Connect with us

    LATEST NEWS

    ಕಾರ್ಕಳ – ಯುವತಿ ಪ್ರಮೀಳಾ ನಾಪತ್ತೆ

    ಉಡುಪಿ, ಫೆಬ್ರವರಿ 28 : ಕಾರ್ಕಳ ತಾಲೂಕು ಎಳ್ಳಾರೆ ಗ್ರಾಮದ ಅಸಲ್ ಜಡ್ಡು ನಿವಾಸಿ ಪ್ರಮೀಳಾ (24) ಎಂಬ ಯುವತಿಯು ಫೆಬ್ರವರಿ 24 ರಂದು ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ.


    5 ಅಡಿ ಎತ್ತರ, ಸಾಧಾರಣ ಶರೀರ, ಗೋಧಿ ಮೈಬಣ್ಣ, ದುಂಡು ಮುಖ ಹೊಂದಿದ್ದು, ಕನ್ನಡ, ತುಳು, ಇಂಗ್ಲೀಷ್ ಹಾಗೂ ಕುಡುಬಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಅಜೆಕಾರು ಪೊಲೀಸ್ ಠಾಣೆ ದೂ.ಸಂಖ್ಯೆ: 08253-271100, ಪೊಲೀಸ್ ಉಪನಿರೀಕ್ಷಕರು ಮೊ.ನಂ: 9480805470, 9480805471, ಕಾರ್ಕಳ ಪೊಲೀಸ್ ವೃತ್ತ ನಿರೀಕ್ಷಕರು ದೂ.ಸಂಖ್ಯೆ: 08258-231083, ಮೊ.ನಂ: 9480805435, ಜಿಲ್ಲಾ ಪೊಲೀಸ್ ಕಚೇರಿ ದೂ.ಸಂಖ್ಯೆ: 0820-2534777 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಅಜೆಕಾರು ಪೊಲೀಸ್ ಠಾಣೆಯ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply