Connect with us

LATEST NEWS

ವರಾಹ ರೂಪಂಗೆ ಕೋರ್ಟ್ ಗೆ ಹೋದ ಕೇರಳದಲ್ಲೂ ಕಾಂತಾರ ಭಾರೀ ಕಲೆಕ್ಷನ್

ಕೇರಳ ನವೆಂಬರ್ 17: ವರಾಹ ರೂಪಂ ಹಾಡಿಗೆ ಕೋರ್ಟ್ ಗೆ ಹೋಗಿದ್ದ ಕೇರಳದಲ್ಲೇ ಕಾಂತಾರ ಸಿನೆಮಾ ಭರ್ಜರಿ ಕಲೆಕ್ಷನ್ ಮಾಡಿದೆ. ಕೇರಳದಲ್ಲಿ ಕೆಜಿಎಫ್ ಗಿಂತಲೂ ಅಧಿಕ ಹಣ ಮಾಡಿದೆ ಎಂದು ವರದಿಯಾಗಿದೆ.


ಮಲಯಾಳಂನಲ್ಲಿ ಈ ಸಿನಿಮಾವನ್ನು ಪೃಥ್ವಿರಾಜ್ ಸುಕುಮಾರನ್ ವಿತರಣೆ ಮಾಡಿದ್ದು, ಅಂದಾಜು 20 ಕೋಟಿ ಗಳಿಕೆ ಮಾಡಿದೆ ಎಂದು ಹೇಳಲಾಗುತ್ತಿದೆ. ಕಾಂತಾರ ಸಿನಿಮಾದ ಒಟ್ಟು ಬಜೆಟ್ ಕೇರಳವೊಂದರಲ್ಲೇ ವಾಪಸ್ಸಾಗಿ, ಮೂರ್ನಾಲ್ಕು ಕೋಟಿ ರೂಪಾಯಿ ಲಾಭ ತಂದಿದೆ ಎಂದು ಲೆಕ್ಕಾಚಾರ ಹಾಕಲಾಗುತ್ತಿದೆ. ಇನ್ನೂ ಈ ಸಿನಿಮಾ ತುಂಬಿದ ಗೃಹದಲ್ಲಿ ಪ್ರದರ್ಶನ ಕಾಣುತ್ತಿರುವುದರಿಂದ ಮತ್ತಷ್ಟು ದುಡ್ಡು ಹರಿದು ಬರಲಿದೆ.

ಕನ್ನಡ ಸಿನಿಮಾವೊಂದರು ದೇಶದ ಬಹುತೇಕ ಭಾಷೆಗಳಲ್ಲಿ ಯಶಸ್ಸು ಕಂಡಿದ್ದು ತೀರಾ ಕಡಿಮೆ. ಇತ್ತೀಚಿನ ದಿನಗಳಲ್ಲಿ ಕೆಜಿಎಫ್ 2 ಸಿನಿಮಾ ರಿಲೀಸ್ ಆದ ಅಷ್ಟೂ ಭಾಷೆಗಳಲ್ಲೂ ಚೆನ್ನಾಗಿಯೇ ದುಡ್ಡು ಮಾಡಿತ್ತು. ನಂತರದ ಸ್ಥಾನ ಕಾಂತಾರ ಚಿತ್ರಕ್ಕೆ ಸಿಕ್ಕಿದೆ. ಅಲ್ಲದೇ, ಈ ಸಿನಿಮಾದ ಯಶಸ್ಸು ರಿಷಬ್ ಶೆಟ್ಟಿಗೂ ನ್ಯಾಷನಲ್ ಸ್ಟಾರ್ ಪಟ್ಟ ತಂದು ಕೊಟ್ಟಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *