LATEST NEWS
ಕಾರ್ಕಳ – ಬಾವಿಗೆ ಬಿದ್ದ ದಂಪತಿಗಳ ರಕ್ಷಣೆ ಮಾಡಿದ ಅಗ್ನಿಶಾಮಕದಳ
ಕಾರ್ಕಳ ಜನವರಿ 05: 60 ಅಡಿ ಆಳದ ಬಾವಿಯಲ್ಲಿ ಸಿಕ್ಕಿಹಾಕಿಕೊಂಡಿದ್ದ ದಂಪತಿಯನ್ನು ಕಾರ್ಕಳ ಅಗ್ನಿ ಶಾಮಕದಳದ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಕಲ್ಲೊಟ್ಟೆ ಪೆರ್ವಜೆ ರಸ್ತೆಯ ನಿವಾಸಿಗಳಾದ ಅನಿತಾ ಮಲ್ಯ (57) ಹಾಗೂ ಆಕೆ ಗಂಡ ಅಣ್ಣಪ್ಪ ಮಲ್ಯ (59) ಕೂದಲೆಳೆಯ ಅಂತರದಲ್ಲಿ ಬದುಕಿದವರು.
ಸುಮಾರು 60 ಅಡಿ ಆಳದ ಹಾಗೂ 20 ಅಡಿ ನೀರಿರುವ ಬಾವಿಗೆ ಮಹಿಳೆಯೊಬ್ಬರು ಬೆಳಿಗ್ಗೆ ಸಮಯ ಆಕಸ್ಮಿಕ ವಾಗಿ ಬಿದ್ದಿದ್ದು, ಅವರನ್ನು ರಕ್ಷಿಸಲು ಗಂಡ ಅದೇ ಬಾವಿಗೆ ಇಳಿದಿದ್ದರು ಎನ್ನಲಾಗಿದೆ.
ನೀರಿನ ಮಟ್ಟದಲ್ಲಿ ಪಂಪ್ ಪೈಪ್ ಹಿಡಿದು ಅಪಾಯದಲ್ಲಿದ್ದ ಮಹಿಳೆ ಹಾಗೂ ಅವರ ಗಂಡನನ್ನು ಕಾರ್ಕಳ ಅಗ್ನಿ ಶಾಮಕ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿ ವರು ತಕ್ಕ್ಷಣ ಕಾರ್ಯಾಚರಣೆ ನಡೆಸಿ ಮೇಲಕ್ಕೆ ಎತ್ತಿ ಪ್ರಾಣ ರಕ್ಷಣೆ ಮಾಡಿರುತ್ತಾರೆ.
ಕಾರ್ಯಚರಣೆಯಲ್ಲಿ ಅಧಿಕಾರಿಯವರಾದ ಆಲ್ಬರ್ಟ್ ಮೋನಿಸ್, ಸಹಾಯಕ ಅಗ್ನಿಶಾಮಕ ಅಧಿಕಾರಿ ಚಂದ್ರ ಶೇಖರ್ ಸಿಬ್ಬಂದಿಯವರಾದ ಹರಿಪ್ರಸಾದ್ ಶೆಟ್ಟಿಗಾರ್, ಸಂಜಯ್, ಹಸನ್ ಮುಲ್ತಾನಿ, ರವಿಚಂದ್ರ ಕೊರವರ ಭಾಗವಹಿಸಿದ್ದರು.
1 Comment