LATEST NEWS
ಕಾಪು – ಸಮುದ್ರ ಪಾಲಾಗುತ್ತಿದ್ದ ಮೀನುಗಾರನನ್ನು ರಕ್ಷಣೆ ಮಾಡಿದ ಸ್ಥಳೀಯರು

ಉಡುಪಿ ಸೆಪ್ಟೆಂಬರ್ 1: ಸಾಂಪ್ರದಾಯಿಕ ಮೀನುಗಾರಿಕೆಗೆ ಬಲೆ ಇಡಲು ಸಮುದ್ರಕ್ಕೆ ಹೋಗಿ, ಸಮುದ್ರ ಪಾಲಾಗುವ ಭೀತಿಗೊಳಗಾದ ಯುವಕನನ್ನು ಸ್ಥಳೀಯ ಮಿನುಗಾರರು ರಕ್ಷಿಸಿದ ಘಟನೆ ಇಂದು ಕಾಪು ಬೀಚ್ ನಲ್ಲಿ ನಡೆದಿದೆ.
ಸಚಿನ್ ಎಂಬ ವ್ಯಕ್ತಿ ಮೀನಿಗೆ ಬಲೆ ಬೀಸುತ್ತಿದ್ದ ವೇಳೆ ಆಯತಪ್ಪಿ ಸಮುದ್ರಕ್ಕೆ (Sea) ಬಿದ್ದಿದ್ದ. ಈತನ ರಕ್ಷಣೆ ಮಾಡುವುದಕ್ಕೆ ಸತತ ಒಂದು ಗಂಟೆಗಳ ಕಾಲ ಸ್ಥಳೀಯರು ಶೋಧಕಾರ್ಯ ನಡೆಸಿದರು.
ಶರ್ಮಾ, ಹರೀಶ್, ಬಾಲಕೃಷ್ಣ ಕೋಟ್ಯಾನ್, ಚಂದ್ರಶೇಖರ್ ಎಂಬವರು ಕಾರ್ಯಾಚರಣೆ ನಡೆಸಿ ವ್ಯಕ್ತಿಯನ್ನ ರಕ್ಷಿಸಿದ್ದಾರೆ.

Continue Reading