Connect with us

    FILM

    ಕನ್ನಡ ಬಿಗ್ ಬಾಸ್ ಸೀಸನ್ 11ರ ಲೋಗೋ ಅನಾವರಣ

    ಬೆಂಗಳೂರು ಸೆಪ್ಟೆಂಬರ್ 02: ಕನ್ನಡ ಕಿರುತೆರೆಯ ಬಹುದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡದ 11ನೇ ಆವೃತ್ತಿಯ ಲೋಗೋ ಅನಾವರಣಗೊಂಡಿದ್ದು, ಸದ್ಯದಲ್ಲೇ ಶೋ ಪ್ರಾರಂಭವಾಗಲಿದೆ ಎಂದು ಹೇಳಲಾಗಿದೆ.


    ಈಗಾಗಲೇ ಬಿಗ್ ಬಾಸ್ 11 ರ ಆವೃತ್ತಿಗೆ ನಿರೂಪಕರು ಯಾರಾಗಲಿದ್ದಾರೆ ಎಂಬ ಕುತೂಹಲ ಇದ್ದು, ಸುದೀಪ್ ಅವರೇ ಮುಂದುವರೆಯಲಿದ್ದಾರೆ ಎನ್ನುವುದು ಕಾದು ನೋಡಬೇಕಾಗಿದೆ. ಹೊಸ ಆವೃತ್ತಿಯ ಲೋಗೊವನ್ನು ಕಲರ್ಸ್ ಕನ್ನಡ ತನ್ನ ಇನ್‌ಸ್ಟಾಗ್ರಾಂ ಪುಟದಲ್ಲಿ ಹಂಚಿಕೊಂಡಿದೆ. ಕಿರುತೆರೆಯಲ್ಲಿ ಸುದ್ದಿಯಲ್ಲಿರುವ ಕೆಲ ನಟ, ನಟಿಯರು, ಸದ್ದು ಮಾಡುತ್ತಿರುವ ಪತ್ರಕರ್ತರು ಮತ್ತು ಇತರರ ಹೆಸರುಗಳು 11ನೇ ಆವೃತ್ತಿಗೆ ಕೇಳಿಬರುತ್ತಿದೆ. ಶೋ ಆರಂಭವಾದ ಬಳಿಕವಷ್ಟೇ ಕುತೂಹಲಕ್ಕೆ ತೆರೆಬೀಳಲಿದೆ.

    Share Information
    Advertisement
    Click to comment

    You must be logged in to post a comment Login

    Leave a Reply