Connect with us

    LATEST NEWS

    ಕಾರ್ಕಳ : ಪತಿಯ ಅಗಲುವಿಕೆ ಜೀವನಕ್ಕೆ ಕಂಟಕವಾದ ಅನಾರೋಗ್ಯ, ಅಂಗನವಾಡಿ ಕಾರ್ಯಕರ್ತೆ ಜೀವಾಂತ್ಯ..!

    ಪತಿಯ ಅಗಲುವಿಕೆ  ಮತ್ತು ನೆಮ್ಮದಿಯ ಜೀವನಕ್ಕೆ ಕಂಟಕವಾದ ಅನಾರೋಗ್ಯದಿಂದ ಬೇಸತ್ತ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಜೀವಾಂತ್ಯ ಮಾಡಿದ ದಾರುಣ ಘಟನೆ ಉಡುಪಿ ಜಿಲ್ಲೆ ಕಾರ್ಕಳದಲ್ಲಿ ನಡೆದಿದೆ.

    ಕಾರ್ಕಳ : ಪತಿಯ ಅಗಲುವಿಕೆ  ಮತ್ತು ನೆಮ್ಮದಿಯ ಜೀವನಕ್ಕೆ ಕಂಟಕವಾದ ಅನಾರೋಗ್ಯದಿಂದ ಬೇಸತ್ತ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಜೀವಾಂತ್ಯ ಮಾಡಿದ ದಾರುಣ ಘಟನೆ ಉಡುಪಿ ಜಿಲ್ಲೆ ಕಾರ್ಕಳದಲ್ಲಿ ನಡೆದಿದೆ.

    ಮಿಯ್ಯಾರು ಅಂಗನವಾಡಿ ಕಾರ್ಯಕರ್ತೆ ಸೌಮ್ಯ (40) ಜೀವಾಂತ್ಯ ಮಾಡಿದ ಮಹಿಳೆಯಾಗಿದ್ದಾಳೆ.  ಮಿಯ್ಯಾರಿನ ತನ್ನ ಮನೆಯ ಬಾವಿಗೆ ಹಾರಿ ಸೌಮ್ಯ ಜೀವಾಂತ್ಯ ಮಾಡಿಕೊಂಡಿದ್ದಾರೆ. ಸೌಮ್ಯ ಅವರ ಪತಿ ಸಂತೋಷ್‌ ಪೂಜಾರಿ (43)  ಅನಾರೋಗ್ಯಕ್ಕೀಡಾಗಿ ಎರಡು ತಿಂಗಳ ಹಿಂದೆಯಷ್ಟೇ  ಮೃತಪಟ್ಟಿದ್ದರು. ಆ ನೋವು ಮಾಸುವ ಮುನ್ನವೇ ಕುಟುಂಬದಲ್ಲಿ ಇದೀಗ ಮತ್ತೊಂದು ದುರ್ಘಟನೆ ಸಂಭವಿಸಿದೆ. 16 ಮತ್ತು 12 ವರ್ಷದ ಇಬ್ಬರು ಪುತ್ರಿಯರು ಈಗ ಅಪ್ಪ ಅಮ್ಮ ಇಲ್ಲದೆ ಅನಾಥೆಯಾಗಿದ್ದಾರೆ.  ಕಳೆದ 20 ವರ್ಷಗಳಿಂದ ಮಿಯ್ಯಾರು ಅಂಗನವಾಡಿಯಲ್ಲಿ ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸಿದ್ದ ಸೌಮ್ಯ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲೂ ಸಕ್ರಿಯರಾಗಿದ್ದರು. ಇತ್ತೀಚೆಗೆ ತೀರಾ ಅನಾರೋಗ್ಯದಿಂದ ಕೂಡ ಬಳಲುತ್ತಿದ್ದರು ಎನ್ನಲಾಗುತ್ತಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *