Connect with us

LATEST NEWS

ವೇದವ್ಯಾಸ್ ಕಾಮತ್ ಪರ ಕಾರ್ಕಳ ಶಾಸಕ ಸುನಿಲ್ ಕುಮಾರ್ ಪ್ರಚಾರ

ವೇದವ್ಯಾಸ್ ಕಾಮತ್ ಪರ ಕಾರ್ಕಳ ಶಾಸಕ ಸುನಿಲ್ ಕುಮಾರ್ ಪ್ರಚಾರ

ಮಂಗಳೂರು ಮೇ.3: ಕಾರ್ಕಳ ಶಾಸಕ, ವಿಪಕ್ಷ ಮುಖ್ಯ ಸಚೇತಕ ಸುನಿಲ್ ಕುಮಾರ್ ಅವರು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಡಿ.ವೇದವ್ಯಾಸ ಕಾಮತ್ ಅವರ ಪರ ಭರ್ಜರಿ ಪ್ರಚಾರ ನಡೆಸಿದ್ದಾರೆ.

ಇಂದು ನಗರದ ನೂಜಿಯಿಂದ ಜಪ್ಪಿನಮೊಗರು ವರೆಗೆ ಪಾದಯಾತ್ರೆ ನಡೆಸಿ ಮಂಗಳೂರಿನಲ್ಲಿ ಬಿಜೆಪಿ ಪರವಾಗಿ ವ್ಯಕ್ತವಾಗಿರುವ ಮತದಾರರ ಬೆಂಬಲ ಹಾಗೂ ಸ್ಪಂದನೆಗೆ ಕೃತಜ್ಞತೆ ಸಲ್ಲಿಸಿ , ಕಾರ್ಯಕರ್ತರನ್ನು ಮತ್ತಷ್ಟು ಹುರಿದುಂಬಿಸಿದರು. ವೇದ ವ್ಯಾಸ ಕಾಮತ್ ಅವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸುವಂತೆ ಮನವಿ ಮಾಡಿದರು.

ಬೆಳಗ್ಗೆ ನಾಗೋರಿಯಲ್ಲಿ ಯುವ ಕಾರ್ಯಕರ್ತರನ್ನು ಬಿಜೆಪಿಗೆ ಸೇರ್ಪಡೆಗೊಳಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು ನೂರಾರು ಕಾರ್ಯಕರ್ತರೊಂದಿಗೆ ಪಾದಯಾತ್ರೆ ಆರಂಭಿಸಿದರು. ಬಳಿಕ ಮನೆ ಮನೆ ಭೇಟಿ ವೇಳೆ ಸ್ಧಳೀಯರು ಅಲ್ಲಿನ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು.

ಉಜ್ಜೋಡಿಯಲ್ಲಿ ಸುನಿಲ್ ಕುಮಾರ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ದೊರೆತ ಅಮೋಘ ಬೆಂಬಲಕ್ಕೆ ಹರ್ಷ ವ್ಯಕ್ತಪಡಿಸಿದ ಸುನಿಲ್ ಕುಮಾರ್, ಕರಾವಳಿಯಲ್ಲಿ ಈ ಬಾರಿ ಅತ್ಯಧಿಕ ಸಂಖ್ಯೆಯಲ್ಲಿ ಬಿಜೆಪಿ ಗೆಲವು ಸಾಧಿಸಲಿದೆ ಎಂದು ನುಡಿದರು.
ಸಿದ್ಧರಾಮಯ್ಯ ಸರಕಾರದ ದುರಾಡಳಿತದಿಂದ ಹೆಚ್ಚು ಹೊಡೆತ ಪಡೆದವರು ಕರಾವಳಿ ಜಿಲ್ಲೆಯವರು. ಹಾಗಾಗಿಯೇ ಇಲ್ಲಿನ ಮತದಾರ ಬಾಂಧವರು ಈ ಆಡಳಿತವನ್ನು ಕೊನೆಗೊಳಿಸಲು ಜನರು ನಿರ್ಧರಿಸಿದ್ದಾರೆ ಎಂದರು.

ಕೇಂದ್ರದಲ್ಲಿ ನರೇಂದ್ರ ಮೋದಿ ಮತ್ತು ರಾಜ್ಯದಲ್ಲಿ ಯಡಿಯೂರಪ್ಪ ಆಡಳಿತ ಜೊತೆಯಾದರೆ ಕರ್ನಾಟಕದ ಅಭಿವೃದ್ಧಿ ಮಾತ್ರವಲ್ಲ ಶಾಂತಿ, ಸುವ್ಯವಸ್ಥೆಯಿಂದ ನಾವೆಲ್ಲರೂ ಬದುಕುವ ವಾತಾವರಣ ನಿರ್ಮಾಣವಾಗುತ್ತೆ ಎಂದು ಅವರು ಹೇಳಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *