ಕಪಾಲಬೆಟ್ಟ ಕ್ರಿಸ್ತ ಸಮುದಾಯದವರು ನೀಡಿದ ಹೆಸರು – ಐವನ್ ಡಿಸೋಜಾ
ಮಂಗಳೂರು ಜನವರಿ 4: ಕನಕಪುರದ ಕಪಾಲಬೆಟ್ಟ ಹೆಸರು ನೀಡಿದ್ದು ಕ್ರೈಸ್ತ ಸಮುದಾಯದವರು. ಕಪಾಲಬೆಟ್ಟ ಎನ್ನುವುದು ಏಸು ಕ್ರಿಸ್ತನನ್ನು ಶಿಲುಬೆಗೆ ಏರಿಸಿದ ಸ್ಥಳದ ಹೆಸರು ಎಂದು ಎಂಎಲ್ ಸಿ ಐವನ್ ಡಿಸೋಜಾ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು ಬೆಟ್ಟದ ೧೦ ಎಕರೆ ಜಾಗ ಏಸುಕ್ರಿಸ್ತನ ಪ್ರತಿಮೆ ನಿರ್ಮಾಣ ಮಾಡಲು ಸರಕಾರಕ್ಕೆ ಅರ್ಜಿ ಸಲ್ಲಿಸಲಾಯಿತು ನಂತರ ಕ್ಯಾಬಿನೆಟ್ ನಲ್ಲಿ ೮೦ ಲಕ್ಷ ನೀಡಿ ಜಾಗ ಪಡೆದುಕೊಳುವಂತೆ ಹೇಳಲಾಗಿದ್ದು, ಆದರೆ ಮೌಲ್ಯ ಹೆಚ್ಚಾದ ಕಾರಣ ಪುನಃ ಅರ್ಜಿ ಸಲ್ಲಿಸಲಾಯಿತು. ನಂತರ ೮೦ ಲಕ್ಷ ಹೆಚ್ಚಾಯಿತು ಅಂತ ಪುನಃ ಅರ್ಜಿ ಸಲ್ಲಿಸಲಾಯಿತು. ಕಪಾಲ ಬೆಟ್ಟದ ಜಾಗದ ಹಣ ನಾನು ನೀಡುತ್ತೇನೆ ಅಂತ ಡಿಕೆಶಿ ಹೇಳಿದ್ದಾರೆ. ಆದರೆ ಅದು ಬಿಜೆಪಿಗೆ ಸಹಿಸಲು ಆಗುತ್ತಿಲ್ಲ, ಹಾಗಾಗಿ ವಿರೋಧ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಜಾಗದ ಕುರಿತಂತೆ ದಾಖಲೆಗಳ ಸಹಿತ ಸಿಎಂಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಗಿದ್ದು, ಸಿಎಂ ಮುಂದೆ ನಿಂತು ಪ್ರತಿಮೆ ನಿರ್ಮಾಣ ಕೆಲಸ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿ’ ಸೋಜಾ ಹೇಳಿದ್ದಾರೆ.