LATEST NEWS
ಮಗಾ.. ಪ್ರಸಿದ್ಧ್.. ಪ್ರಸಿದ್ಧ್.. ಹೀಗೆ ಇರಲಿ.. ಇಂಗ್ಲೆಂಡ್ ವಿರುದ್ದ ಟೆಸ್ಟ್ ಮ್ಯಾಚ್ ನಲ್ಲಿ ಕನ್ನಡ ಮಾತು ವಿಡಿಯೋ ವೈರಲ್

ಇಂಗ್ಲೆಂಡ್ ಜೂನ್ 25: ಇಂಗ್ಲೆಂಡ್ ನ ಲೀಡ್ಸ್ ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ನ ವಿರುದ್ದದ ಮೊದಲ ಟೆಸ್ಟ್ ಪಂದ್ಯದ ಕೊನೆಯ ದಿನ ಕೆಎಲ್ ರಾಹುಲ್ ಮತ್ತು ಪ್ರಸಿದ್ದ ಕೃಷ್ಣ ಅವರು ಮೈದಾನದಲ್ಲಿ ಕನ್ನಡದಲ್ಲಿ ಮಾತನಾಡಿದ ವಿಡಿಯೋ ಇದೀಗ ವೈರಲ್ ಆಗಿದೆ.
ಇಂಗ್ಲೆಂಡ್ ಮತ್ತು ಭಾರತದ ನಡುವೆ ನಡೆಯುತ್ತಿರುವ ಮೊದಲನೇ ಟೆಸ್ಟ್ ಪಂದ್ಯದ ಕೊನೆಯ ದಿನದ ಆಟದ ವೇಳೆ ಪ್ರಸಿದ್ದ ಕೃಷ್ಣ ಬೌಲಿಂಗ್ ಮಾಡುತ್ತಿದ್ದರು, ಈ ವೇಳೆ ಕೆ ಎಲ್ ರಾಹುಲ್ ಅವರು ಪ್ರಸಿದ್ದ ಕೃಷ್ಣನ ಜೊತೆ ಕನ್ನಡದಲ್ಲೇ ಮಾತನಾಡಿದ್ದಾರೆ.

ಮಗಾ.. ಪ್ರಸಿದ್ಧ್.. ಪ್ರಸಿದ್ಧ್.. ಹೀಗೆ ಇರಲಿ.. ಒಂದು ಹೋದರೆ ಪರ್ವಾಗಿಲ್ಲ ಎನ್ನುತ್ತಾರೆ.. ಆಗ ಪ್ರಸಿದ್ಧ್ ಕೃಷ್ಣ ಪ್ರತಿಕ್ರಿಯಿಸಿ.. ಒಳಗಡೆ ಬೌಲಿಂಗ್ ಮಾಡಲು ಪ್ರಯತ್ನ ಮಾಡ್ತಿದ್ದೀನಿ ಅಂತಾರೆ. ಅದಕ್ಕೆ ಮತ್ತೆ ಕನ್ನಡದಲ್ಲೇ ತಿಳಿ ಹೇಳುವ ರಾಹುಲ್.. ಬೇಡ, ಬೇಡ. ಚೆನ್ನಾಗಿ ಹೋಗ್ತಿದೆ. ಅಲ್ಲೇ ಇರಲಿ ಎನ್ನುತ್ತಾರೆ. ಈ ವಿಡಿಯೋ ಕನ್ನಡಿಗರಿಗೆ, ಕನ್ನಡ ಅಭಿಮಾನಿಗಳಿಗೆ ಕೇಳಲು ತುಂಬಾ ಖುಷಿ ನೀಡ್ತಿದೆ..
ಅಂದ್ಹಾಗೆ ಮೊದಲ ಟೆಸ್ಟ್ನಲ್ಲಿ ಟೀಂ ಇಂಡಿಯಾ ಸೋಲನ್ನು ಕಂಡಿದೆ. ಇಂಗ್ಲೆಂಡ್ ಐದು ವಿಕೆಟ್ಗಳ ಜಯ ಸಾಧಿಸಿ, ಐದು ಪಂದ್ಯಗಳಲ್ಲಿ 1-0 ಮುನ್ನಡೆಯನ್ನು ಸಾಧಿಸಿದೆ. ಎರಡನೇ ಟೆಸ್ಟ್ ಪಂದ್ಯವು ಜುಲೈ 2 ರಿಂದ ಆರಂಭವಾಗಲಿದೆ.
ನೋಡ.. ನೋಡ… ಎಷ್ಟು ಚಂದ ಅಲಾ..
ನಮ್ಮ ಹುಡುಗರ ಬಾಯಲ್ಲಿ ಕನ್ನಡ ಕೇಳೋಕೆ ಎಷ್ಟು ಇಂಪಾಗಿದೆ, ಅಲ್ವಾ! ❤
ವೀಕ್ಷಿಸಿ | #ENGvIND | 1st Test | Day 5 | LIVE NOW | ನಿಮ್ಮ JioHotstar ನಲ್ಲಿ#TeamIndia #KLRahul #PrasidhKrishna pic.twitter.com/I0Q1aPl9dH
— Star Sports Kannada (@StarSportsKan) June 24, 2025