LATEST NEWS
ಸಾರ್ವಜನಿಕವಾಗಿ ಬೆಂಡೆ ಬೀಜ ವಿತರಣೆ ಕಾರ್ಕಳ ಶಾಸಕರಿಂದ ಲಾಕ್ಡೌನ್ ಉಲ್ಲಂಘನೆ – ಕಾಂಗ್ರೇಸ್ ಮುಖಂಡ ಶುಭದ ರಾವ್ ಆರೋಪ
ಕಾರ್ಕಳ ಜೂನ್ 06: ಲಾಕ್ ಡೌನ್ ಸಂದರ್ಭ ಕಾರ್ಕಳ ತಾಲೂಕಿನಾದ್ಯಂತ ಬಿಳಿ ಬೆಂಡೆ ಬೀಜ ವಿತರಣೆ ಕಾರ್ಯಕ್ರಮವನ್ನು ಸಾರ್ವಜನಿಕವಾಗಿ ನಡೆಸಿ ಕಾರ್ಕಳ ಶಾಸಕ ಸುನಿಲ್ ಕುಮಾರ್ ಲಾಕ್ಡೌನ್ ನಿಯಮ ಉಲ್ಲಂಘಿಸಿದ್ದಾರೆ ಎಂದು ಕಾಂಗ್ರೇಸ್ ಮುಖಂಡ ಶುಭದ ರಾವ್ ಆರೋಪಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಏರಿಕೆ ಹಿನ್ನಲೆ ಈಗಾಗಲೆ 40ಕ್ಕೂ ಅಧಿಕ ಗ್ರಾಮಗಳನ್ನು ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ. ಈ ನಡುವೆ ಜವಬ್ದಾರಿ ಸ್ಥಾನದಲ್ಲಿರುವ ಕಾರ್ಕಳ ಶಾಸಕ ಸುನಿಲ್ ಕುಮಾರ್ ಬೆಂಡೆ ಬೆಂಡೆ ಬೀಜ ವಿತರಣೆ ಕಾರ್ಯಕ್ರಮವನ್ನು ತಾಲೂಕಿನಾದ್ಯಂತ ಸಾರ್ವಜನಿಕವಾಗಿ ಮಾಡುತ್ತಿದ್ದಾರೆ. ಕೊರೊನಾ ಪ್ರಕರಣ ಹೆಚ್ಚಿರುವ ಸಂದರ್ಭ ಜವಾಬ್ದಾರಿ ಸ್ಥಾನದಲ್ಲಿರುವ ಶಾಸಕರು ಸಾರ್ವಜನಿಕವಾಗಿ ಕಾರ್ಯಕ್ರಮ ಮಾಡಿ ಸಮಾಜಕ್ಕೆ ತಪ್ಪು ಸಂದೇಶ ರವಾನಿಸುತ್ತಿದ್ದಾರೆ. ಜನಸಾಮಾನ್ಯರಿಗೊಂದು ಕಾನೂನು, ಕಾರ್ಕಳ ಶಾಸಕ ಸುನಿಲ್ ಕುಮಾರ್ ಗೊಂದು ಕಾನೂನು ಜಿಲ್ಲೆಯಲ್ಲಿದೆಯೇ? ಎಂದು ಕಾರ್ಕಳದ ಕಾಂಗ್ರೆಸ್ ಮುಖಂಡ ಶುಭದ ರಾವ್ ಜಿಲ್ಲಾಧಿಕಾರಿಯವರನ್ನು ಪ್ರಶ್ನಿಸಿದ್ದಾರೆ.
ಕ್ಷೇತ್ರದಲ್ಲಿ ಕೊರೋನಾ ಸಂಬಂಧಿ ಹಲವು ಸಮಸ್ಯೆಗಳಿವೆ.ಇವನ್ನು ಶಾಸಕರಾದವರು ಅದ್ಯತೆಯ ಮೇರೆಗೆ ಮಾಡಬೇಕು.ಅದು ಬಿಟ್ಟು ಕಳೆದ ಕೆಲವು ದಿನಗಳಿಂದ ಕ್ಷೇತ್ರದಾದ್ಯಂತ ಕಾರ್ಕಳ ಬ್ರಾಂಡ್ ಬೆಂಡೆ ಬೀಜಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಶಾಸಕರು ಮಾಡುತ್ತಿದ್ದಾರೆ.ಬೇಕಿದ್ದರೆ ಮನೆಮನೆಗೆ ಹೋಗಿ ಬೆಂಡೆ ಬೀಜ ಹಂಚಲಿ.ಆದರೆ ಸಾರ್ವಜನಿಕವಾಗಿ ಕಾರ್ಯಕ್ರಮ ಮಾಡುವುದು ಸರಿಯಲ್ಲ.ಈ ಬಗ್ಗೆ ಜಿಲ್ಲಾಧಿಕಾರಿಗಳು ಶಾಸಕರಿಗೆ ತಕ್ಷಣ ಸೂಚನೆ ನೀಡಬೇಕು.ಕಾರ್ಯಕ್ರಮ ಮಾಡಿದ್ದಕ್ಕಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಶುಭದ ರಾವ್ ಜಿಲ್ಲಾಧಿಕಾರಿಯವರನ್ನು ಒತ್ತಾಯಿಸಿದ್ದಾರೆ.