ ಆಗಿ ಅಸ್ವಸ್ಥಗೊಂಡ ಘಟನೆ ನಡೆದಿದ್ದು, ಈ ವೇಳೆ ಬಸ್ ಹಿಮ್ಮುಖವಾಗಿ ಚಲಿಸಿದ ಕಾರಣ ದೊಡ್ಡ ಅನಾಹುತ ತಪ್ಪಿದೆ.


    ಉಡುಪಿದಿಂದ ಪರ್ಕಳಕ್ಕೆ ತೆರಳುತ್ತಿದ್ದ ಬಸ್ ಚಾಲಕ ಕೃಷ್ಣ ನಾಯಕ್ ಕೋಕ್ಕರ್ಣೆಗೆ ಚಾಲನೆ ವೇಳೆ ಅಸ್ವಸ್ಥಗೊಂಡಿದ್ದಾರೆ. ಈ ವೇಳೆ ಅವರು ಬಸ್ ಸ್ಟೇರಿಂಗ್ ಬಿಟ್ಟ ಕಾರಣ ಬಸ್ ಹಿಂದೆಗೆ ಚಲುಸಿತ್ತು , ಕೂಡಲೇ ಕೆಲವು ಮಹಿಳಾ ಪ್ರಯಾಣಿಕರು ಜಿಗಿದು ತಮ್ಮ ಪ್ರಾಣವನ್ನು ರಕ್ಷಿಸಿಕೊಂಡ ಘಟನೆ ಸಂಭವಿಸಿದೆ.

    ಸಾಧ್ಯವಾದಷ್ಟು ಬೇಗ ಬಸ್ ನಿಲ್ಲಿಸಲು ಪ್ರಯತ್ನಿಸಿದರೂ, ಬಸ್ ಹಿಂದಕ್ಕೆ ಚಲಿಸಲು ಪ್ರಾರಂಭಿಸಿತು. ಚಾಲಕ ಕೃಷ್ಣ ನಾಯಕ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಸೇರಿಸಲಾಯಿತು. ಈ ವೇಳೆ ಬಸ್ ನಲ್ಲಿ 40ಕ್ಕೂ ಅಧಿಕ ಪ್ರಯಾಣಿಕರಿದ್ದರು, ಬಸ್ ನ ಹಿಂಭಾಗಕ್ಕೆ ಸ್ವಲ್ಪ ಹಾನಿಯಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply