Connect with us

KARNATAKA

ಮಾಧ್ಯಮಗಳಲ್ಲಿ ಬರುವ ರೀತಿ ಯಾವುದೇ ವೈರಸ್ ಸಮಸ್ಯೆ ಚೀನಾದಲ್ಲಿ ಇಲ್ಲ – ಚೀನಾದಲ್ಲಿರುವ ಕನ್ನಡಿಗರ ಮಾತು

ಬೆಂಗಳೂರು ಜನವರಿ 06: ದೇಶದ ಮಾಧ್ಯಮಗಳಲ್ಲಿ ಈಗ ಎಚ್ ಎಂಪಿವಿ ವೈರಸ್ ನದ್ದೆ ಸುದ್ದಿ, ಯಾವುದೇ ಚಾನೆಲ್ ನಲ್ಲಿ ಚೀನಾದ ವಿಡಿಯೋ ಒಂದನ್ನು ಬಳಸಿಕೊಂಡು ಚೀನಾದಲ್ಲಿ ಎಚ್ ಎಂಪಿವಿ ವೈರಸ್ ನಿಂದಾಗಿ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ ಎಂದು ತೋರಿಸಲಾಗುತ್ತಿದೆ. ಆದರೆ ಅಲ್ಲಿನ ಪರಸ್ಥಿತಿ ಬಗ್ಗೆ ಚೀನಾದಲ್ಲಿರುವ ಭಾರತೀಯರು ವಿಡಿಯೋ ಮಾಡಿ ಅಪ್ಡೇಟ್ ಕೊಡುತ್ತಿದ್ದಾರೆ. ಚೀನಾದಲ್ಲಿರುವ ಕನ್ನಡಿಗರೂ ಕೂಡ ಯಾವುದೇ ಆತಂಕ ಪಡುವ ಸ್ಥಿತಿ ಇಲ್ಲ ಎಂದು ಹೇಳುತ್ತಿದ್ದಾರೆ.


ಚೀನಾದಲ್ಲಿ ಎಚ್ಎಂಪಿವಿ ಎಂಬ ವೈರಸ್ ನಿಂದಾಗಿ ಅಲ್ಲಿನ ಆಸ್ಪತ್ರೆಗಳು ಜನರಿಂದ ತುಂಬಿದೆ ಎಂಬ ಸುದ್ದಿ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆಸ್ಪತ್ರೆಯಲ್ಲಿ ಜನರಿರುವ ವಿಡೋಯ ವೈರಲ್ ಆದ ಬೆನ್ನಲ್ಲೇ ಕೊರೊನಾ ರೀತಿಯಲ್ಲೇ ಈ ವೈರಸ್ ಮಾರಕ ಎಂದು ಸುದ್ದಿಯಾಗುತ್ತಿದೆ. ಆದರೆ ಮಾಧ್ಯಮಗಳಲ್ಲಿ ಆಗುತ್ತಿರುವ ಸುದ್ದಿಗೂ ಚೀನಾದಲ್ಲಿನ ಪರಿಸ್ಥಿತಿಗೂ ಭಿನ್ನವಾಗಿದೆ ಎಂದು ಚೀನಾದಲ್ಲಿರುವ ಭಾರತೀಯರು ಹೇಳುತ್ತಿದ್ದಾರೆ.


ಚೀನಾದರುವ ಕನ್ನಡಿಗರಾದ ಶಶಿ ಅವರು ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ವಿಡಿಯೋ ಮಾಡಿ ಚೀನಾದ ಪರಿಸ್ಥತಿಯನ್ನು ವಿವರಿಸಿದ್ದಾರೆ. ಅಲ್ಲದೆ ಚೀನಾದಲ್ಲಿ ಯಾವುದೇ ಎಚ್ ಎಂಪಿವಿ ವೈರಸ್ ಹಾವಳಿ ಇಲ್ಲ. ಇಲ್ಲಿ ಎಲ್ಲವೂ ನಾರ್ಮಲ್ ಆಗೆ ಇದೆ ಎಂದು ಹೇಳಿದ್ದಾರೆ. ಅಲ್ಲದೆ ಜನ ಮಾಸ್ಕ್ ಕೂಡ ಧರಿಸದೇ ಸಂಚರಿಸುತ್ತಿದ್ದಾರೆ ಎಂದಿದ್ದಾರೆ. ತಮ್ಮ ವಿಡಿಯೋದಲ್ಲಿ ಆಸ್ಪತ್ರೆಯೊಂದರ ಸ್ಥಿತಿಯನ್ನು ತೋರಿಸಿದ್ದು, ದೇಶದ ಮಾಧ್ಯಮಗಳಲ್ಲಿ ಬರುವ ಸುದ್ದಿ ಸುಳ್ಳು ಎಂದಿದ್ದಾರೆ.

ಮತ್ತೊಬ್ಬರು ಕನ್ನಡತಿ ಅಸೀಮಾ ಧೋಳ ಅವರು ಕೂಡ ಚೀನಾದ ವುಹಾನ್ ನಲ್ಲಿ ಕೆಲಸದಲ್ಲಿದ್ದಾರೆ. ಅವರೂ ಕೂಡ ವಿಡಿಯೋ ಒಂದನ್ನು ಮಾಡಿ ಅಲ್ಲಿನ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ಆದರೆ ದೇಶದ ಮಾಧ್ಯಮಗಳು ಮಾತ್ರ ಚೀನಾದ ಸ್ಥಿತಿಯ ಬಗ್ಗೆ ತಮಗೆ ಗೊತ್ತಿಲ್ಲದ ಸುದ್ದಿಗಳನ್ನು ಬಿತ್ತರಿಸುತ್ತಿದ್ದಾರೆ. ಅಂತರಾಷ್ಟ್ರೀಯ ಮಾಧ್ಯಮಗಳಾದ ಬಿಬಿಸಿ ಹಾಗೂ ಸಿಎನ್ಎನ್ ನಲ್ಲಿ ಎಚ್ಎಂಪಿವಿ ವೈರಸ್ ಬಗ್ಗೆ ಯಾವುದೇ ಸುದ್ದಿ ಬಂದಿಲ್ಲ. ಕೇವಲ ಕನ್ನಡಿಗರೂ ಮಾತ್ರವಲ್ಲ ದೇಶದ ಬೇರೆ ಬೇರೆ ರಾಜ್ಯಗಳಿಂದ ಚೀನಾಗೆ ತೆರಳಿ ಅಲ್ಲಿ ಕೆಲಸ ನಿರ್ವಹಿಸುತ್ತಿರುವವರು ಕೂಡ ವಿಡಿಯೋ ಮಾಡಿ ಚೀನಾದ ಸ್ಥಿತಿ ಬಗ್ಗೆ ಮಾಹಿತಿ ನೀಡಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *