LATEST NEWS
ಟೀಕಿಸುವವರಿಗೆ ಭೂತಾರಾಧನೆಯ ಸತ್ಯ ಅರಿವಾದಾಗ ಗೊತ್ತಾಗುತ್ತೆ – ದೇವದಾಸ್ ಕಾಫಿಕಾಡ್

ಮಂಗಳೂರು ಅಕ್ಟೋಬರ್ 19: ಭೂತಾರಾಧನೆ ಹಿಂದೂ ಧರ್ಮದ ಆಚರಣೆ ಅಲ್ಲ ಅನ್ನುವವರಿಗೆ, ನಿಜವಾದ ಸತ್ಯ ಎನು ಅಂತ ಅವರಿಗೆ ಅರಿವಾದಾಗ ಗೊತ್ತಾಗುತ್ತದೆ ಎಂದು ತುಳುರಂಗಭೂಮಿ ಕಲಾವಿದ ದೇವದಾಸ್ ಕಾಫಿಕಾಡ್ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಸಮಸ್ಯೆ ಮಾಡುವವರು ಸಮಸ್ಯೆ ಮಾಡೇ ಮಾಡುತ್ತಾರೆ. ನಮ್ಮ ಹಿರಿಯರು ನಡೆಸಿಕೊಂಡು ಬಂದಿದ್ದ ಆಚರಣೆಗೆ ಯಾವುದೇ ಧಕ್ಕೆ ಬಾರದಂತೆ, ಯಾವುದೇ ಜಾತಿಗೆ ಸಮಸ್ಯೆ ಬಾರದಂತೆ ಅಚ್ಚುಕಟ್ಟಾಗಿ ಸಿನೆಮಾ ನಿರ್ಮಿಸಿದ್ದಾರೆ. ಅದು ಯಾಕೆ ಕಾಣುತ್ತಿಲ್ಲ ಅನ್ನೊದು ಗೊತ್ತಾಗುತ್ತಿಲ್ಲ ಎಂದರು. ಕಾಂತಾರ ಸಿನೆಮಾ ಸದ್ಯದಲ್ಲೇ ತುಳುವಿನಲ್ಲಿ ಬರಲಿದ್ದು, ಜನ ಕನ್ನಡ ನೋಡಿದ್ದರೂ ಕೂಡ ತುಳುವಿನಲ್ಲಿ ಹೇಗೆ ಬರುತ್ತದೆ ಎಂದು ನೋಡಲಿದ್ದಾರೆ ಎಂದರು.
