LATEST NEWS
ಕಾರ್ಕಳ : ಮೊಬೈಲ್ ರಿಪೇರಿ ಮಾಡಿಸಿ ಬರುವುದಾಗಿ ಹೇಳಿ ಹೋದವರು ಎಲ್ಲಿ ಹೋದ್ರು..!!?
ಕಾರ್ಕಳ : ಮೊಬೈಲ್ ರಿಪೇರಿ ಮಾಡಿಸಿ ಬರುವುದಾಗಿ ಹೇಳಿ ಮನೆಯಿಂದ ಹೊರಟ ವ್ಯಕ್ತಿ ಮರಳಿ ಮನೆಗೆ ಬಾರದೆ ನಾಪತ್ತೆಯಾದ ಘಟನೆ ಉಡುಪಿ ಜಿಲ್ಲೆ ಕಾರ್ಕಳ ಕಸಬಾ ಗ್ರಾಮದಲ್ಲಿ ನಡೆದಿದೆ.
ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ.ಇಲ್ಲಿನ ಕಸಬಾ ಗ್ರಾಮದ ನಿವಾಸಿ ರತ್ನಾಕರ (52) ಎಂಬವರು ಅಕ್ಟೋಬರ್ 22ರಂದು ಸಂಜೆ 7 ಗಂಟೆ ಸುಮಾರಿಗೆ ಮೊಬೈಲ್ ರಿಪೇರಿ ಮಾಡಿಸಿಕೊಂಡು ಬರುತ್ತೇನೆಂದು ಹೇಳಿ ಮನೆಯಿಂದ ಹೊರಟಿದ್ದರು . ಆದ್ರೆ ರಾತ್ರಿಯಾದ್ರೂ ವಾಪಾಸು ಮನೆಗೆ ಬಾರದೆ ರತ್ನಾಕರ ಅವರು ಏಕಾಏಕಿ ಕಾಣೆಯಾಗಿದ್ದು ಈ ಸಂಬಂಧ ರತ್ನಾಕರ ಪತ್ನಿ ಪ್ರೇಮ ಅವರು ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸಂತ ಅಲೋಶಿಯಸ್ ಕಾಲೇಜು ಎದುರು ಬಿಜೆಪಿ ಮಹಿಳಾ ಕಾರ್ಯಕರ್ತೆಯರಿಂದ ಭಜನೆ..!!